ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಮಾರುತಿ ತುಕಾರಾಂ ಮಾನ್ಪಡೆಯ ಪುಣ್ಯಸ್ಮರಣೆ ಕಾರ್ಯಕ್ರಮ. ಮಾರುತಿ ತುಕಾರಾಂ ಮಾನ್ಪಡೆಯು ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಜೂನ್ 01, 1956 ರಲ್ಲಿ ಜಮಿಸಿದ್ದ ಮಾನ್ಪಡೆ, ಸಿಪಿಐಎಂ ಮುಖಂಡರಾಗಿ, ರೈತ ನಾಯಕರಾಗಿ ಜನಪರ ಹೋರಾಟಗಳ ಮೂಲಕವೇ ಬೆಳೆದು ಬಂದಿದ್ದರು. ಇದೀಗ ಮಾನ್ಪಡೆ ಹೋರಟದೊಂದಿಗೇ ತಮ್ಮ ಬದುಕನ್ನೂ ಅಂತ್ಯಗೊಳಿಸಿದ್ದಾರೆ. ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28 ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಶ್ರಮಿಸಿದ್ದ ಮಾರುತಿ ಮಾನ್ಪಡೆ, ಅದರ ನಂತರ ಅನಾರೋಗ್ಯಪೀಡಿತರಾಗಿದ್ದರು. ಕೋವಿಡ್ ಪಾಟಿಸಿವ್ ಬಂದಿದೆ ಎಂದು ದೃಢಪಟ್ಟ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರದ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೋವಿಡ್ ನೆಗೆಟಿವ್ ಎಂದು ವರದಿ ಬಂದ ನಂತರವೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ನ್ಯೂಮೋನಿಯಾಕ್ಕೆ ತುತ್ತಾಗಿದ್ದ ಮಾನ್ಪಡೆ ಕೊನೆಗೂ ಇಂದು ಇಹಲೋಕ ತ್ಯಜಿಸಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮಾರುತಿ ತುಕಾರಾಂ ಮಾನ್ಪಡೆ ತೀರಿಹೋಗಿ ಇಂದಿಗೆ ಒಂದು (೨೦-೧೦-೨೦೨೦ ) ವರ್ಷ ಕಳೆಯಿತುಅವರ ಸಾವು ಅಸಲೀ ಹೋರಾಟಗಾರನ ಕಣ್ಮರೆ ಮಾತ್ರವಲ್ಲ ಅದು ದಮನಿತರ ಧ್ವನಿಯ ಕಣ್ಮರೆಯಾಗಿದೆ.
ಆರ್.ಎಸ್ ಬಸವರಾಜ ರಾಜ್ಯ ಖಜಾಂಚಿ ಮಾತನಾಡುತ್ತಾ ಪ್ರಾಂತ ರೈತ ಸಂಘ ( KPR ) ಅದಾದ ಕೆಲವೇ ವರ್ಷಗಳ ಬಳಿಕ ಪ್ರಾಯಶಃ ೧೯೮೬ ರಲ್ಲಿ ಅವರು ಸರಕಾರಿ ನೌಕರಿಗೆ ರಾಜೀನಾಮೆ ನೀಡಿದರು. ತದನಂತರದಲ್ಲಿ ಜರುಗಿದ ಕಲಬುರ್ಗಿ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ.ಭಾರತ ಕಮ್ಯುನಿಸ್ಟ್ ಪಕ್ಷದ ( CPIM ) ಅಭ್ಯರ್ಥಿಯಾಗಿ ಅತ್ಯಧಿಕ ಮತಗಳಿಸಿ ‘ ಚಿಂಚನಸೂರು ‘ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಗೆದ್ದು ಬಂದು ಇಡೀ ರಾಜ್ಯದಲ್ಲೇ ಅವರ ಪಕ್ಷದ ಏಕಮೇವಾದ್ವಿತೀಯ ಗೆಲುವಿನಂತಿತ್ತು. ಅಂದು ಕಲಬುರ್ಗಿ ಜಿಲ್ಲಾ ಪರಿಷತ್ತಿನಲ್ಲಿ ಜನತಾಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಸಮಬಲ ಗಳಿಸಿದ್ದವು.ಆಗ ಮಾರುತಿ ಯಾರಿಗೆ ಸಪೋರ್ಟ್ ಮಾಡ್ತಾರೋ ಕಲಬುರ್ಗಿ ಜಿಲ್ಲಾಪರಿಷತ್ತಿನಲ್ಲಿ ಅವರ ಸರ್ಕಾರ ರಚನೆಯ ಅನಿವಾರ್ಯ ಸ್ಥಿತಿ. ಅವತ್ತಲ್ಲ ಯಾವತ್ತೂ ಮಾನ್ಪಡೆ ತನ್ನ ರಾಜಕೀಯ ಶಕ್ತಿ ಮಾರಿಕೊಳ್ಳಲಿಲ್ಲ.ಮಾನ್ಪಡೆ ಯ ಬೆಂಬಲದಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಜಿಲ್ಲಾ ಪರಿಷತ್ತಿನ ಸರ್ಕಾರ ರಚನೆಯಾಯಿತು. ಗ್ರಾಮೀಣ ಅಭಿವೃದ್ಧಿ ಸಚಿವ ಅಬ್ದುಲ್ ನಜೀರಸಾಬ , ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಮಕ್ಷಮ ಏರ್ಪಟ್ಟ ಅನುಸಂಧಾನವದು. ಅಂದು ಇಂದು ತಮ್ಮತನವನ್ನು ಮಾರಿಕೊಳ್ಳದ ಒಬ್ಬ ನಿಷ್ಟಾವಂತ ಸಮಾಜ ಸೇವಕರೆಂದರೆ ಅದುವೇ ನಮ್ಮ ಮಾರುತಿ ತುಕಾರಾಂ ಮಾನ್ಪಡೆ ಎಂದರು.
ಇವರ ಅಗಲಿಕೆ ನಮ್ಮ ದೇಹದಲ್ಲಿನ ಶಕ್ತಿ ಕುಂದಿ ಹೋದಂತೆಯಾಗಿದೆ ಎಂದು ನೆರೆದಿರುವ ಗ್ರಾಮ ಪಂಚಾಯಿತಿ ನೌಕರರ ಸಂಘದವರೆಲ್ಲಾ ಎದ್ದು ನಿಂತು ಸ್ವಲ್ಪ ನಿಮಿಷಗಳ ಕಾಲ ಶಾಂತತೆಯಿಂದ ತಮ್ಮ ಮನದಲ್ಲಿಯೇ ಸ್ಮರಿಸಿ ನಮಸ್ಕರಿಸಿದರು.ಈ ಸಂದರ್ಭದಲ್ಲಿ ಆರ್.ಎಸ್ ಬಸವರಾಜ ರಾಜ್ಯ ಕ.ರಾ.ಗ್ರಾ.ಪಂ. ನೌ.ಸಂಘದ ಖಜಾಂಚಿ, ಅಶೋಕ ಜಿಲ್ಲಾ ಗ್ರಾ.ಪಂ.ನೌ.ಸಂಘ ರಾಯಚೂರು, ಮೌನೇಶ ಮಟ್ಟೂರು ಗ್ರಾ.ಪಂ.ನೌ.ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವೀರೇಶ ಸ್ವಾಮಿ ತಾಲೂಕ ಗ್ರಾ.ಪಂ.ನೌ.ಸಂಘದ ಅಧ್ಯಕ್ಷರು ಸಿಂಧನೂರು, ಥಾಮಸ್ ಗ್ರಾ.ಪಂ.ನೌ.ಸಂಘದ ತಾಲೂಕ ಉಪಾಧ್ಯಕ್ಷರು ಮಸ್ಕಿ, ಷಣ್ಮುಕಪ್ಪ ಗ್ರಾ.ಪಂ.ನೌ.ಸಂಘದ ಪ್ರಧಾನ ಕಾರ್ಯದರ್ಶಿ ಮಸ್ಕಿ, ಹಾಗೂ ತಾಲೂಕಿನ 21 ಗ್ರಾಮ ಪಂಚಾಯಿತಿಗಳ ನೌಕರರ ಸಂಘದವರು ಭಾಗಿಯಾಗಿದ್ದರು.
Be the first to comment