ಕೋಟತಟ್ಟು ಕೊರಗ ಕಾಲೋನಿಯಲ್ಲಿ ಮೆಹಂದಿ ಸಂಭ್ರಮ – ಪೊಲೀಸರಿಂದ ಅಡ್ಡಿ ಕೊರಗ ಸಮುದಾಯದವರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ವರದಿ : ಇಬ್ರಾಹಿಂ ಕೋಟ ಕುಂದಾಪುರ

ಜಿಲ್ಲಾ ಸುದ್ದಿಗಳು 

ಕೋಟ

ಬ್ರಹ್ಮಾವರ ತಾಲೂಕಿನ ಕೋಟತಟ್ಟು ಬಾರಿಕೆರೆ ಕೊರಗ ಕಾಲೋನಿಯಲ್ಲಿ ತಡರಾತ್ರೆವರೆಗೂ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ವಿದ್ಯಮಾನವು ಡಿ.27ರ ತಡ ರಾತ್ರಿ ನಡೆದಿದೆ.ಕಾಲೊನಿಯಲ್ಲಿ ರಾತ್ರಿ ಆಯೋಜಿಸಲಾದ ರಾಜೇಶ್ ಎನ್ನುವವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಲಾಗಿತ್ತು. ಕಾರ್ಯಕ್ರಮಕ್ಕೆ ರಂಗೇರುತ್ತಿದ್ದಂತೆ ನಡುರಾತ್ರಿಯಾದರೂ ಡಿ ಜೆ ಸಂಗೀತ ನಿಲ್ಲಲಿಲ್ಲ. ಅದರ ವಿಪರೀತ ಶಬ್ದದಿಂದ ಅಕ್ಕ ಪಕ್ಕದವರಿಗೆ ಕಿರಿಕಿರಿ ಉಂಟಾದ್ದರಿಂದ ಕೋಟ ಪೊಲೀಸರಿಗೂ ದೂರು ಹೋಯಿತು. ಸ್ಥಳೀಯರಿಂದ ಪೊಲೀಸ್ ಠಾಣೆಗೆ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಎರಡು ಬಾರಿ ಹೋಗಿ ಡಿಜೆ ಬಂದ್ ಮಾಡಲು ತಿಳಿಸಿದ್ದರು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿಕೋಟ ಠಾಣಾಧಿಕಾರಿ ಸಂತೋಷ್ ಬಿಪಿ ನೇತೃತ್ವ ತಂಡವು ಸ್ಥಳಕ್ಕೆ ತೆರಳಿ ಡಿಜೆ ಬಂದ್ ಮಾಡುವಂತೆ ವಿನಂತಿಸಿದರು. ಇದರಿಂದ ಕೋಪಗೊಂಡ ಸಮುದಾಯದವರು ಎಲ್ಲಾ ಕಡೆ ಮೆಹಂದಿ ಕಾರ್ಯಕ್ರಮ ನಡೆಯುತ್ತದೆ, ಅವರಿಗೆ ಏನು ಹೇಳಲ್ಲ ಆದ್ರೆ ನಮ್ಮ ಸಮುದಾಕ್ಕೆ ಏಕೆ ಅಡ್ಡಿ ಪಡಿಸುತ್ತೀರಿ ? ನಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವೆ ಎಂದು ಪೊಲೀಸರ ಮನವಿಯನ್ನೂ ಧಿಕ್ಕರಿಸಿದರು. ಅಲ್ಲಿದ್ದ ಜನರು ಕರ್ತವ್ಯ ನಿರತ ಪೊಲೀಸರನ್ನು ಸುತ್ತುವರಿದು ಮಾತಿಗೆ ಮಾತು ಬೆಳೆದು ಉದ್ರಿಗ್ನ ಪರಿಸ್ಥಿತಿ ಉಂಟಾಯಿತು. 

CHETAN KENDULI

ಪರಿಸ್ಥಿತಿ ಕೈ ಮೀರಿ ಹಲ್ಲೆ ನಡೆಯುವುದನ್ನು ಮನಗಂಡ ಪೊಲೀಸರು ಗುಂಪು ಚದುರಿಸಲು ಲಘು ಲಾಠಿ ಚಾರ್ಜ್ ಮಾಡಿದರು. ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಯಿತು.ಇದರಿಂದ ರೊಚ್ಚಿಗೆದ್ದ ಕೊರಗ ಸಮುದಾಯದವರು ರಾತ್ರಿ ಕೋಟ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡವರನ್ನು ಬಿಡುಗಡೆ ಮಾಡುವಂತೆ ಅಗ್ರಹಿಸಿದರು.  ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಬಾಸಿ, ಹಾಗೂ ಹಲವರೊಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕ ಶಾಂತಿಭಂಗದ ಬಗ್ಗೆ ಕೇಸು ದಾಖಲಿಸಿ, ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿ ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದರು.ಈ ಸಂದರ್ಭ ಲಾಠಿ ಚಾರ್ಜ್ ಯಿಂದ ಹಲವರಿಗೆ ಗಾಯವಾಗಿದ್ದು ಗಾಯ ಗೊಂಡವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಬಾಸಿ, ದಲಿತ ಮುಖಂಡ ಶಾಮ್ ಸುಂದರ್ ತೆಕ್ಕಟ್ಟೆ, ಕೋಟತಟ್ಟು ಗ್ರಾ. ಪಂ. ಸದಸ್ಯ ಪ್ರಮೋದ್ ಹಂದೆ, ಸತೀಶ್ ಬಾರಿಕೆರೆ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶಂಕರ್ ಕೋಟ , ಹಿಂದೂ ಜಾಗರಣ ವೇದಿಕೆಯ ಮುಖಂಡ ಬಾರಿಕೆರೆ ರತ್ನಾಕರ ಪೂಜಾರಿ, ಹಾಗೂ ನಾಗೇಂದ್ರ ಪುತ್ರನ್ ಸ್ಥಳದಲ್ಲಿದ್ದರು

 *ಪೊಲೀಸರಿಂದ ಹಲ್ಲೆಗೊಳಗಾದ ಮಹಿಳೆಯಿಂದ ದೂರು :* 

ಎಲ್ಲರೂ ಮೆಹಂದಿ ಸಂಭ್ರಮದಲ್ಲಿ ಇದ್ದಾಗ ಏಕಾಕಿ ಪೊಲೀಸರು ಬಂದು ಡಿಜೆ ಬಂದ್ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹೇಳಿದರು, ವಿಷೆಯ ಕೇಳುದರೊಳಗೆ ಅಲ್ಲಿದ್ದ ಹೆಂಗಸರು ಮಕ್ಕಳನ್ನು ನೋಡದೆ ಎಲ್ಲರಿಗೂ ಲಾಠಿಯಿಂದ ಹೊಡೆಯಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಮದುಮಗನಿಗೂ ಸಹ ಹಲ್ಲೆ ಮಾಡಲಾಯಿತು. ಇದರಿಂದ ಮದುಮಗನ ಬೆರಳಿಗೆ ಪೆಟ್ಟಾಗಿರುತ್ತದೆ. ಹೆಂಗಸರಿಗೆ ಲಾಠಿಯಿಂದ ಹೊಡೆದು ಹಲ್ಲೆ ಮಾಡಲಾಗಿದೆ, ಯಾವುದೇ ಲೇಡಿಸ್ ಪೊಲೀಸ್ ಇಲ್ಲದೆ ಮನೆಗೆ ನುಗ್ಗಿದ್ದಾರೆ ಎಂದು ಆರೋಪಿಸಿ ನಮಗೆ ನ್ಯಾಯ ಬೇಕು ಎಂದು ಕೇಳಿಕೊಂಡರು.ಮಾಧ್ಯಮರೊಂದಿಗೆ *ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಮಾತನಾಡಿ* ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕೊರಗ ಸಮುದಾಯದವರಿಗೆ ನ್ಯಾಯ ಒದಗಿಸುತ್ತೇನೆ. ಅಲ್ಲದೆ ಯಾರು ತಪ್ಪಿತಸ್ಥ ಇದ್ದಾರೆ ಅವರ ಮೇಲೆ ಕ್ರಮ ಕೈ ಗೊಳ್ಳುತ್ತೇನೆ ಎಂದು ಹೇಳಿದರು.

 *ದಲಿತ ಸಂಘರ್ಷದ ಮುಖಂಡ ಶಾಮ್ ಸುಂದರ್ ತೆಕ್ಕಟ್ಟೆ* ಮಾತನಾಡಿ ಕೋಟತಟ್ಟು ಕೊರಗ ಕಾಲೋನಿಯದಲ್ಲಿ ರಾಜೇಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದರಿಂದ ಬಂದ್ ಮಾಡುವಂತೆ ಕೋಟ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಹೆಂಗಸು ಮಕ್ಕಳು ನೋಡದೆ ಏಕಾಕಿ ಲಾಠಿ ಚಾರ್ಜ್ ಮಾಡಿ ಹಲ್ಲೆ ಮಾಡಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿದೆ. ಈ ಹಲ್ಲೆಯನ್ನು ದಲಿತ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ. ಅಲ್ಲದೆ ಠಾಣಾಧಿಕಾರಿಯನ್ನು ಅಮಾನತ್ ಗೊಳಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡರು.

 *ಮಾಧ್ಯಮರೊಂದಿಗೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಸಂತೋಷ್ ಬಿ ಪಿ* ಅವರು ಮೆಹಂದಿ ಕಾರ್ಯಕ್ರಮಕ್ಕೆ ನಾವು ಅಡ್ಡಿ ಪಡಿಸಿಲ್ಲ. ಡಿಜೆ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ನಮ್ಮ ಸಿಬ್ಬಂದಿಗಳನ್ನು ಕಳಿಸಿ ಸಂಗೀತದ ಡಿಜೆಯ ಸೌಂಡ್ ಕಡಿಮೆ ಮಾಡಲು ಸೂಚಿಸಿದ್ದೇವೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಮಾಡದಿದ್ದಾಗ ನಾನು ಸಿಬ್ಬಂದಿಗಳೊಂದಿಗೆ ತೆರಳಿ ಡಿಜೆ ಬಂದ್ ಮಾಡಲು ವಿನಂತಿಸಿದ್ದೆ. ಅದಕ್ಕೆ ಕೆಲವರು ಉಡಪೆ ಉತ್ತರ ನೀಡಿ ಬಂದ್ ಮಾಡಲ್ಲ ಏನು ಬೇಕಾದ್ರು ಮಾಡಿಕೊಳ್ಳಿ ಅಂತ ಹೇಳಿದರು. ಅದಕ್ಕೆ ಅವರನ್ನು ವಶಕ್ಕೆ ಪಡೆಯುವಾಗ ಜನರು ತಲ್ಲಾಟ ಮಾಡಿದ್ದಾರೆ. ಅದು ಬಿಟ್ಟು ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದರು.

Be the first to comment

Leave a Reply

Your email address will not be published.


*