ದೇವನಹಳ್ಳಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಬಿ.ಕೆ.ಶಿವಪ್ಪ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ಸರಕಾರ ಈಗಾಗಲೇ 2015ರ ಬಜೆಟ್‌ನಲ್ಲಿ ದೇವನಹಳ್ಳಿ ಕೇಂದ್ರಸ್ಥಾನವಾಗಿ ಘೋಷಣೆ ಮಾಡಿ 43 ಕೋಟಿ ಹಣ ಮಂಜೂರು ಮಾಡಲಾಗಿದೆ. ಕೇಂದ್ರಸ್ಥಾನ ಜಿಲ್ಲಾಡಳಿತವು ಚಪ್ಪರಕಲ್ಲು ಬಳಿ ಸ್ಥಳಾಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಬದಲಾಗಿ ದೇವನಹಳ್ಳಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಸರಕಾರದ ಹಂತದಲ್ಲಿದ್ದು ಇದಕ್ಕೆ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಿ.ಕೆ.ಶಿವಪ್ಪ ತಿಳಿಸಿದರು.

CHETAN KENDULI

ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದೇವನಹಳ್ಳಿ ಜಿಲ್ಲಾಕೇಂದ್ರ ಪ್ರಸ್ತಾವನೆ ಈಗಾಗಲೇ ಸರಕಾರದ ಹಂತದಲ್ಲಿದ್ದು ದೇವನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಹಾಗು ಅನೇಕ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿದ್ದು ಈಗ ಅದಕ್ಕೆ ರಾಜಕೀಯ ಲೇಪನವನ್ನು ಹಚ್ಚುವ ಕೆಲಸ ಆಗುತ್ತಿದ್ದು ಈಗಾಗಲೇ ಜಿಲ್ಲಾಕೆಂದ್ರ ತಾಲ್ಲೂಕಿನಲ್ಲಿದ್ದು ಕೇವಲ ಹೆಸರು ಮಾತ್ರ ಬದಲಾವಣೆ ಮಾಡಬೇಕಿದೆ ಅದಕ್ಕಾಗಿ ಪಾದಯಾತ್ರೆ ಮಾಡುವುದು ಬಿಟ್ಟು ಜಿಲ್ಲಾ ಕೇಂದ್ರವಾದರು ಸಹ ಇದುವರೆ 13 ಇಲಾಖೆಗಳು ಇನ್ನು ಸ್ಥಳಾಂತರವಾಗಿಲ್ಲ. 

ರಾಜಕೀಯ ಲೇಪನ ಮಾಡುವುದು ಬಿಟ್ಟು ,ಜಿಲ್ಲಾಕೇಂದ್ರಕ್ಕೆ ಬರಬೇಕಾದ ಸವಲತ್ತುಗಳನ್ನು ಸರಕಾರದಿಂದ ತರಲು ಪಾದಯಾತ್ರೆ ಮಾಡಲಿ ಅದನ್ನು ಬಿಟ್ಟು ಈಗಾಗಲೇ ಜಿಲ್ಲಾಕೇಂದ್ರ ತಾಲೂಕಿನಲ್ಲೇ ಇದ್ದು, ಕಾರ್ಯನಿರ್ವಹಿಸುತ್ತಿದೆ. ಆಗಾಗಿ ರಾಜಕೀಯ ಮುಖಂಡರು ದೇವನಹಳ್ಳಿಗೆ ಬರಬೇಕಾದ ಜಿಲ್ಲಾಸ್ಪತ್ರೆ, ಜಿಲ್ಲಾಕ್ರೀಡಾಂಗಣ, ಜಿಲ್ಲಾನೊಂದಣಾಧಿಕಾರಿಗಳ ಕಛೇರಿ ಇನ್ನುಳಿದ ಕಚೇರಿಗಳು ದೇವನಹಳ್ಳಿಗೆ ಬರಲು ಹೋರಾಟ ಮಾಡಲಿ ಅದಕ್ಕೆ ನಮ್ಮ ಸಹಕಾರವು ಇರಲಿದೆ ಅದನ್ನು ಬಿಟ್ಟು ಘೋಷಣೆಯಾಗಿರುವ ಜಿಲಾಕೇಂದ್ರಕ್ಕೆ ಪಾದಯಾತ್ರೆ ಮಾಡುವುದು ಎಷ್ಟರಮಟ್ಟಿಗೆ ಸರಿ ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುವುದು ಬೇಡ ಎಂದರು. ಈ ವೇಳೆಯಲ್ಲಿ ವಿವಿಧ ಪರ ಸಂಘಟನೆಯ ಮುಖಂಡರು ಇದ್ದರು. 

Be the first to comment

Leave a Reply

Your email address will not be published.


*