ಜಿಲ್ಲಾ ಸುದ್ದಿಗಳು
ತಾಳಿಕೋಟಿ:
ತಾಲೂಕಿನ ಬಾವೂರ ಗ್ರಾಮದಲ್ಲಿ ಒಂದೇ ನಿವೇಶನಕ್ಕೆ ಎರಡು ಕುಟುಂಬಸ್ಥರು ಬಡೆದಾಟ ಮಾಡುವ ಪ್ರಸಂಗವನ್ನು ಸ್ಥಳೀಯ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷದಿಂದ ನಡೆದಿದೆ.
ಬಾವೂರ ಗ್ರಾಮದ ಬಸಮ್ಮ ಅಡ್ಡಿ ಎಂಬುವರಿಗೆ ಹಲವು ವರ್ಷಗಳ ಹಿಂದೆ ಪಂಚಾಯತಿಯಿಂದ ನಿವೇಶನ ಮಂಜೂರಾಗಿತ್ತು. ಆದರೆ ನಿವೇಶನದಲ್ಲಿ ಅರ್ಧ ಭಾಗದಷ್ಟು ಮಾತ್ರ ಅವರು ಕಟ್ಟಡ ನಿರ್ಮಾಣಿಸಿದ್ದು ಇನ್ನುಳಿದ ಜಾಗಕ್ಕೆ ಗ್ರಾಮದ ಇನ್ನೊಬ್ಬರು ಕಣ್ಣು ಹಾಕಿ ನಿವೇಶನ ಕಭಲಿಸುವ ತಂತ್ರ ರೂಪಿಸಿದ್ದಾರೆ. ಇದರ ಬಗ್ಗೆ ಸ್ಥಳೀಯ ಪಿಡಿಒ ಅವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನ್ಯಾಯಾಲಯ ಮೊರೆ ಹೋದ ಬಸಮ್ಮ:
ತಮ್ಮ ನಿವೇಶನ ಕಬಲಿಕೆಯ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ನಿಸಹಾಯಕರಾದ ಬಸಮ್ಮ ಚಂದ್ರಶೇಖರ ಅಡ್ಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ದುರದೃಷ್ಟವೇನೆಂದರೆ ವಿರೋಧಿಗಳು ನಿವೇಶನದಲ್ಲಿ ಮನೆಕಟ್ಟಲು ಮುಂದಾಗಿದ್ದು ನ್ಯಾಯಾಲಯದ ಮಾತಿಗೂ ಕಿಮ್ಮತ್ತಿರಲಾಗಿದೆ.
ಸ್ಪಂಧನೆ ನೀಡಿದ ತಹಸೀಲ್ದಾರ್ ಹಾಗೂ ತಪಂ ಇಒ:
ಅಸಹಾಯಕ್ಕೆ ಬೇಸತ್ತ ಬಸಮ್ಮ ಅಡ್ಡಿ ಅವರು ತಮಗೆ ಆಗುತ್ತಿದ್ದ ಮೋಸದ ಬಗ್ಗೆ ಸ್ಥಳೀಯ ತಹಸೀಲ್ದಾರ್ ಅನಿಲ ಧವಳಗಿ ಹಾಗೂ ತಾಪಂ ಇಒ ಬಸವಂತರಾಯಗೌಡ ಬಿರಾದಾರ ಅವರು ತಕ್ಷಣದಲ್ಲಿಯೇ ಸಂಭಂದಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಿ ಅಸಹಾಯಕೆ ಬಸಮ್ಮಲಿಗೆ ಸ್ಪಂಧನೆ ನೀಡಿದರು.
ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಕಟ್ಟಡ ಕಾಮಗಾರಿಯನ್ನು ಮಾಡುವಂತಿಲ್ಲ. ಆದರೆ ಬಾವೂರ್ ಗ್ರಾಮದಲ್ಲಿ ಇಂತಹ ಕಾರ್ಯ ನಡೆದಿದ್ದು ನಮ್ಮ ಗಮನಕ್ಕೆ ಬಂದಿದ್ದು ಅದನ್ನು ನಿಲ್ಲಿಸಲಾಗಿದೆ. ಆ ಪ್ರಕರಣದಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಬಸವಂತರಾಯಗೌಡ ಬಿರಾದಾರ,ಇಒ ತಪಂ, ತಾಳಿಕೋಟಿ.
ಬಾವೂರ್ ಗ್ರಾಮದಲ್ಲಿ ಓರ್ವ ಮಹಿಳೆಗೆ ಅನ್ಯಾಯ ನಡೆಯುತ್ತಿದ್ದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಆ ಪ್ರಕಾರಣಕ್ಕೆ ಸಂಭಂದಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ತಿಳಿಸಿದ್ದೇನೆ.
–ಅನಿಲಕುಮಾರ ಧವಳಗಿ, ತಹಸೀಲ್ದಾರ್, ತಾಳಿಕೋಟಿ.
Be the first to comment