ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಇಡೀ ವಿಶ್ವವೇ ಕೋರೋನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗಿದ್ದ ಜನತೆಯೂ,ಕೋರೋನಾ ಪಾಸಿಟಿವ್ ಸಂಖ್ಯೆಗಳು ಕೂಡ ಕಡಿಮೆಯಾಗುತ್ತಿದ್ದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ. ಸರಿ ಸುಮಾರು 2 ವರ್ಷ 6 ತಿಂಗಳ ಬಳಿಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೆದಿಕಿನಾಳದಲ್ಲಿ ಇಂದು ಅಕ್ಷರ ದಾಸೋಹ ಆರಂಭಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಲ್ಲಮ್ಮ ಇವರ ನೇತೃತ್ವದಲ್ಲಿ ಸಕಲ ಸಿದ್ಧತೆಯೊಂದಿಗೆ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಸಮಾಜಿಕ ಅಂತರದೊಂದಿಗೆ ಮಕ್ಕಳಿಗೆ ಬಡಿಸಿದರು. ತುಂಬಾ ಖುಷಿಯಿಂದ ಮಕ್ಕಳು ಊಟಮಾಡುತ್ತಾ ಹರ್ಷ – ಉಲ್ಲಾಸದಿಂದ ಸವಿದರು.ಈ ಸಂದರ್ಭದಲ್ಲಿ ಮಲ್ಲಮ್ಮ ಸ.ಮಾ. ಹಿ. ಪ್ರಾ. ಶಾಲೆ ಮೆದಿಕಿನಾಳ, ಶ್ರೀಕಾಂತಮ್ಮ ಶಿಕ್ಷಕಿ, ಶಿವಪ್ಪ ರಾಥೋಡ್ ಶಿಕ್ಷಕ,ಭವ್ಯ ಶಿಕ್ಷಕಿ, ಛಾಯ ಶಿಕ್ಷಕಿ , ಅಂಬಿಕಾಶಿಕ್ಷಕಿ,ಚಾಂದಖಾಜ್ ದೇವಪ್ಪ ಶಿಕ್ಷಕರು ಸೇರಿದಂತೆ ಅಡುಗೆಯವರು ಮತ್ತು ಅಡುಗೆ ಸಹಾಯಕರು ಹಾಗೂ ಶಾಲಾ ಮಕ್ಕಳಿದ್ದರು.
Be the first to comment