ರಾಜ್ಯ ಸುದ್ದಿಗಳು
ಕುಮಟಾ:
ನಾನು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಳಾಗಿದ್ದಾಗ ಹೆಚ್ಚಿನ ಅನುದಾನ ತಂದು ಅಳಕೋಡ ವ್ಯಾಪ್ತಿಯಲ್ಲಿ ರಸ್ತೆ ಸೇತುವೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದೆ. ಸಿದ್ದರಾಮಯ್ಯನವರ ನೇತೃತ್ವದ ಅಂದಿನ ನಮ್ಮ ಸರ್ಕಾರ ಬಡವರ, ದೀನದಲಿತರ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಆದರೆ ಇಂದು ಕೇವಲ ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನೇ ಮುಂದುವರೆಸುತ್ತಿದ್ದಾರೆ ಹೊರತು ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಅಳಕೋಡ ವ್ಯಾಪ್ತಿಯ ಸುಮಾರು ೧೫ ಕ್ಕೂ ಹೆಚ್ಚಿನ ಮುಖಂಡರು ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರಾದ ಗಜಾನನ ಗಂಗು ಗೌಡ, ರಾಜೀವ ಮಂಜುನಾಥ್ ಗೌಡ, ಕೆ.ಎನ್.ಮಂಜು, ದುರ್ಗೆ ಹಮ್ಮು ಗೌಡ, ಹುಲಿಯಮ್ಮ ಗಂಗು ಗೌಡ, ಸುರೇಶ್ ಎನ್. ಗೌಡ, ಶಿವಾನಂದ ಹೆಚ್. ಗೌಡ, ಕುಸುಮಾಕರ ಎನ್. ಗೌಡ, ಈಶ್ವರ ಎಸ್ ಗೌಡ, ವಿಟ್ಟಪ್ಪ ಮಡಿವಾಳ, ಸುರೇಶ್ ಕೆ. ಗೌಡ, ತಿಮ್ಮಪ್ಪ ನಾಗು ಗೌಡ, ಪ್ರೇಮ ಸುರೇಶ್ ಗೌಡ, ಸಂಜೀವ ಗಣಪು ಗೌಡ ಮುಂತಾದವರುಗಳನ್ನು ಮಾಜಿ ಶಾಸಕಿ ಹಾಗೂ ಸಭೆಯಲ್ಲಿ ಹಾಜರಿದ್ದ ಪಕ್ಷದ ಮುಖಂಡರುಗಳು ಪಕ್ಷದಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಪ್ರಸ್ತಾವಿಕ ಮಾತನಾಡಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರತಿಯೊಬ್ಬರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ನಾಯಕ ಹಾಗೂ ಅಳಕೋಡ ಘಟಕಾಧ್ಯಕ್ಷರಾದ ಎಸ್.ಎಂ.ಭಟ್ ಹಾಗೂ ಅಳಕೋಡ ಪಂಚಾಯತಿಯ ಮಾಜಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ಶಾರದಾ ಮೋಹನ್ ಶೆಟ್ಟಿಯವರ ಶಾಸಕತ್ವದ ಅವಧಿಯಲ್ಲಿ ಅಳಕೋಡ ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನಾಗೇಶ್ ನಾಯಕ, ಯುವ ಮುಖಂಡ ರವಿಕುಮಾರ್ ಎಂ.ಶೆಟ್ಟಿ, ಭುವನ್ ಭಾಗ್ವತ್, ಎಸ್.ಎಂ.ಭಟ್, ಸುರೇಖಾ ವಾರೇಕರ್, ಮುಜಾಫರ್ ಸಾಬ್, ಕೃಷ್ಣಾನಂದ ವೆರ್ಣೇಕರ್, ವಿನಾಯಕ ಅಂಬಿಗ, ಜಗದೀಶ್ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.
Be the first to comment