ನಿಸ್ವಾರ್ಥ ಸೇವೆ ಮೆಚ್ಚಿ ಸನ್ಮಾನಿಸಿದ ಜನ ನಾಯಕ ಎ.ಎಸ್.ಪಾಟೀಲ ನಡಹಳ್ಳಿ…!!!

ವರದಿ: ಡಿ.ಬಿ.ವಡವಡಗಿ, ಮುಖ್ಯಸ್ಥರು

ರಾಜ್ಯ ಸುದ್ದಿಗಳು

ಅಂಬಿಗ್ ನ್ಯೂಸ್ ತಂಡ

ಮುದ್ದೇಬಿಹಾಳ:

ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಿಸಿ ಬಡವರ ಓದಿಗೆ ನೆರವಾಗಿದ್ದರು. ಅಂಥ ನೆರವು ಪಡೆದವರಲ್ಲಿ ನಾವೂ ಒಬ್ಬರು. ಕೊರೊನಾ ಎರಡನೇ ಅಲೆಯ ಸಂಕಷ್ಟದಲ್ಲಿ ರೋಗಿಗಳಿಗೆ, ಪೊಲೀಸರಿಗೆ, ವೈದ್ಯಕೀಯ ಸಿಬ್ಬಂದಿಗೆ ಶಾಸಕರು ಉಚಿತವಾಗಿ ವಿತರಿಸಿದ ಪ್ರೋಟಿನ್‌ಯುಕ್ತ ಲಘು ಉಪಾಹಾರ ಕಿಟ್‌ಗಳನ್ನು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ನಿತ್ಯವೂ ಸಂಬಂಧಿಸಿದವರಿಗೆ ತಲುಪಿಸುವ ಸೇವೆ ಮಾಡುವ ಮೂಲಕ ನಾವು ಅವರ ರುಣ ತೀರಿಸುವ ಸಣ್ಣ ಪ್ರಯತ್ನ ಮಾಡಿದ್ದೇವೆ. ಇಂಥ ಉದಾರ ದಾನಿಗಳು ಇರುವುದರಿಂದಲೇ ನಮ್ಮ ತಾಲೂಕಿನಲ್ಲಿ ಬಡವರು ಬದುಕಲು ಸಾಧ್ಯವಾಗಿದೆ ಎಂದು ಶಾಸಕ ನಡಹಳ್ಳಿಯವರ ಅಭಿಮಾನಿ ಚೇತನ್ ಶಿವಸಿಂಪಿ ಹೇಳಿದರು.


ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ತಮ್ಮ ಕುಟುಂಬ ಮತ್ತು ಜನತೆಯ ವತಿಯಿಂದ ನೀಡಿದ ತುಂಬು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಶಿವಬಸ್ಸು ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಪ್ರಭಾರ ಇಓ ವೀರೇಶ ಹಿರೇಮಠ, ಸಿಪಿಐ ಆನಂದ ವಾಘ್ಮೋಡೆ, ಶ್ರೀ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಮಲ್ಲನಗೌಡ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ, ಗ್ರಾಪಂ ಪಿಡಿಓ ಪಿ.ಎಸ್.ನಾಯ್ಕೋಡಿ ವೇದಿಕೆಯಲ್ಲಿದ್ದರು. ಇದೇ ವೇಳೆ ಶಾಸಕರು ಚೇತನ್ ದಂಪತಿಗೆ ತುಂಬು ಆಹೇರಿಯೊಂದಿಗೆ ಸನ್ಮಾನಿಸಿ ಶುಭ ಕೋರಿದರು.
ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿತರಿಗೆ, ವೈದ್ಯಕೀಯ ಸಿಬ್ಬಂದಿಗೆ ಹಾಗೂ ಪೊಲೀಸರಿಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಉಚಿತವಾಗಿ ಕೊಟ್ಟ ಪ್ರೋಟಿನ್‌ಯುಕ್ತ ಲಘು ಉಪಹಾರದ ಕಿಟ್ ವಿತರಣೆಗೆ ನಿಸ್ವಾರ್ಥವಾಗಿ ೪೦ ದಿನಗಳವರೆಗೆ ಶ್ರಮಿಸಿದ ಶಾಸಕರ ಅಭಿಮಾನಿ ಚೇತನ್ ಅವರು ತಮ್ಮ ಮನೆಯಲ್ಲೇ ಪತ್ನಿಯೊಂದಿಗೆ ಸ್ವಚ್ಛ ಪರಿಸರದಲ್ಲಿ ಪ್ರೋಟಿನ್‌ಯಕ್ತ ಲಘು ಉಪಹಾರದ ಕಿಟ್‌ಗಳನ್ನು ತಯಾರಿಸಿ ಸ್ವತಹ ತಾವೇ ಆಸ್ಪತ್ರೆ, ಪೊಲೀಸ್ ಠಾಣೆಗೆ ತೆರಳಿ ನಿತ್ಯವೂ ಸಕಾಲಕ್ಕೆ ತಲುಪಿಸುವ ಸೇವೆ ಮಾಡಿದ್ದರು. ಇದರಿಂದ ಬಹಳಷ್ಟು ರೋಗಿಗಳು ಬೇಗ ಗುಣಮುಖರಾಗಲು, ಪೊಲೀಸರು ದೈಹಿಕ ಶ್ರಮದ ನಡುವೆಯೂ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ಕಾಳಜಿ ತೋರಿಸಿದ್ದರು. ಹೀಗಾಗಿ ಚೇತನ್ ಅವರ ನಿಸ್ವಾರ್ಥ ಸೇವೆಗೆ ಸ್ಪಂಧಿಸಿ ಶಾಸಕರು ಈ ಮೂಲಕ ಚೇತನ್‌ಗೆ ಪ್ರೋತ್ಸಾಹ ನೀಡಿದರು.

Be the first to comment

Leave a Reply

Your email address will not be published.


*