ಇಂದು ಭಟ್ಕಳದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಸಂಘಟಿಸಿದ — 30 ವರ್ಷ ಹೋರಾಟ – 30,000 ಗಿಡ ” ನೆಡುವ ಕಾರ್ಯಕ್ರಮವನ್ನು ಮಾಜಿ ಸೈನಿಕ ಅಚ್ಚುತ್ ನಾಯ್ಕ್ ಚಾಲನೆ ನೀಡಿದರು.

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

CHETAN KENDULI

ಪರಿಸರ ರಕ್ಷಣೆ, ಸಂರಕ್ಷಣೆ, ಅಭಿವೃದ್ಧಿ ದೇಶ ಪ್ರೇಮದ ಸಂಕೇತ. ಅರಣ್ಯವಾಸಿಗಳ ಭೂಮಿ ಹಕ್ಕಿನೊಂದಿಗೆ ಪರಿಸರ ರಕ್ಷಣೆಯಲ್ಲಿ ತೊಡಗಿರುವುದು ಪ್ರಸಂಶನೀಯ ಕಾರ್ಯ ಎಂದು ಮಾಜಿ ಸೈನಿಕ ಅಚ್ಯುತ್ ನಾಗಪ್ಪ ನಾಯ್ಕ, ಚಿಪ್ರಿಮನೆ, ಹಡೀನ್ ಅವರು ಹೇಳಿದರು.ಅವರು ಇಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೦ ವರ್ಷವಾಗಿರುವ ಹಿನ್ನೆಲೆಯಲ್ಲಿ ‘೩೦ ವರ್ಷ ಹೋರಾಟ- ೩೦ ಸಾವಿರ ಗಿಡ’ ನೆಡುವ ಕ್ರಾರ್ಯಕ್ರಮದ ಅಂಗವಾಗಿ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಜನತಾ ಕಾಲೋನಿಯ ಗಜಾನನ ಯುವಕ ಸಂಘ ಆವರಣದಲ್ಲಿ ಜಿಲ್ಲಾ ಮಟ್ಟದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟನೆಯನ್ನು ನಿವೃತ್ತ ಸೈನಿಕ ಅಚ್ಯುತ್ ನಾಗಪ್ಪ ನಾಯ್ಕ, ಚಿಪ್ರಿಮನೆ, ಹಡೀನ್ ಇವರು ಉದ್ಘಾಟಿಸಿದ ನಂತರ ಮೇಲಿನಂತೆ ಮಾತನಾಡುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡುತ್ತಾ ಅರಣ್ಯವಾಸಿಗಳ ಸಹಭಾಗಿತ್ವದೊಂದಿಗೆ ಅರಣ್ಯೀಕರಣ ಮಾಡಿದಾಗ ಮಾತ್ರ ಜಿಲ್ಲೆಯ ಹಸಿರುಕರಣ ಸಾಧ್ಯ. ಅರಣ್ಯ ಅಭೀವೃದ್ಧಿ ದಿಶೆಯಲ್ಲಿ ಅರಣ್ಯವಾಸಿಗಳಿಗೆ ಅರಣ್ಯ ಪ್ರದೇಶ ಸಾಗುವಳಿಯ ಜೊತೆಯಲ್ಲಿ ಅರಣ್ಯೀಕರಣ ಜವಾಬ್ದಾರಿ ನೀಡಿದಾಗ ಮಾತ್ರ ಅರಣ್ಯವಾಸಿಗಳ ಸಾಗುವಳಿಯ ಹಕ್ಕಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಅವರು ಹೇಳಿದರು.ಜಿಲ್ಲೆಯ ನೆಲ, ಜಲ, ಭೂಮಿ, ಪರಿಸರ ಪೂರಕವಾದ ದೀರ್ಘಾವದಿ ಆಯುಷ್ಯದ ಗಿಡ, ಮರ ಬೆಳೆಸುವ ನೀತಿಯನ್ನು ಅರಣ್ಯ ಇಲಾಖೆ ಜಾರಿಗೆ ತರತಕ್ಕದ್ದು, ಗಿಡ ನೆಡುವ ಪ್ರಾಮುಖ್ಯತೆಕ್ಕಿಂತ, ನೆಟ್ಟಿದ ಗಿಡ ಉಳಿಸಿ ಬೆಳೆಸುವುದು ಪ್ರಾಮುಖ್ಯವಾಗಿರುವುದು. ಅರಣ್ಯೀಕರಣ ಮಾಡುವುದು ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರೀಕನ ಹಕ್ಕನ್ನಾಗಿ ಪರಿವರ್ತಿಸಿದರೇ ಮಾತ್ರ ಹಸಿರುಕರಣವಾಗಲು ಸಾಧ್ಯ ಎಂದು ಅವರು ಹೇಳಿದರು.

ಜಿಲ್ಲಾ ಘಟಕದ ಸಂಚಾಲಕರಾದ ಹಾಗೂ ಕಾರ್ಯಕ್ರಮ ಸಂಘಟಕ ಪಾಂಡುರಂಗ ನಾಯ್ಕ ಬೆಳಕೆ ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ರಿಜವಾನ್, ಇಬ್ರಾಹಿಂ ನಬೀ ಸಾಬ್ ಸೈಯದ್ ಶಿರಸಿ, ತಿಮ್ಮ ಮರಾಠಿ ಶಿರಸಿ, ಸೀತಾರಾಮ ಗೌಡ ಸಿದ್ಧಾಪುರ, ರಾಜೇಶ್ ನಾಯ್ಕ ಅಂಕೋಲಾ, ಸೀತಾರಾಮ ನಾಯ್ಕ ಹೋನ್ನಾವರ, ಶಿರಸಿ ತಾಲೂಕ ಅಧ್ಯಕ್ಷ ಲಕ್ಷö್ಮಣ ಮಾಳಕ್ಕನವರ, ಕುಮಟ ಅಧ್ಯಕ್ಷ ಮಂಜುನಾಥ ಮರಾಠಿ, ನಿರ್ಮಲ ನಾಗೇಶ ಮೋಗೇರ, ನಿತಿಶ್ ನಾಯ್ಕ, ಶಾಂತಿ ನಾಗರಾಜ ಮೋಗೇರ, ಕುಮಾರ ಮೋಗೇರ, ಅಣ್ಣಪ್ಪ ಮೋಗೇರ, ಚಂದ್ರು ನಾಯ್ಕ, ಸುರೇಶ್ ಮೋಗೇರ, ಮುಂತಾದವರು ಉಪಸ್ಥಿತರಿದ್ದರು.ತೀವ್ರ ತರದ ಮಳೆಯಲ್ಲಿಯೂ ನೂರಾರು ಅರಣ್ಯವಾಸಿ ಅತಿಕ್ರಮಣದಾರರು ಆಸಕ್ತಿಯಿಂದ, ಉತ್ಸಾಹದಿಂದ ಭಾಗವಹಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.ಸದಸ್ಯತ್ವ ರದ್ದು: ಉತ್ತರ ಕನ್ನಡ ಜಿಲ್ಲೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಾಲಿ ೩೨,೨೨೭ ಜಿಲ್ಲೆಯ ಅರಣ್ಯವಾಸಿ ಕುಟುಂಬವು ಸದಸ್ಯತ್ವ ಪಡೆದಿದ್ದು ಪ್ರತಿಯೊಂದು ಅರಣ್ಯವಾಸಿ ಕುಟುಂಬ ಸದಸ್ಯರು ಮನೆಗೆ ೨ ರಂತೆ ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಗಿಡ ನೆಟ್ಟಿ ಬೆಳೆಸಬೇಕು ಎಂಬ ನೀತಿ ಹೋರಾಟಗಾರರ ವೇದಿಕೆಯು ಪ್ರಕಟಿಸಿದ್ದು ಗಿಡ ನೇಡದ ಅರಣ್ಯವಾಸಿ ಕುಟುಂಬದ ಸದಸ್ಯತ್ವವನ್ನು ರದ್ದು ಪಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಆದಿವಾಸಿಗಳಿಗೆ ಎಚ್ಚರಿಕೆ ನೀಡಿದರು.

Be the first to comment

Leave a Reply

Your email address will not be published.


*