ಅರ್ಚಕರ ಭವನ ನಿರ್ಮಾಣ ಮಾಡಿಕೊಡಲು ಶಾಸಕರ ಸಹಕಾರ ಕೋರಿದ ಅರ್ಚಕ ವೃಂದ – ಬಿದಲೂರು ಚನ್ನಕೇಶವ ಸ್ವಾಮಿ ದೇಗುಲಕ್ಕೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಭೇಟಿ 

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ಬಿದಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಕ್ಕೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರ ಭವನ ನಿರ್ಮಾಣ ಮಾಡಿಕೊಡುವಂತೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರಿಗೆ ದೇವನಹಳ್ಳಿ ತಾಲೂಕು ಮುಜುರಾಯಿ ದೇವಾಲಯಗಳ ಅರ್ಚಕರ ಸಂಘದ ವತಿಯಿಂದ ಅರ್ಚಕರ ಸಮುದಾಯದವರು ಬೇಡಿಕೆಯನ್ನಿಟ್ಟಿದ್ದು, ನೆರವೇರಿಸಿಕೊಡುವುದಾಗಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು. 

ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಹೊಸವರ್ಷದ 2022ರಲ್ಲಿ ಹೊಸದಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಕೋವಿಡ್ ಮಹಾಮಾರಿ ಕಳೆದ 2018ರಿಂದ ಜನರಿಗೆ ಕಾಡುತ್ತಿದೆ. ಸಾಕಷ್ಟು ಅನಾಹುತಗಳೂ ಸಹ ಕಣ್ಣಿನಿಂದ ನೋಡಿದ್ದೇವೆ. ಪ್ರತಿಯೊಬ್ಬರು ಆರೋಗ್ಯ, ಆಯಸ್ಸು, ಐಶ್ವರ್ಯ, ಎಲ್ಲವೂ ಸ್ವಾಮಿ ಕರುಣಿಸಬೇಕು ಈ ತಾಲೂಕಿನ ಪ್ರತಿ ರೈತರು, ಜನರಿಗೂ ಸ್ವಾಮಿ ಕಾಪಾಡುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. ವಿಶೇಷವಾಗಿ ಅರ್ಚಕರ ಸಂಘದ ವತಿಯಿಂದ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಅರ್ಚಕರ ಭವನ ನಿರ್ಮಾಣ ಮಾಡಬೇಕಾದರೆ ಜಾಗವನ್ನು ಗುರ್ತಿಸಬೇಕಾಗುತ್ತದೆ. ತಾವುಗಳು ಜಾಗವನ್ನು ಗುರ್ತಿಸಿಕೊಟ್ಟರೆ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಇನ್ನೂ ಕಾರ್ಯಕ್ರಮದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರನ್ನು ಅಭಿನಂದಿಸಲಾಯಿತು. ರಾಮನಾಥಪುರ ಶ್ರೀ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಮಂಜುನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೋಡಗುರ್ಕಿ ಕತ್ತಿಮಾರಮ್ಮ ದೇವಾಲಯದ ಅರ್ಚಕ ಶ್ರೀಧರ್ ದೀಕ್ಷಿತ್, ಕಾರ್ಯಾಧ್ಯಕ್ಷ ಗಣೇಶ್, ದೇವನಹಳ್ಳಿ ತಾಲೂಕು ಮುಜುರಾಯಿ ದೇವಾಲಯಗಳ ಅರ್ಚಕರ ಸಂಘದ ಪದಾಧಿಕಾರಿಗಳು, ಬಿದಲೂರು ಗ್ರಾಮದ ಮುಖಂಡರು, ಗ್ರಾಮಸ್ಥರು, ಭಕ್ತಾಧಿಗಳು ಇದ್ದರು.

Be the first to comment

Leave a Reply

Your email address will not be published.


*