ಜಿಲ್ಲಾ ಸುದ್ದಿಗಳು
ದೇವನಹಳ್ಳಿ:
CHETAN KENDULI“120 ಕೋಟಿ ರೂ.ಅನುದಾನದ ಜೊತೆ 100ಕೋಟಿರೂ.ಹೆಚ್ಚಿಸಿ ನೀಡಿ.”
-ಎ.ಕೆ.ಪಿ.ನಾಗೇಶ್, ಬಿಜೆಪಿ ರಾಜ್ಯಕೋಶ ಅಧ್ಯಕ್ಷರು.
ಮೈತ್ರಿ ಸರ್ಕಾರದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ದೇವನಹಳ್ಳಿ ಅಭಿವೃದ್ಧಿಗೆ 120 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅನುದಾನ ಬಿಡುಗಡೆಯಾಗದೆ ತಡವಾಗಿದ್ದರಿಂದ, ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ದೇವನಹಳ್ಳಿಯ ಸಮಗ್ರ ಅಭಿವೃದ್ಧಿಗಾಗಿ 120 ಕೋಟಿ ರೂ. ಜೊತೆಗೆ 100 ಕೋಟಿ ರೂ. ಹೆಚ್ಚುವರಿ ಸೇರಿಸಿ ಬಿಡುಗಡೆ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಎ ಕೆ ಪಿ ನಾಗೇಶ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ತಾಲೂಕು ದೇವನಹಳ್ಳಿ ಆಗಿದೆ. ದೇವನಹಳ್ಳಿಯ ಸಮಗ್ರ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. ದೇವನಹಳ್ಳಿಯಲ್ಲಿ ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಅಧಿಕಾರಿಗಳಿಗೆ ವಸತಿಗೃಹಗಳ ವ್ಯವಸ್ಥೆ ಆಗಬೇಕಿದೆ. ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು ಹೆಚ್ಚು ಅವಶ್ಯಕತೆ ಇದೆ. ಕೆಂಪೇಗೌಡ ಅಂತರಾಷ್ಟ್ರೀಯ ಮಾನ ನಿಲ್ದಾಣ ಕೇವಲ ಐದು ಕಿಲೋಮೀಟರ್ ಅಂತರದಲ್ಲಿ ಇದೆ. ಕೂಡಲೇ ಮುಖ್ಯಮಂತ್ರಿಗಳು ಶೀಘ್ರವಾಗಿ ನಮ್ಮ ಮನವಿಯನ್ನು ಪರಿಗಣಿಸಿ ಶೀಘ್ರ ಅನುದಾನ ಬಿಡುಗಡೆ ಮಾಡಿಕೊಡಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ಬಾಬು, ತಾಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಅಮರನಾಥ್, ಸೈನಿಕ ಪ್ರಕೋಷ್ಠದ ಸಂಚಾಲಕ ವೆಂಕಟೇಶ್, ಮುಖಂಡ ಮಧುಸೂದನ್ ಮತ್ತಿತರರು ಇದ್ದರು.
Be the first to comment