ರಾಜ್ಯ ಸುದ್ದಿಗಳು
ಕಾರವಾರ
ದಿನಾಂಕ 18/12/21 ರಂದು ಭ್ರಷ್ಟಾಚಾರ ನಿಗ್ರಹ ದಳದ ಕಾರವಾರ ಡಿ.ಎಸ್.ಪಿ ಯವರು ಸಿದ್ದಾಪುರ ತಾಲೂಕಿನ ಗ್ರಾಮ ಪಂಚಾಯತ್ ತಂಡಾಗುಂಡಿ ಅಭಿವೃದ್ಧಿ ಅಧಿಕಾರಿ ಸದ್ಯ ಶಿರಸಿ ತಾಲೂಕಿನ ಕೋಡ್ನಗದ್ದೆ ಗ್ರಾಮಪಂಚಾತ ಅಭಿವೃದ್ಧಿ ಆಗಿ ಕಾರ್ಯ ನಿರವಹಿಸುತ್ತಿರುವ ಲತಾ ಶೇಟ್ ಮತ್ತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲಾವತಿ ಗೌಡ ಯವರ ಮೇಲೆ ಎ.ಸಿ.ಬಿ ಎಫ್.ಐ.ರ್ ಸಂಖ್ಯೆ03/21(U/s 154 cr. P.C) ಅನ್ವಯ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸೋಮಶೇಖರ್ ರಾಮಕೃಷ್ಣ ನಾಯ್ಕ ಸಾ|| ಜೋಗಿನಮನೆ , ಅಂಚೆ ಹುಕ್ಕಳ್ಳಿ, ತಾ . ಸಿದ್ದಾಪುರ ರವರು ದಿನಾಂಕ 4.05.2020 ರಂದು ನೀಡಿದ ದೂರಿನಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ತಡಾಂಗುಂಡಿ ಗ್ರಾಮ ಪಂಚಾಯತ್ ದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲತಾ ಶೇಟ್ ಸದರಿ ಪಂಚಾಯತ್ ಆರಂಭ ಆಗಿನಿಂದಲೂ , ಕಳೆದ 3-4 ವರ್ಷಗಳಿಂದ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರ ಮಾಡಿದ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿಗಳು , ಜಿಲ್ಲಾ ಪಂಚಾಯತ್ ಕಾರವಾರ ಇವರ ಬಳಿಗೆ ಆರೋಪವನ್ನು ಸಲ್ಲಿಸಿದ್ದು ಮೇಲ್ನೋಟಕ್ಕೆ ಆರೋಪ ಕಂಡು ಬಂದ ಬಗ್ಗೆ ಇವರ ಮೇಲೆ ಮತ್ತು ಶ್ರೀಮತಿ ಕಲಾವತಿ ಮಹಾಬಲೇಶ್ವರ ಗೌಡ ಮಾಜಿ ಅಧ್ಯಕ್ಷರು ಮತ್ತು ಇತರೆ ಪಂಚಾಯತಿಯ ನೌಕರರು ಜವಾಬ್ದಾರರಾಗಿರುವುದರಿಂದ ಸದ್ರಿ ವಿರುದ್ದ ಕಲಂ 17 (ಎ) ಬೃಷ್ಚಾಚಾರ ಪ್ರತಿಬಂಧಕ ಕಾಯ್ದೆ 1988 ಎಪ್ ಐ ಆರ್ ದಾಖಲಿಸಿ ಉತ್ತರ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಕಾರವಾರ ಡಿ.ಎಸ್.ಪಿ ಯವರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಇಲಾಖೆ ತನಿಖೆ 1-4 ಪ್ರಕಾರ ಪಂಚಾಯತ್ ಅಭಿವ್ರದಿ ಅಧಿಕಾರಿ ಲತಾ ಶೇಟ್ ಮೇಲ ಆರೋಪ ಪಟ್ಟಿ ಸಲ್ಲಿಸಿದ್ದು ತನಿಖೆ ನಡೆಯುತ್ತಿದ್ದು 9 ತಿಂಗಳು ಕಳೆದರು ಮೇಲಾಧಿಕಾರಿಗಳು ಇವ್ರ ಮೇಲೇ ಯಾವುದೇ ಕ್ರಮ ಇನ್ನು ಕೈಗೊಳದೆ ಇವ್ರ ಭ್ರಷ್ಟಾಚಾರಕ್ಕೆ ಸಾತ ನೀಡುತ್ತಿದ್ದಾರೆ.
Be the first to comment