ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕೆಲಸಗಾರರಿಂದ ಮೀನುಗಾರರ ಮೇಲೆ ಪ್ರಕರಣ ದಾಖಲು

ವರದಿಸುಚಿತ್ರಾ ನಾಯ್ಕ,ಹೊನ್ನಾವರ

ಜಿಲ್ಲಾ ಸುದ್ದಿಗಳು

ಹೊನ್ನಾವರ:

CHETAN KENDULI

ಟೊಂಕ ಭಾಗದ 7 ಜನ ಮೀನುಗಾರರ ಮೇಲೆ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲಸಗಾರರಿಂದ ದೂರು ದಾಖಲಾಗಿದೆ. ಹೊನ್ನಾವರ ತಾಲೂಕಿನ ಟೊಂಕ ಖಾಸಗಿ ವಾಣಿಜ್ಯ ಬಂದರು ಕಾಮಗಾರಿ ಕೆಲಸಕ್ಕೆ ಹೋದ ಕೆಲಸಗಾರರಿಗೆ ಮೀನುಗಾರರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿದ್ದಾರೆ. ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಕಂಪನಿಗೆ ಉದ್ಯೋಗಕ್ಕೆ ತೆರಳಿ ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಕಾಸರಕೋಡು ಗ್ರಾಮದ ರೇಣುಕಾ ಗಣಪತಿ ತಾಂಡೇಲ್, ಸುಧಾ ಸಂಜಯ್ ತಾಂಡೇಲ್, ಪುಷ್ಪಲತಾ ತಾಂಡೇಲ್, ಸುನೀತಾ ಸಂತೋಷ್ ತಾಂಡೇಲ್,ರಾಹುಲ್ ದತ್ತಾ ತಾಂಡೇಲ್, ರಾಜಶೇಷಯ್ಯ ತಾಂಡೇಲ್, ರೇಖಾ ಈಶ್ವರ ತಾಂಡೇಲ್, ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ಜಟಕೇಶ್ವರ ದೇವಸ್ಥಾನದ ತಿರುವಿನ ಹತ್ತಿರ ಅಡ್ಡಗಟ್ಟಿ ನಾಳೆಯಿಂದ ಕಂಪನಿ ಕೆಲಸಕ್ಕೆ ಬರಬಾರದು, ಮತ್ತೆ ನಾಳೆ ಕೆಲಸಕ್ಕೆ ಬಂದರೆ ಕಾರದಪುಡಿ, ಬಿಸಿ ಎಣ್ಣೆ ಹಾಕಿ ಶಾಶ್ವತವಾಗಿ ನೀವು ಕೆಲಸ ಮಾಡದ ಹಾಗೆ ಮಾಡುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ 2 ವರ್ಷಗಳಿಂದ ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದು ತುಂಬಾ ಕಷ್ಟದ ಪರಿಸ್ಥಿತಿಯ ಜೀವನ ನಡೆಸುತ್ತಾ ಬಂದಿದ್ದೇವೆ ನಮಗೆ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಲು ಕಳೆದ ಒಂದು ವಾರದಿಂದ ಸೇರಿಕೊಂಡಿದ್ದೇವೆ ನಮಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ ,ಈ ಕಂಪನಿಯಲ್ಲಿ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ. ನಾವು ದೂರು ನೀಡಿದ 7 ಜನ ಮೀನುಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸುವಂತೆ, ಮುಂದೆ ನಾವು ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದು ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Be the first to comment

Leave a Reply

Your email address will not be published.


*