ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತ್ಯಾಗ ಬಲಿದಾನ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಕೋವಿಡ್-19ರಲ್ಲಿ ಜಾಗೃತರಾಗಿ ಆಚರಣೆ ಮಾಡಬೇಕು. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಿಪಿಐ ಆನಂದ ವಾಗ್ಮೋಡೆ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ರವಿವಾರ ಹಮ್ಮಿಕೊಳ್ಳಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸರಕಾರ ಜನಹಿತಕ್ಕಾಗಿ ಕೊರೊನಾ 3ನೇ ಅಲೆಯ ಮುನ್ಸೂಚನೆಯಲ್ಲಿ ಕೆಲ ಸುತ್ತೊಲೆಯನ್ನು ಹೊರಡಿಸಿದೆ. ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಆಚರಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಪಿಎಸ್ಐ ಎಂ.ಬಿ.ಬಿರಾದಾರ ಮಾತನಾಡಿ, ಮುದ್ದೇಬಿಹಾಳ ತಾಲುಕು ಶಾಂತಿಯುವ ನಗರವಾಗಿದೆ. ಹಿಂದಿನಿಂದಲೂ ಹಬ್ಬದಂದು ನಡೆದ ಅಹಿತಕರ ಘಟನೆ ನಡೆದ ಉದಾಹರಣೆ ಇಲ್ಲಾ. ಆದರೂ ಸರಕಾರದ ಆದೇಶದ ಪ್ರಕಾರ ಕೊರೊನಾದಿಂದ ಮುಕ್ತಿ ಹೊಂದಲು ನಿಯಮಾವಳಿಗಳ ಪಾಲನೆ ಅಗತ್ಯವಾಗಿರುತ್ತದೆ ಎನ್ನುವುದು ತಾಲೂಕಿನ ಮುಸ್ಲಿಂ ಜನರು ಮರೆಯಬಾರದು. ಈಗಾಗಲೇ ಮುಂಚಿತವಾಗಿಯೇ ಹಬ್ಬದ ದಿನದಂದು ವಿವಿಧ ಪೊಲೀಸರನ್ನು ಸೇವಾ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸರ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ನಗರಾಭಿವೃದ್ಧಿ ಯುವ ಹೋರಾಟ ವೇಧಿಕೆ ಸಂಚಾಲಕ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, ಯಾವುದೇ ಹಬ್ಬ ಬಂದರೂ ಮುದ್ದೇಬಿಹಾಳ ಜನತೆ ಜಾತಿ ಬೇಧವಿಲ್ಲದೆ ಸಂಬ್ರಮದಿಂದ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಆದರೆ ಈ ಬಾರಿ ಶಾಂತಿ ಸಭೆಯಲ್ಲಿ ಕೆಲ ಮುಸ್ಲಿಂ ಮುಖಂಡರನ್ನು ಕಳೆದುಕೊಂಡಿದ್ದು ಬೇಸರದ ಸಂಗತಿಯಾಗಿದೆ. ಬರುವ ಬಕ್ರೀಸ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆಗೆ ಅಣೆಯಾಗುತ್ತೇವೆ ಎಂದು ಹೇಳಿದರು.
ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಮಾತನಾಡಿ, ಕೊರೊನಾದಿಂದ ಕಳೆದ ವರ್ಷದಿಂದಲೂ ಯಾವುದೇ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಯಾರಿಂದಲೂ ಸಾದ್ಯವಾಗಿಲ್ಲ. ಸದ್ಯಕ್ಕೆ ಕೊರೊನಾ ಅಲೆ ಕಡಿಮೆಯಾಗಿದ್ದರೂ ಸರಕಾರದ ನಿಯಮಾವಳಿಗಳ ಪ್ರಕಾರ ಹಬ್ಬ ಆಚರಣೆ ಮಾಡಲಾಗುವುದು ಎಂದು ಹೇಳಿದರು.
ಯುವ ಮುಖಂಡ ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ ಮಾತನಾಡಿದರು.
ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಶಿವು ಶಿವಪೂರ, ಸದಸ್ಯ ಮೆಹಬೂಬ ಗೊಳಸಂಗಿ, ನಾಮ ನಿರ್ದೇಶಕ ಸದಸ್ಯ ರಾಜಶೇಖರ ಹೊಳಿ, ಪುನೀತ ಹಿಪ್ಪರಗಿ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ರಫೀಕ ಶೀರೋಳ, ಮಹಾಂತೇಶ ಬೂದಿಹಾಳಮಠ, ಮಂಜುನಾಥ ರತ್ನಾಕರ, ಹುಸೇನ ಮುಲ್ಲಾ ಸೇರಿದಂತೆ ಗ್ರಾಮೀಣ ಭಾಗದ ಮುಸ್ಲಿಂ ಮುಖಂಡರು ಇದ್ದರು.
Be the first to comment