ದಾಂಡೇಲಿಯ ಕವಳೇಶ್ವರ ಸಮೀಪ ಭೂಮಿ ಕುಸಿದು ಸೇತುವೆ ಸಂಪರ್ಕ ಕಡಿತ : ಸೇತುವೆ ನಿರ್ಮಾಣಕ್ಕೆ ಆಗ್ರಹ 

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು 

ದಾಂಡೇಲಿ:

CHETAN KENDULI

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಂಬಿಕಾನಗರದ‌ ಕವಳೇಶ್ವರ ದೇವಾಲಯಕ್ಕೆ ತೆರಳುವ ಸೇತುವೆ ಕೊಚ್ಚಿ ಹೋಗಿ ಭಕ್ತರ ಆತಂಕಕ್ಕೆಕಾರಣವಾಗಿದೆ. ಶಿವರಾತ್ರಿ ಒಳಗಡೆ ಭಕ್ತರಿಗೆ ಅನುಕೂಲವಾಗುವ ಹಾಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ .

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಪ್ರಸಿದ್ದವಾಗಿರುವ ಕವಳೇಶ್ವರ ಗುಹೆಯನ್ನು ಸಂಪರ್ಕಿಸುವ ಮಾರ್ಗವಾಗಿದೆ. ಈ ದೇವಾಲಯಕ್ಕೆ ಹಿಂದೆ ಪಾಂಡವರು ಬಂದು ಪೂಜೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ. ನಿಸರ್ಗ ನಿರ್ಮಿತವಾಗಿರುವ ಶಿವಲಿಂಗದ ದರ್ಶನ ಪಡೆಯಲು ದೂರದೂರಿನಿಂದ ಭಕ್ತರು ಆಗಮಿಸ್ತಾರೆ.

ಕಳೆದ ಕೆಲ ದಿನಗಳಿಂದ ಇಲ್ಲಿ ಗುಡ್ಡ ಕುಸಿಯುತ್ತಿದೆ. ಜುಲೈ ಕೊನೆಯ ವಾರದಲ್ಲಿ ಸುರಿದ ಬಾರೀ ಮಳೆಗೆ ಇಲ್ಲಿನ ಪ್ರದೇಶ ಅಕ್ಷರಶಃ ಕುಸಿಯುತ್ತಾ ಸಾಗಿದೆ. ಅಲ್ಲದೇ ಗುಡ್ಡದ ಪಕ್ಕದಲ್ಲಿ ಹರಿಯುತ್ತಿರುವ ಹೊಳೆಗೆ ನಿರ್ಮಿಸಿದ ಸೇತುವೆ ಕುಸಿದು ಹೋಗಿದೆ. ಜೊತೆಗೆ ಕವಳೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದ ಮೆಟ್ಟಿಲುಗಳು ಕೂಡ ಹಾಳಾಗಿವೆ. ಶ್ರಾವಣ ಸಂದರ್ಭದಲ್ಲಿ ಭಕ್ತರು ಸೇರಿ ಮರದ ಸೇತುವೆ ಮಾಡಿಕೊಂಡಿದ್ದರು. ಆದ್ರೆ ಮರದ ಸೇತುವೆ ಕೂಡ ನೆರೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಇದೀಗ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಕ್ತರ ಆತಂಕಕ್ಕೆ ಕಾರಣವಾಗಿದೆ. ಬರುವ ಮಾರ್ಚ್ ನಲ್ಲಿ ನಡೆಯುವ ಶಿವರಾತ್ರಿ ಮುಂಚಿತವಾಗಿ ಸೇತುವೆ ವ್ಯವಸ್ಥೆ ಮಾಡಿಕೊಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*