ಜಿಲ್ಲಾ ಸುದ್ದಿಗಳು
ಕುಮಟಾ
ಬೆಂಗಳೂರಿನ ತಾಂಡವ ಕಲಾನಿಕೇತನ ಸಂಸ್ಥೆಯಿಂದ ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ಕುಮಟಾ ವೈಭವ ಕಾರ್ಯಕ್ರಮ ಡಿಸೆಂಬರ್ ೮ ರಿಂದ ೧೨ ರವರೆಗೆ ನಡೆಯಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.ಕುಮಟಾದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಅವರು ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕುಮಟಾ ವೈಭವ ಎಂಬ ಸಾಂಸ್ಕೃತಿಕ-ಮನರಂಜನೆ ಕಾರ್ಯಕ್ರಮ ಪಟ್ಟಣದ ಮಣಕಿ ಮೈದಾನದಲ್ಲಿ ಡಿಸೆಂಬರ್ ೮ ರಿಂದ ೧೨ ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಕಾರಣದಿಂದ ಕಳೆದ ವರ್ಷಗಳಲ್ಲಿ ಕುಮಟಾ ವೈಭವ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಪರಿಸ್ಥಿತಿ ಉತ್ತಮವಾಗಿದ್ದು, ೫ ದಿನಗಳ ಕಾರ್ಯಕ್ರಮದಲ್ಲಿ ಸ್ಥಳೀಯ ಕಲೆಗಳಿಗೆ ಪ್ರೋತ್ಸಾಹ ನೀಡುವುದಕ್ಕೆ ಹೆಚ್ಚಿನ ಸಮಯಾವಕಾಶ ನೀಡಲಾಗುತ್ತಿದೆ. ಪ್ರತಿನಿತ್ಯ ಸಂಜೆ ೬ ರಿಂದ ೮ ಗಂಟೆವರೆಗೆ ಹಾಗೂ ಒಂದು ದಿನ ಸಂಪೂರ್ಣವಾಗಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು.
ಈ ಹಿಂದಿನ ವರ್ಷಗಳಲ್ಲಿ ನಡೆಸಿದ ಕುಮಟಾ ವೈಭವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಡೆಸಿದ ಆಯ್ಕೆ ಸಂದರ್ಶನಕ್ಕೆ ಸ್ಥಳೀಯ ಕಲಾವಿದರು ಸರಿಯಾಗಿ ಸ್ಪಂದಿಸಿಲ್ಲ. ಈ ಬಾರಿಯಾದರೂ ಸ್ಥಳೀಯರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನು ನಮ್ಮೆಲ್ಲರನ್ನೂ ಅಗಲಿದ ನಟ ಪುನೀತರಾಜಕುಮಾರ್ ಸ್ಮರಣೆಯಲ್ಲಿ ಒಂದು ದಿನದ ಕಾರ್ಯಕ್ರಮವನ್ನು ಸಮರ್ಪಿಸಲಾಗುವುದು. ಉಳಿದಂತೆ ಸಿನಿಮಾ ಹಾಗೂ ಟಿವಿ ಕಲಾವಿದರ ತಂಡಗಳು, ರಸಮಂಜರಿ ಇನ್ನಿತರ ಭರಪೂರ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯಾಗದು. ಕೆಲವೇ ದಿನದಲ್ಲಿ ಸಂಪೂರ್ಣ ಕಾರ್ಯಕ್ರಮದ ವಿವರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ನಾಯ್ಕ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗೇಶ ನಾಯ್ಕ, ಶಿವರಾಮ ಉಪಸ್ತಿತರಿದ್ದರು.
Be the first to comment