ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳದ ಮೇಲಿನ ಓಣಿ ಮತ್ತು ಆಜಾದ ನಗರದ ಮನೆ ಮನೆಗೆ ಭೇಟಿ ನಿಡಿ ಜನರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ತಿಳಿಸಿ ಹೇಳಿ ಮನವಲಿಸಲಾಯಿತು ಕೋವಿಡ್ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಗೆದುಕೊಳ್ಳಬೇಕು ಕೋವಿಡ್ ಲಸಿಕೆಯ ಹಾಕಿಸಿಕೊಳ್ಳುವದರಿಂದ ಮಾನವನ ದೇಹದಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಾಗುತ್ತದೆ ಮಹಾಮಾರಿ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು ಯಾವದೆತರ ಅಡ್ಡಪರಿಣಾಮ ಇರುವದಿಲ್ಲ ಕಾರಣ ನಾಗರಿಕರು ಸ್ವಯಂ ಪ್ರೇರಿತವಾಗಿ
ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಲಸಿಕೆಯನ್ನು ಸರಕಾರಿ ಆಸ್ಪತ್ರೆ ಯಲ್ಲಿ ಉಚಿತವಾಗಿ ನೀಡಲಾಗುವದು ಲಸಿಕೆ ಹಾಕಿಸಿಕೊಳ್ಳಲು ಬರುವಾಗ ಆದಾರ ಕಾರ್ಡ್ ತಗೆದುಕೊಂಡು ಬರಬೇಕು ಮತ್ತು ಕೋವಿಡ್ ವ್ಯಾಕ್ಷಿನ್ ಕುರಿತು ಪಟ್ಟಣದ ಪುರಸಭೆಯಿಂದ ಮೈಕ್ ಮೂಲಕ ಪ್ರಚಾರವನ್ನು ಮೂಡಿಸಲಾಗುತ್ತದೆ ಎಂದು ಆರೋಗ್ಯ ಸಹಾಯಕ ಮತ್ತು ನಗರ ಕೋವಿಡ್ 19 ತಂಡದ ಮೇಲ್ವಿಚಾರಕ ಎಂ ಎಸ್ ಗೌಡರ ತಿಳಿಸಿದರುಈ ಸಮಯದಲ್ಲಿ ನಗರ ಆಶಾ ಕಾರ್ಯಕರ್ತೆಯರಾದ ಅಕ್ಕಮ್ಮ ಸಂಗಾರೆಡ್ಡಿ ಸಾವಿತ್ರಿ ಹಿರೇಮಠ ಮಹಾಲಿಂಗಮ್ಮ ಕಡಿ ಹಾಜರಿದ್ದರು
Be the first to comment