ರಾಜ್ಯ ಸುದ್ದಿ
ದೇವನಹಳ್ಳಿ ತಾಲ್ಲೂಕಿನ ಬೊಮ್ಮವಾರದ ಬಳಿ ಇರುವ ಸಮಾಜಿಕ ವಲಯ ಅರಣ್ಯಾಧಿಕಾರಿಗಳ ಕಛೇರಿ ಅವರಣದಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಸಸಿ ನೇಡಲು ಚಾಲನೆ ನೀಡಿ ಅವರು ಮಾತನಾಡಿದರು.ವಿಶ್ವಪರಿಸರದ ದಿನಕ್ಕಾಗಿಗೆ ಶುಕ್ರವಾರ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಈಗ ನೆಡುವ ಸಸಿಗಳು ಉತ್ತಮ ರೀತಿಯಾಗಿ ಬೆಳೆದು ದೊಡ್ಡವಾಗಲಿವೆ. ಕಾರಣ ಭೂಮಿಯಲ್ಲಿ ೧೫ ದಿನಗಳಿಗಾಗುವಷ್ಟು ತೇವಾಂಶವಿರುವುದರಿAದ ಸಸಿಗಳು ಉತ್ತಮವಾಗಿ ಬೆಳವಣಿಗೆಯಾಗಲಿವೆ.
ಯುವಕರು ಸಂಘಸAಸ್ಥೆಗಳು ಎಲ್ಲರು ವಿಶೇಷ ದಿನವೆಂದು ಭಾವಿಸಿ ಎಲ್ಲರು ಸಸಿಗಳನ್ನು ನೇಡಲು ಮುಂದಾಗಬೇಕು.ಕೊವಿಡ್ ಮಾರಕ ಕಾಯಿಲೆಯಿಂದ ಆಕ್ಸಿಜನ್ ಸಿಗದೆ ಎಷ್ಟೋಜನ ಸತ್ತಿರುವ ನಿದರ್ಶನಗಳುಂಟು ಮುಂದಿನ ದಿನಗಳಲ್ಲಿ ಅಮ್ಲಜನಕಕ್ಕೆ ತೊಂದರೆಯಾಗದAತೆ ಆಮ್ಲಜನಕ ಅಭಿವೃದ್ದಿ ಪಡಿಸಿಕೊಳ್ಳಲು ಸಸಿಗಳನ್ನು ನೆಡಬೇಕಾಗಿದೆ.ಪ್ರತಿಯೋಬ್ಬರು ಒಂದೊAದು ಸಸಿಗಳನ್ನು ನೆಟ್ಟು ಆಮ್ಲಜನಕ ಹೆಚ್ಚಳಮಾಡಬೇಕಾಗಿದೆ. ದೇವನಹಳ್ಳಿ ತಾಲೂಕಿನ ಬೊಮ್ಮವಾರ ಸಮೀಪದ ಸಮಾಜಿಕ ವಲಯ ಅರಣ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ಶಾಸಕ ನಿಸರ್ಗನಾರಾಯಣಸ್ವಾಮಿ ಹಾಗು ಇತರರು ಸಸಿ ನೆಟ್ಟರು
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಂ.ಪುಷ್ಪ ಮಾತನಾಡಿ ಕಛೇರಿ ಆವರಣದಲ್ಲಿ ೨೦೦ ಸಸಿಗಳನ್ನು ನೆಡಲಾಗುತ್ತಿದೆ. ತಾಲ್ಲೂಕಿನಾದ್ಯಂತ ನಾವು ಈಗಾಗಲೇ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ನೆಡಲು ಹೆಬ್ಬೇವು, ಟೀಕ್ ಸಸಿಗಳನ್ನು ಕೊಟ್ಟಿದ್ದೇವೆ. ರೈತರು ಸಹ ಸಸಿಗಳನ್ನು ಪಡೆದು ಅವರ ಹೊಲದ ಬದುಗಳಲ್ಲಿ ಹೆಚ್ಚು ಸಸಿಗಳನ್ನು ನೆಡಬೇಕು. ರೈತರಿಗೆ ರಿಯಾಯಿತಿ ಧರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಇದೆ ವೇಳೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ರುದ್ರೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುನಿಲ್ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಮುಂತಾದವರು ಇದ್ದರು.
Be the first to comment