ರಾಜ್ಯ ಸುದ್ದಿಗಳು
ದೇವನಹಳ್ಳಿ
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಬಿ.ಎನ್.ಕೃಷ್ಣಪ್ಪ ಅವರಿಗೆ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರು ಪ್ರಮಾಣ ಪತ್ರ ಹಸ್ತಾಂತರಿಸಿ ಶುಭಹಾರೈಸಿದರು. ಈ ವೇಳೆಯಲ್ಲಿ ನೂತನ ಜಿಲ್ಲಾಧ್ಯಕ್ಷರಿಗೆ ಕಸಾಪ ಪದಾಧಿಕಾರಿಗಳು ಮತ್ತು ಮುಖಂಡರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ನೂತನ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರು ಮತವನ್ನು ನೀಡಿ ತಮ್ಮನ್ನು ಜಯಶೀಲರನ್ನಾಗಿಸಿದ್ದಾರೆ ಅವರಿಗೆ ಅಭಾರಿಯಾಗಿರುತ್ತೇನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಗರ ಜಿಲ್ಲೆಗೆ ಹೊಂದಿಕೊಂಡಿದ್ದು, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯವನ್ನು ಎಲ್ಲರೊಂದಿಗೆ ಒಗ್ಗೂಡಿ ಕೊಂಡೈಯಲು ಮುಂದಾಗಲಾಗುವುದು. ಈ ಹಿಂದಿನ ಜಿಲ್ಲಾಧ್ಯಕ್ಷರ ಮತ್ತು ಅನುಭವಿ ಯುವ ಕವಿಗಳು, ಕಲಾವಿಧರ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ವಿಶೇಷವಾಗಿ ನನ್ನ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ, ಪದಾಧಿಕಾರಿಗಳಾದ ಬಿ.ಕೆ.ನಾರಾಯಣಸ್ವಾಮಿ, ಶ್ರೀನಿವಾಸ್ಗೌಡ, ಎಚ್.ಎಂ.ರವಿಕುಮಾರ್, ಹೊಸಕೋಟೆ ಶ್ರೀನಿವಾಸ್, ಮುನಿರಾಜ್, ಕರವೇ ಚಂದ್ರಶೇಖರ್, ವೀನೋದ್ಗೌಡ, ರಬ್ಬನಹಳ್ಳಿ ಕೆಂಪಣ್ಣ, ವೆಂಕಟೇಗೌಡ, ಹಲವಾರು ಹಿರಿಯ ಮುಖಂಡರು ಪದಾಧಿಕಾರಿಗಳು ಇದ್ದರು.
Be the first to comment