ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಇಳಕಲ್ಲ ತಾಲೂಕಿನ ಗುಡೂರು ಗ್ರಾಮದಲ್ಲಿ ಇತ್ತೀಚಿಗೆ ದೌರ್ಜನ್ಯದಲ್ಲಿ ಕೊಲೆಯಾದ ಹನುಮಂತ ರಾಮಣ್ಣ ಭಜಂತ್ರಿ ಅವರ ಮನೆಗೆ ತೆರಳಿ ಜಿಲ್ಲಾಧಿಕಾರಿ ಹಾಗೂ ಪೆÇಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ 4,12,500 ರೂ.ಗಳ ಪರಿಹಾರ ಧನದ ಚೆಕ್ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಹುನಗುಂದ ತಾಲೂಕಿನ ಸಹಾಯಕ ನಿರ್ದೇಶಕರಾದ ರವಿ ಇದ್ದಲಗಿ ಯವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಹಾರ ಕಿಟ್ಟನ್ನು ನೀಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮದಡಿ ರಚನೆಯಾದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಸತೀಶ್ ಮಾದರ್ ರವರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವುದರೊಂದಿಗೆ ಸರ್ಕಾರದ ಸೌಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಚೇರಿಯ ವಿಷಯ ನಿರ್ವಾಹಕರಾದ ಜಗದೀಶ್ ಪಟ್ಟಣಶೆಟ್ಟಿ, ಹುನಗುಂದ ತಾಲೂಕಿನ ನಿಲಯಪಾಲಕರಾದ ಕಲ್ಮೇಶ್ ಬಜಂತ್ರಿ, ವಿದ್ಯಾಧರ ಹುನುಗುಂದ, ಎಸ್.ವಿ.ಹಿರೇಮಠ, ಕೊರಮ ಸಮಾಜದ ಅಧ್ಯಕ್ಷರಾದ ನಾನಪ್ಪ ಬಜಂತ್ರಿ, ಗ್ರಾಮಸ್ಥರಾದ ಅಶೋಕ್ ಭಜಂತ್ರಿ, ಶಶಿಕಾಂತ ಭಜಂತ್ರಿ, ಅಂದಾನೆಪ್ಪ ಲೆಕ್ಕದ, ಮಹಾಲಿಂಗಯ್ಯ ವಸ್ತ್ರದ, ತಿಪ್ಪನ್ನವರ, ದಲಿತ ಮುಖಂಡರಾದ ಹನುಮಂತ ಹಿರೇಮನಿ, ವಿಜಯಶಂಕರ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
Be the first to comment