ಮಕ್ಕಳಲ್ಲಿ ಶಿಕ್ಷಣ, ಸಂಸ್ಕøತಿ, ಆರೋಗ್ಯ ಅಗತ್ಯ : ಆನಂದಿಬೆನ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ವಿದ್ಯಾರ್ಜನೆಯ ಜೊತೆಗೆ ದೇಶದ, ರಾಜ್ಯದ ಸಂಸ್ಕøತಿ, ಪರಂಪರೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮಿಕೊಳ್ಳುವ ಅಗತ್ಯವಿದೆ ಎಂದು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹೇಳಿದರು.
ನವನಗರದ ತೇಜಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಂದು ಪ್ರತಿಷ್ಠಿತ ತೇಜಸ್ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಗಂಡು, ಹೆಣ್ಣು ಬೇಧ ವಿಲ್ಲದೇ ಶಿಕ್ಷಣ, ಜೊತೆಗೆ ಸಂಸ್ಕøತಿ, ಆರೋಗ್ಯ ಎಲ್ಲರಿಗೂ ಸಮಾನವಾಗಿ ದೊರೆಯಬೇಕಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚು ಶಿಕ್ಷಣ ನೀಡುವ ಅಗತ್ಯವಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿಗಳು ಹೆಚ್ಚು ಅಭಿವೃದ್ದಿಗೊಳ್ಳಬೇಕಿದೆ ಎಂದರು.

ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು ಕಂಡುಬರುತ್ತಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಕನಿಷ್ಠ 6 ತಿಂಗಳಿಗೆ ಒಮ್ಮೆ ಪ್ರವಾಸಿ ತಾಣ, ನಿಸರ್ಗ ಪರಿಸರದೆಡೆಗೆ ಕೊಂಡೊಯ್ಯುವದರಿಂದ ಮಕ್ಕಳಲ್ಲಿ ಮನೋವಿಕಾಸ ವೃದ್ದಿಯಾಗುತ್ತದೆ. ಭಾರತದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪದ್ದತಿ ಹೇಗಿರಬೇಕು ಎಂಬುದಕ್ಕೆ ಬೆಂಗಳೂರಿನ ಕಾರ್ಯಕ್ರಮ ಒಂದು ನಿರ್ದಶನವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೇಗೆ ಬೆಳೆಯಬೇಕು, ಯುವ ಪೀಳಿಗೆ ಮುಂದೆ ಹೇಗೆ ಅಭಿವೃದ್ದಿ ಹೊಂದಬೇಕು, ರೈತರ ಅಭಿವೃದ್ದಿಯ ಬಗ್ಗೆ ಪ್ರಧಾನಮಂತ್ರಿಗಳು ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಾ, ಸಕ್ಕರೆ ಕಾರ್ಖಾನೆಗಳು ಇಡೀ ರಾಷ್ಟ್ರದಲ್ಲಿಯೇ ಹೆಚ್ಚಿನ ಖ್ಯಾತಿ ಪಡೆದಿವೆ. ಸಕ್ಕರೆ ಕಾರ್ಖಾನೆಗಳ ಇತರೆ ಉತ್ಪನ್ನಗಳು ಸಹ ಹೊಸ ಹೊಸ ಪದ್ದತಿ ಅಳವಡಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಸಕ್ಕರೆಯ ಜೊತೆಗೆ ಎಥನಾಲ್, ಸಿಎನ್‍ಜಿ ಸೇರಿದಂತೆ 12 ಸಹ ಉತ್ಪಾದನೆಗಳನ್ನು ತಯಾರಿಸುತ್ತಿದ್ದಾರೆ. ಇಂಥ ಉತ್ಪಾದನೆಗಳ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ಆಗಬೇಕು. ಸಗಣಿಯ ಉಪಯೋಗ ಹೆಚ್ಚಾಗಬೇಕಿದೆ. ಸಗಣಿಯಿಂದ ಅನೇಕ ಉತ್ಪನ್ನಗಳನ್ನು ತಯಾರಿಕೆಯಿಂದ ಆರ್ಥಿಕ ಅಭಿವೃದ್ದಿ ಆಗುತ್ತದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ ಶಿಕ್ಷಕಿಯಾಗಿ ಶಿಕ್ಷಣದ ಗುಣಮಟ್ಟ, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಈಗ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮಾತೃ ಸ್ವರೂಪಿಣಿ ಆನಂದಿಬೇನ್ ಪಟೇಲ್ ಓರ್ವ ಪರಿಪೂರ್ಣ ಮಹಿಳೆಯಾಗಿದ್ದು, ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅನುಭವಿ ಹೊಂದಿರುವ ಆನಂದಿಬೆನ್ ಅವರು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಕನಸು ಹೊತ್ತಿದವರಾಗಿದ್ದಾರೆ ಎಂದರು.

ಅವರ ಆಗಮದಿಂದ ಜಿಲ್ಲೆಯ ಮಹಿಳೆಯರ ಮಕ್ಕಳ ಸ್ಪೂರ್ತಿ ತುಂಬಲೆಂಬ ದೃಷ್ಟಿಯಿಂದ ಜಿಲ್ಲೆಗೆ ಕರೆತರಲಾಗಿದ್ದು, ಅವರ ಪ್ರೇರಣೆಯಿಂದ ಮುಂಬರುವ ದಿನಗಳಲ್ಲಿ ನಿರಾಣಿ ಉದ್ಯಮ ಸಮೂಹದಿಂದ ಒಂದು ಕಾರ್ಖಾನೆಗಳಿಂದ ಪ್ರಾರಂಭಗೊಂಡ ಉದ್ಯಮ 100 ಕಾರ್ಖಾನೆ ಸ್ಥಾಪಿಸುವತ್ತ ಮುನ್ನಡೆಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯನ್ನು ಮೈಸೂರು ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.

ದಾವಣಗೇರೆ ಸಂಸದ ಸಿದ್ದೇಶ್ವರ ಮಾತನಾಡಿ ಕೇವಲ ಒಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಪ್ರಾರಂಭದಲ್ಲಿ 500 ರಿಂದ ಇಂದು ಲಕ್ಷಾಂತರ ಟನ್ ಕಬ್ಬು ನುರಿಸುತ್ತಿದ್ದಾರೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಎಥನಾಲ್ ಉತ್ಪಾಧಿಸುವ ಮೂಲಕ ಏಶಿಯಾ ಖಂಡದಲ್ಲಿಯೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಗೆ ಅಪಾರ ಕೊಡುವ ನೀಡಿದ್ದಾರೆ. ಅನೇಕ ಅಭಿವೃದ್ದಿ ಕೆಲಸಗಳನ್ನು ಸಹ ಮಾಡಿದ್ದಾರೆ. ಇದಕ್ಕೆ ಅವರ ಕುಟುಂಬದ ಎಲ್ಲ ಸದಸ್ಯರು ಸಾತು ನೀಡುತ್ತಿದ್ದಾರೆಂದರು.

ದಿವ್ಯ ಸ್ಥಾನ ವಹಿಸಿದ್ದ ವಚನಾನಂದ ಶ್ರೀಗಳು ಆಶೀರ್ಚಜನ ನೀಡಿದರು. ಕಾರ್ಯಕ್ರದಲ್ಲಿ ತೇಜಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ನಾರಾಯಣಸಾ ಭಾಂಡಗೆ ಸೇರಿದಂತೆ ವಿಜಯ ನಿರಾಣಿ, ಮಾದುರಿ ಮುಧೋಳ, ಅನಾರಿಬೇನ್, ಶಹ, ಭಗವಾನದಾಸ್ ಜಾಜು ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*