ರಾಜ್ಯ ಸುದ್ದಿಗಳು
ಬಳ್ಳಾರಿ:
ಬ್ಲ್ಯಾಕ್ ಮೇಲ್ ಮಾಡುವ ವ್ಯಕ್ತಿ ನಾನಲ್ಲ.ನಾನು ನಿಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯೆ ಕೊಡಲ್ಲ.ನನಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಆಗಿರುವ ಬಗ್ಗೆ ಹೇಳಿದ್ದೇನೆ.
-ಆನಂದ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವರು.
ಪಕ್ಷದ ನಾಯಕರಿಗೆ ಯಾವುದೇ ರೀತಿಯ ಮುಜುಗರವಾಗುವ ಹೇಳಿಕೆ ನೀಡಿಲ್ಲ, ನೀಡೋದು, ಇಲ್ಲ, ನನ್ನ ಬೇಡಿಕೆ ಬಗ್ಗೆ ನಾಲ್ಕು ಗೋಡೆ ಮಧ್ಯೆ ಕುಳಿತು ನಾಯಕರಿಗೆ ಮನವಿ ಮಾಡಿರುವೆ, ಸ್ಪಂಧನೆ ಯಾವ ರೀತಿ ಬರಲಿದೆ ಕಾದುನೋಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಹೊಸಪೇಟೆ ನಗರದ ಶ್ರೀ ಗೋಪಲ ಸ್ವಾಮೀ ದೇಗುಲದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅನೇಕ ವಿಚಾರಗಳ ಬಗ್ಗೆ ನಾನು ಏನೆಲ್ಲ ಮನವಿ ಮಾಡಬೇಕೋ ಅದನ್ನು ವರೀಷ್ಠರಿಗೆ ಹಾಗೂ ಸಿ.ಎಮ.ಅವರಿಗೆ ತಿಳಿಸಿ ಮನವಿ ಮಾಡಿರುವೆ, ನಾಯಕರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ. ನನಗೆ ಯಾರ ರಕ್ಷಣೆ ಇಲ್ಲದಿದ್ದರೂ ಶ್ರೀ ಗೋಪಾಲಕೃಷ್ಣ ನನ್ನ ಪಾಲಿಗೆ ಇದ್ದಾನರ. ನಾನು ತೆಗೆದುಕೊಳ್ಳುವ ತೀರ್ಮಾನದಲ್ಲಿ ನನ್ನೊಟ್ಟಿಗೆ ನಿಲ್ಲುವ ಭರವಸೆ, ನಂಬಿಕೆ ಇದೆ ಎಂದರು.
ನನಗೆ ಇನ್ನೋಬ್ಬರನ್ನು ಹೊಗಳಿ ಬದುಕುವ ಕಲೆ ಇಲ್ಲ, ಅಂತವ ಸ್ವಭಾವ ನನ್ನದು, ನನ್ನದು ಏನಿದ್ದರೂ ನೇರ ಧ್ವನಿಯಾಗಿದೆ, ಇದು ಕೆಲವರಿಗೆ ಇಷ್ಟ ಆಗದೇ ಇರಬಹುದು. ಒಂದು ವೇಳೆ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆದಿದ್ದರೆ, ಅವರ ಬಳಿಯೇ ಹೋಗಿ ಮನವಿ ಮಾಡುತ್ತಿದ್ದೆ. ಆದರೆ, ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ನನ್ನ ಬೇಡಿಕೆ ಬಗ್ಗೆ ಮಾಜಿ ಸಿಎಂ ಬಿಎಸ್ವೈ, ಸಿಎಂ ಬೊಮ್ಮಾಯಿ ಅವರ ಬಳಿ ಮನವಿ ಮಾಡಿರುವೆ. ಬೆಂಗಳೂರಿಗೆ ಬರುವಂತೆ ಕರೆ ಬಂದಿದೆ, ಇಂದು ಹೋಗ್ಬೇಕಾ, ನಾಳೆ ಹೋಗ್ಬೇಕಾ ನಿರ್ಧರಿಸುವೆ.
‘ಪಕ್ಷದವರಿಗೆ ನನ್ನ ಮೇಲೆ ವಿಶ್ವಾಸ ಇದೆ, ಇಲ್ಲವೋ ಗೊತ್ತಿಲ್ಲ, ನನಗೆ ನಮ್ಮ ಪಕ್ಷ ನಾಯಕರ, ವರೀಷ್ಠರ ಮೇಲೆ ವಿಶ್ವಾಸವಿದೆ. ಆದರೆ, ಅವರಿಗೆ ನನ್ನ ಮೇಲಿರುವ ನಂಬಿಕೆ, ವಿಶ್ವಾಸ ಎಷ್ಟರಮಟ್ಟಿಗೆ ಕಾದುನೋಡಬೇಕಿದೆ ಎಂದರು.
ನನ್ನ ರಾಜಕೀಯ ಪ್ರಾರಂಭವಾಗಿದ್ದು ಇದೇ ದೇಗುಲದಿಂದಲೇ, ಅಂತ್ಯವೂ ಇಲ್ಲಿಂದಲೇ ಆಗಬಹುದು ಹೇಳೋಕೆ ಆಗೋಲ್ಲ, ರಾಜಕೀಯ ಜೀವನ ಇಲ್ಲಿಂದ ಪ್ರಾರಂಭವಾಗಿತ್ತು. ಇದೇ ದೇವಸ್ಥಾನದಿಂದಲೇ ಮತ್ತೆ ಆರಂಭವಾದರೂ ಆಗಬಹುದು.
ನಾನು ರಾಜ್ಯದ ಅತಿದೊಡ್ಡ ರಾಜಕಾರಣಿಯಲ್ಲ. ನನ್ನ ಶ್ರದ್ಧೆ, ಪ್ರಾಮಾಣಿಕತೆ, ಕ್ಷೇತ್ರದ ಜನರ ಆಶೀರ್ವಾದ, ನಿಷ್ಠೆಯಿಂದ ನಾನು ಆಯ್ಕೆಯಾಗಿದ್ದೇನೆ. ನಾನು ಕೇವಲ ಹೊಸಪೇಟೆ ಕ್ಷೇತ್ರದ ಶಾಸಕ ಎಂದರು.
ನನಗೆ ಆತ್ಮೀಯ ರಾಜಕೀಯ ಸ್ನೇಹಿತರಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿದ್ದೆ. ನನ್ನ ರಾಜಕೀಯ ಪ್ರಯಾಣ ತುಂಬಾ ಚಿಕ್ಕದ್ದು. ಸಮಾಜಸೇವೆ ಮಾಡಲು ಆರಂಭಿಸಿ 5 ವರ್ಷ ಸಂದಿವೆ. ಆದರೆ, ಈ 15 ವರ್ಷದ ರಾಜಕೀಯ ಜೀವನದಲ್ಲಿ ನನ್ನನ್ನು ರಕ್ಷಣೆ ಮಾಡುವ ಬಹಳಷ್ಟು ಆತ್ಮೀಯ ರಾಜಕೀಯ ಸ್ನೇಹಿತರಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿದ್ದೆ ಅದು ನಿನ್ನೆ ಗೊತ್ತಾಯಿತು, ಎಂತವರು ಎಂದು ತಿಳಿಸಿದರು.
Be the first to comment