ಬಸ್ ನಿಲ್ದಾಣಗಳಲ್ಲಿ ಎಲೆ ಅಡಿಕೆ ಉಗುಳುವವರಿಗೂ ಇನ್ಮುಂದೆ ದಂಡ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕಾರವಾರ

ಕರೋನಾ ಸೋಂಕು ಹೆಚ್ಚಾಗುತಿದ್ದಂತೆ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇದರ ಜೊತೆಗೆ ಬಸ್ ನಲ್ಲಿ ಪ್ರಯಾಣಿಕರೂ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದೀಗ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.ಈ ನಿಯಮಗಳಂತೆ ಬಸ್ ನಿಲ್ದಾಣದಲ್ಲಿ ಎಲೆ ,ಅಡಿಕೆ ಉಗಿಯುವ ಹಾಗೂ ಧೂಮಪಾನ ಮಾಡುವವರಿಗೆ ದಂಡದ ಬಸಿ ಮುಟ್ಟಿಸುತ್ತಿದೆ. ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ವಾಯುವ್ಯ ರಸ್ತೆ ಸಾರಿಗೆ ವಿಭಾಗದಲ್ಲಿ ಜುಲೈ ನಿಂದ ಈ ವರೆಗೆ ಬಸ್ ನಿಲ್ದಾಣದಲ್ಲಿ ಎಲೆ-ಅಡಿಕೆ ಉಗಿದ ಹಾಗೂ ಧೂಮಪಾನ ಮಾಡುದ ಪ್ರಕರಣದಲ್ಲಿ ಒಟ್ಟು ₹55,000 ದಂಡವನ್ನು ವಿಧಿಸಿ ವಸೂಲಿ ಮಾಡಿದೆ.

CHETAN KENDULI


ಇನ್ನು ಈ ನಿಯಮವನ್ನು ಎಲ್ಲಾ ನಿಲ್ದಾಣದಲ್ಲೂ ಕಡ್ಡಾಯವಾಗಿ ಪಾಲನೆ ಮಾಡಲು ವಾಕರಸಾ.ಸಂಸ್ಥೆ, ಹುಬ್ಬಳ್ಳಿ ಕೇಂದ್ರ ಕಛೇರಿ ಮುಖ್ಯ ಸಂಚಾರ ವ್ಯವಸ್ಥಾಪಕರು ಕೋರಿದ್ದು ಇದೀಗ ಈ ಭಾಗದಲ್ಲಿ ಓಡಾಡುವ ಬಸ್ ಗಳ ಟಿಕೇಟ್ ಗಳಲ್ಲಿ ಸಹ ಮುದ್ರಿಸಿ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಇನ್ನುಮುಂದೆ ಪ್ರಯಾಣಿಕರು ನಿಲ್ದಾಣ ಹಾಗೂ ಬಸ್ ನಲ್ಲಿ ಎಲೆ-ಅಡಿಕೆ ಉಗಿಯುವುದು,ಧೂಮಪಾನ ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

Be the first to comment

Leave a Reply

Your email address will not be published.


*