ಕೇರಳದ ಕೊಟ್ಟಾಯಂನಲ್ಲಿ ಅತಿ ದೊಡ್ಡ ವೈಫ್ ಸ್ವ್ಯಾಪಿಂಗ್ ಜಾಲ ಬಯಲು…!! ಹಣ, ಸೆಕ್ಸ್ ಗಾಗಿ ಹೆಂಡತಿಯರನ್ನೇ ಅದಲು ಬದಲು ಮಾಡಿಕೊಳ್ಳುವ ಗ್ಯಾಂಗ್ ನಲ್ಲಿ ಸಾವಿರಾರು ಮಂದಿ‌ ಭಾಗಿ..!! ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ….

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಮಂಗಳೂರು

ಬಹುಕಾಲದಿಂದ ವೈಫ್​​ ಸ್ವ್ಯಾಪಿಂಗ್​ ಎಂಬ ದೊಡ್ಡ ಸ್ಕ್ಯಾಮ್ ಸುದ್ದಿಯಾಗಿರಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ವರದಿಗಳಾಗುತ್ತಿದ್ದರೂ ಅದೇನು ಅಂತಹ ದೊಡ್ಡ ಗಾತ್ರದ ಜಾಲಗಳಾಗಿರಲಿಲ್ಲ. ಆದರೆ ಇದೀಗ ಕೇರಳದಲ್ಲಿ ವೈಫ್ ಸ್ವ್ಯಾಪಿಂಗ್ ಅಥವಾ ಸೆಕ್ಸ್​​​ ಹಣಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ದೊಡ್ಡ ಜಾಲವೊಂದು ಬಯಲಾಗಿದೆ. ಚಂಗನಾಶ್ಶೇರಿ ಮೂಲದ ಒಬ್ಬ ಮಹಿಳೆಯ ಮೇಲೆ 9 ಮಂದಿ ಅತ್ಯಾಚಾರ ಎಸಗಿರುವುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಫ್​​ ಸ್ವ್ಯಾಪಿಂಗ್ ಗ್ಯಾಂಗ್ ​ನ 6 ಸದಸ್ಯರನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ.

CHETAN KENDULI

ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬಾತ ವಿದೇಶಕ್ಕೆ ತೆರಳಿದ್ದಾನೆ. ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಕರುಕಾಚಲ ಪೊಲೀಸರು ತಿಳಿಸಿದ್ದಾರೆ. ಶಂಕಿತರು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳವರು ಎಂದು ತಿಳಿದು ಬಂದಿದೆ.ಈ ಗ್ಯಾಂಗ್ ಫೇಸ್ಬುಕ್ ಮೆಸೆಂಜರ್ ಮತ್ತು ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಕೆಲಸ ಮಾಡುತ್ತಿತ್ತು. ಈ ಗ್ರೂಪ್ ಗಳಲ್ಲಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಒಂಬತ್ತು ಆರೋಪಿಗಳ ಪೈಕಿ ಐವರು ತಮ್ಮ ಸಂಗಾತಿಯೊಂದಿಗೆ ಸಭೆಗೆ ಬಂದಿದ್ದರು ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ. ಸಭೆಯ ಸಮಯದಲ್ಲಿ ಸಂಗಾತಿಗಳು ಲೈಂಗಿಕತೆಗಾಗಿ ವಿನಿಮಯ ಮಾಡಿಕೊಂಡಿದ್ದು, ಇತರ ನಾಲ್ವರು ತಮ್ಮ ಪಾಲುದಾರರಿಲ್ಲದೆ ಬಂದಿದ್ದು ಮತ್ತು ಅವರನ್ನು ಸ್ಟಡ್ ಎಂದು ಕರೆಯಲಾಗುತ್ತದೆ. ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಸ್ಟಡ್‌ಗಳಿಂದ 14,000 ರೂ. ಹಣ ಸಂಗ್ರಹಿಸಲಾಗಿತ್ತು ಎಂಬ ವಿಚಾರವನ್ನೂ ಮಹಿಳೆ ಬಹಿರಂಗ ಪಡಿಸಿದ್ದಾರೆ.ಕೇರಳದಲ್ಲಿ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ ಎಂದು ಊಹಿಸಲಾಗಿದೆ. ಟೆಲಿಗ್ರಾಮ್, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ‘ಮೀಟಪ್ ಕೇರಳ’, ‘ಕಪಲ್ ಮೀಟ್ ಕೇರಳ’, ‘ಕುಕೋಲ್ಡ್ ಕೇರಳ’, ‘ರಿಯಲ್ ಮೀಟಿಂಗ್’ ಇತ್ಯಾದಿ ಹೆಸರುಗಳಲ್ಲಿ ಗ್ಯಾಂಗ್ ನ ಗ್ರೂಪ್ ಗಳು ಸಕ್ರಿಯವಾಗಿವೆ.

ಈ ಗ್ರೂಪ್ನಲ್ಲಿ ಸದಸ್ಯರು ಪರಸ್ಪರ ಚಾಟ್ ಮಾಡಬಹುದು ಮತ್ತು ಪರಿಚಯ ಮಾಡಿಕೊಳ್ಳಬಹುದು. ಸಂಗಾತಿಯ ವಿನಿಮಯಕ್ಕೆ ಒಪ್ಪಿಗೆಯನ್ನು ಕಳುಹಿಸಿದ ನಂತರ, ಅವರು ಯಾರೊಬ್ಬರ ಮನೆ, ಹೋಂಸ್ಟೇಗಳು, ರೆಸಾರ್ಟ್‌ಗಳು ಇತ್ಯಾದಿಗಳಲ್ಲಿ ಒಟ್ಟುಗೂಡುತ್ತಾರೆ. ಹೆಚ್ಚಿನವರು ಯಾವುದೇ ಅನುಮಾನವನ್ನು ತಪ್ಪಿಸಲು ಮಕ್ಕಳೊಂದಿಗೆ ಬರುತ್ತಾರೆ. ತನ್ನ ಪತಿ ಏಕಕಾಲದಲ್ಲಿ ಅನೇಕ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಬಹಿರಂಗಪಡಿಸಿದ್ದಾರೆ.ಬೇರೆ ಪುರುಷರಿಗೆ ಲೈಂಗಿಕತೆಯನ್ನು ನಿರಾಕರಿಸಿದರೆ ಅಥವಾ ಯಾರೊಂದಿಗಾದರೂ ವಿಷಯವನ್ನು ಹಂಚಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಕೆಯ ಪತಿ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿರುವುದಾಗಿಯೂ ದೂರಲಾಗಿದೆ. ಹೀಗಾಗಿ ಈ ಗ್ರೂಪ್ ಗಳ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ..

Be the first to comment

Leave a Reply

Your email address will not be published.


*