ಸಾರ್ವತ್ರಿಕ ಗಣೇಶೋತ್ಸವಕ್ಕೆ ಅವಕಾಶ ಕೋರಿ ಸರ್ಕಾರಕ್ಕೆ ಮನವಿ:ಗಜಾನನ ಉತ್ಸವ ಸಮಿತಿ ಮಹಾಮಂಡಳ ಬಾಗಲಕೋಟೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ನಗರದ ಜಿಲ್ಲಾ ಆಡಳಿತ ಭವನದ ಎದುರು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಶ್ರೀ ಗಜಾನನ ಉತ್ಸವ ಮಹಾಮಂಡಳವು ಸರಕಾರದ ಕೋವಿಡ್-19 ರ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉತ್ಸವ ಆಚರಿಸಲು ಅನುಮತಿಗೆ ವಿನಂತಿಸಲಾಗಿದೆ.

ಶ್ರೀ ಗಜಾನನ ಉತ್ಸವ ಮಹಾಮಂಡಳದ ಸಭೆ ಜರುಗಿದ್ದು, ಸಭೆಯಲ್ಲಿ ಈ ವರ್ಷ ಕೋವಿಡ್ ನಿಯಮದ ಅನುಸಾರವಾಗಿ ಗಜಾನನ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ.

ಶ್ರೀ ಗಜಾನನ ಉತ್ಸವ ಮಹಾಮಂಡಳದ ಮನವಿಯ ಮೇರೆಗೆ ಕರ್ನಾಟಕ ರಾಜ್ಯ ಸರಕಾರವು ಸರಳ ರೀತಿಯಲ್ಲಿ ಗಣೇಶ ಉತ್ಸವವನ್ನು ಆಚರಿಸಲು ಕಳೆದ ವರ್ಷ ಅನುಮತಿ ನೀಡಿದ್ದು, ಈ ಬಾರಿಯೂ ಕೂಡಾ ಅದೇ ರೀತಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಲು ಅನುಮತಿ ನೀಡಬೇಕು.

ಸದರಿ ಹಬ್ಬವು ಕಾನೂನಿನ ಚೌಕಟ್ಟಿನಲ್ಲಿ ಸರಳ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲ ಮಂಡಳಿಗಳಿಗೆ ಸ್ಯಾನಿಟೈಜ್ ಉಪಯೋಗಿಸಿ, ಸಾಮಾಜಿಕ ಅಂತರದೊಂದಿಗೆ ಕಡ್ಡಾಯವಾಗಿ ಮಾಸ್ಕ ಧರಿಸಿ ಸರಳ ರೀತಿಯಲ್ಲಿ ಆಚರಿಸಲು ಕೆಲವು ಬೇಡಿಕೆಗಳಿಗೆ ಅನುಮತಿ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇವೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಮುಖ ಬೇಡಿಕೆಗಳು

1) ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯನ್ನು ಆಯಾ ಮಂಡಳಿಯವರು ಪ್ರತಿ ವರ್ಷ ಪ್ರತಿಷ್ಠಾಪಿಸುವ ಸ್ಥಳದಲ್ಲೆ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು.
2) ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಆಯಾ ಸಮಿತಿಯ ಸದಸ್ಯರಿಗೆ ಆರಕ್ಷಕರಿಂದ ಬೇಗ ಬೇಗ ತರಲು ಒತ್ತಡ ಹಾಕಬಾರದು.
3) ಗಣೇಶ ಚತುರ್ಥಿ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ/ಪೆಮಡಾಲ/ಶಾಮಿಯಾನ/ವೇದಿಕೆಗಳನ್ನು ನಿರ್ಮಿಸಿ ಗೌರಿ ಗಣೇಶ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು.
4) ಎಲ್ಲಾ ಮಂಡಳಿಗಳಿಗೆ ಅನುಕೂಲವಾಗಲು ಏಕಗವಾಕ್ಷಿ(ನಗರಸಭೆ,ಪಿಡಬ್ಲ್ಯೂಡಿ,ಹೆಸ್ಕಾಂ ಮತ್ತು ಪೋಲಿಸ್)ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು.

ಈ ಸಂದರ್ಭದಲ್ಲಿ ಅಶೋಕ ಮುತ್ತಿನಮಠ,
ಶಿವು ಮೇಲ್ನಾಡ,ವಿಜಯ ಸುಲಾಖೆ,ಬಸವರಾಜ ಕಟಗೇರಿ,ಮನೋಜ ಕರೋಡಿವಾಲ, ಆನಂದ ಬಾಂಡಗೆ,ಕುಮಾರಸ್ವಾಮಿ ಹಿರೇಮಠ,ತುಕಾರಾಮ ಹುಲ್ಲೂರ, ಸಂತೋಷ ಕಪಾಟೆ,ಕೃಷ್ಣ ರಾಜೂರ, ಅಶೋಕ ಮಹಿಂದ್ರಕರ,ದಶರಥ ಲೋನಾರಿ,ಮಲ್ಲು ಸಜ್ಜನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*