ಜಿಲ್ಲಾ ಸುದ್ದಿಗಳು
ಹೊನ್ನಾವರ:
ಕಂದಾಯ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ಮೀನುಗಾರಿಕೆಯ ಯಾಂತ್ರಿಕೃತ ದೋಣಿಗಳ ತಪಾಸಣೆ ನಡೆಸಲಾಯಿತು. ಯಾಂತ್ತ್ರೀಕೃತ ನಾಡದೋಣಿಗಳನ್ನು ಹೊನ್ನಾವರ ತಾಲೂಕಿನ ಮಂಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮುದ್ರ ತೀರಗಳಲ್ಲಿ ತಪಾಸಣೆ ನಡೆಯಿತು.
ಮೀನುಗಾರಿಕೆ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಮ್ ಎಚ್ ಹಾಗೂ ಕಂದಾಯ ಇಲಾಖೆಯ ವೆಂಕಟರಮಣ ದೇವಾಡಿಗರವರ ನೇತೃತ್ವದಲ್ಲಿ ಮಂಕಿ ಮಡಿ, ದೇವರಗದ್ದೆ , ಹಳೇಮಠ, ನಾಕೂದಾ,ಮೊಹಲ್ಲಾ, ಅಳ್ವೇಹಿತ್ತಲಾ, ನೂರಮಹಲ್ಲಾ ಹಾಗೂ ಕೊಪ್ಪದಮಕ್ಕಿಯಲ್ಲಿ ದೋಣಿಗಳ ತಪಾಸಣೆ ನಡೆಯಿತು.
ಮೀನುಗಾರರ ಸಹಕಾರಿ ಸಂಘ ಹಾಗೂ ನಾಡದೋಣಿ ಸಂಘಗಳು ಸಹಕಾರ ನೀಡಿದವು. ಜಿಲ್ಲೆಯಾದ್ಯಂತ ಮೀನುಗಾರಿಕಾ ಜಂಟಿ ನಿರ್ದೇಶಕರ ನಿರ್ದೇಶನದಂತೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ತಪಾಸಣೆ ನಡೆಸಲಾಗಿದೆ. ಎಲ್ಲಾ ಮೀನುಗಾರರು ಉತ್ತಮವಾಗಿ ಸಹಕಾರ ನೀಡಿದ್ದಾರೆ ಎಂದು ಹೊನ್ನಾವರ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಮ್ ಎಚ್ ತಿಳಿಸಿದ್ದಾರೆ.
Be the first to comment