ಜಿಲ್ಲಾ ಸುದ್ದಿಗಳು
ಭಟ್ಕಳ:
ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಧರಣಿ ನಡೆಸಿ ಸುಸೂತ್ರವಾಗಿ ಅಧಿವೇಶನ ನಡೆಸಲು ಬಿಡದೇ ಜನರ ತೆರಿಗೆ ಹಣ ಪೋಲು ಮಾಡಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಭಟ್ಕಳ ಹಳೇ ತಹಸೀಲ್ದಾರ್ ಕಚೇರಿ ಹಿಂಬದಿಗಿರುವ ಮೈದಾನದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಯೋಜಿಸಿದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಮಸ್ಯೆ ಸೃಷ್ಟಿಸುತ್ತಿದ್ದು, ಬಗೆಹರಿಸಲು ಮನಸ್ಸಿಲ್ಲ. ಸಚಿವ ಈಶ್ವರಪ್ಪನವರ ಹೇಳಿಕೆಯನ್ನೇ ಸದನದಲ್ಲಿ ದೊಡ್ಡದಾಗಿ ಬಿಂಬಿಸಿ ಅಹೋರಾತ್ರಿ ಧರಣಿನಡೆಸಿ ಅಂತ್ಯಾಕ್ಟರಿ ಹಾಡಿನ ಮೂಲಕ ನಾಟಕೀಯವಾಗಿ ವರ್ತಿಸಿ ಅಧಿವೇಶ ನಡೆಯಲು ಬಿಡದೇ, ಯಾವುದೇ ಚರ್ಚೆಗೂ ಅವಕಾಶ ಕೊಡದೇ ದಿನಕ್ಕೆ ೨ ಕೋಟಿ ಜನರ ತೆರಿಗೆ ಹಣ ಪೋಲು ಮಾಡಿದೆ ಎಂದು ಆರೋಪಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವುದನ್ನು ಬಿಟ್ಟು ಸಮಸ್ಯೆ ಜೀವಂತವಾಗಿರಿಸಿ ರಾಜಕಾರಣ ಮಾಡಲು ಹೊರಟಿದೆ, ಕಾಂಗ್ರೆಸ್ ನೀಚ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿ, ಸಮಸ್ಯೆ ಬಗ್ಗೆ ಚರ್ಚೆ ಆಗಿಲ್ಲ. ಬಿಜೆಪಿ ಸರಕಾರಕ್ಕೆ ತೊಂದರೆ ಕೊಡುವುದೇ ಕಾಂಗ್ರೆಸ್‌ನ ಏಕೈಕ ಉದ್ದೇಶವೆಂದಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ. ೪ರಂದು ಜನಪರ ಬಜೆಟ್ ಮಂಡಿಸುವುದರ ಮೂಲಕ ಕಾಂಗ್ರೆಸ್‌ಗೆ ಸೂಕ್ತ ಉತ್ತರ ಕೊಡಲಿದ್ದಾರೆ. ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಗ್ಗೆ ಕಾಂಗ್ರೆಸ್ ಸದನದಲ್ಲಿ ಚಕಾರ ಎತ್ತಲಿಲ್ಲ. ಬಿಜೆಪಿ ಹಿಂದೂ ಸಮಾಜದ ಜೊತೆಗೆ ಸದಾ ಇದೆ ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನರೇ ಸೂಕ್ತ ಪಾಠ ಕಲಿಸಲಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ದಿನದಿಂದಲೂ ಕಾಂಗ್ರೆಸ್ ಬಿಜೆಪಿ ಸರಕಾರದ ಯಶಸ್ಸಿಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದೆ. ಬಿಜೆಪಿಗೂ ಹಿಜಾಬ್‌ಗೂ ಯಾವುದೇ ಸಂಬAಧವಿಲ್ಲ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ತನ್ನನೆಲೆ ಭದ್ರಪಡಿಸಿಕೊಳ್ಳಲು ಹಾಗೂ ಮುಂದಿನ ಚುನಾವಣೆ ದೃಷ್ಟಿಯಿಂದ ಹಿಜಾಬ್ ವಿಷಯವನ್ನು ದೊಡ್ಡದು ಮಾಡಿ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ಸಿಗರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.
ಬಿಜೆಪಿ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಉಪದೇಶ ಬಿಜೆಪಿಗೆ ಬೇಕಿಲ್ಲ. ರಾಷ್ಟ್ರ ರಾಷ್ಟ್ರಧ್ವಜದ ಬಗ್ಗೆ ನಮಗೆ ಕಾಂಗ್ರೆಸ್ ಪಾಠ ಮಾಡುವುದು ಬೇಡ ಎಂದ ಅವರು ಶಿವಮೊಗ್ಗದ ಹರ್ಷ ಹತ್ಯೆಗೆ ಕಾಂಗ್ರೆಸ್ಸಿಗರ ಹೇಳಿಕೆ, ನಡುವೆಯೇ ಕಾರಣವಾಗಿದೆ. ಹರ್ಷ ಹತ್ಯೆಯ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು ಎಂದು ಅವರು ಹೇಳಿದರು.
ಬಿಜೆಪಿಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ ಸ್ವಾಗತಿಸಿ ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಭಟ್ಕಳದ ಉಸ್ತುವಾರಿ ಪ್ರಶಾಂತ ನಾಯ್ಕ, ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ನಾಯ್ಕ ಜಾಲಿ, ಭಟ್ಕಳ ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷರಾಜೇಶನಾಯ್ಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಸದಸ್ಯ ಮುಕುಂದನಾಯ್ಕ ಉಪಸ್ಥಿತರಿದ್ದರು. ಭಟ್ಕಳ: ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ ವಂದಿಸಿದರು.
Be the first to comment