ಜಿಲ್ಲಾ ಸುದ್ದಿಗಳು
ಕಾರವಾರ
ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರೇಕ್ಷಣೀಯ ಸ್ಥಳಗಳಾದ ಜೋಗ್ ಫ಼ಾಲ್ಸ್ ಮತ್ತು ಮುರ್ಡೇಶ್ವರ ಗಳಿಗೆ ಜುಲೈ 24ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ವಿಶೇಷ ಸಾರಿಗೆ ವ್ಯವಸ್ಥೆಯನ್ನು ವಾಯವ್ಯ ಕರ್ನಾಟಕ ಸಾರಿಗೆ ವತಿಯಿಂದ ಕಲ್ಪಿಸಲಾಗಿದೆ.ಕಾರವಾರದಿಂದ ಜೋಗ್ ಫ಼ಾಲ್ಸ್ ಗೆ ಬೆಳಿಗ್ಗೆ 8:00ಗಂಟೆಗೆ ಬಸ್ ಪ್ರಾರಂಭವಾಗಲಿದ್ದು ಅಂಕೋಲಾ ಕುಮಟಾ ಹೊನ್ನಾವರ ಮಾರ್ಗದಿಂದ ಸಂಚಾರ ಮಾಡಲಿದೆ. ಮಧ್ಯದಲ್ಲಿ ಸಿಗುವ ಮಿರ್ಜಾನ್ ಕೋಟೆ ಹಾಗೂ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನಗಳಲ್ಲಿ ದರ್ಶನ ಮಾಡಿಕೊಂಡು ಬಸ್ ಜೋಗ್ ಫ಼ಾಲ್ಸ್ ಗೆ 12.30ಕ್ಕೆ ತಲುಪಲಿದೆ. ಅಲ್ಲಿಂದ ಪುನಃ 4.30ಗಂಟೆಗೆ ವಾಪಸ್ಸು ಹೊರಡುತ್ತದೆ. ಜೋಗ ವೀಕ್ಷಣೆಗೆ 4ಗಂಟೆಗಳ ಸಮಯ ಸಿಗುತ್ತದೆ.ಯಲ್ಲಾಪುರದಿಂದ ಬೆಳಿಗ್ಗೆ 8:00ಗಂಟೆಗೆ ಹೊರಟು ಶಿರಸಿ ಸಿದ್ದಾಪುರ ಮಾರ್ಗವಾಗಿ ಜೋಗಫ಼ಾಲ್ಸ್ ಗೆ ಇನ್ನೊಂದು ಬಸ್ ಸಂಚಾರ ಆರಂಭವಾಗಲಿದ್ದು ಈ ಮಾರ್ಗದಲ್ಲಿ ಶಿರಸಿ ಮಾರಿಕಾಂಬೆಯ ದರ್ಶನ ಹಾಗೂ ನಿಪ್ಪಲಿ ಫ಼ಾಲ್ಸ್ ನೋಡಿಕೊಂಡು 12.30ಕ್ಕೆ ಬಸ್ ಜೋಗಫ಼ಾಲ್ಸ್ ತಲುಪಲಿದೆ. ಪುನಃ 4.30ಗಂಟೆಗೆ ಜೋಗದಿಂದ ವಾಪಸ್ಸಾಗಲಿದೆ.
ಹಾಗೂ ಇನ್ನೊಂದು ಬಸ್ ಕಾರವಾರದಿಂದ ಮುರುಡೇಶ್ವರಕ್ಕೆ ಬೆಳಿಗ್ಗೆ 8:00ಗಂಟೆಗೆ ಹೊರಟು ಅಂಕೋಲಾ ಕುಮಟಾ ಹೊನ್ನಾವರ ಮಾರ್ಗದ ಮೂಲಕ 12:30ಕ್ಕೆ ಮುರುಡೇಶ್ವರ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಮಿರ್ಜಾನ್ ಕೋಟೆ ಹಾಗೂ ಇಕೋಬೀಚ್ ನೋಡಲು ಅವಕಾಶವಿರುತ್ತದೆ.ಪುನಃ 4.30ಗಂಟೆಗೆ ಮುರುಡೇಶ್ವರದಿಂದ ನಿರ್ಗಮಿಸಲಿವೆ.ಪ್ರವಾಸಿಗರು ಈ ವಿಶೇಷ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
Be the first to comment