ಸಮುದ್ರದ ಅಲೆಯಲ್ಲಿ ಸಿಲುಕಿದ ಬೋಟ್ ರಕ್ಷಣೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ಧಿಗಳು 

 

ಹೊನ್ನಾವರ

CHETAN KENDULI

ಕಾಸರಕೊಡ್ ಟೊಂಕದ ಅಳಿವೆಯಲ್ಲಿ ಸಿಲುಕಿದ್ದ ಎಸ್‌ಎಮ್‌ಪಿ ಎಂಬ ಬೋಟ್ (ಪರ್ಶಿನ್ )ನ್ನು ರಕ್ಷಣೆ ಮಾಡಲಾಗಿದೆ.ಗಂಗೊಳ್ಳಿ ಮೂಲದ ದಾಸಾ ಖಾರ್ವಿ ಮಾಲಿಕತ್ವದ ಶ್ರೀ ಮಂಜುನಾಥೆಶ್ವರ ಪ್ರಸನ್ನ ಬೋಟ್ ಬೆಳಿಗ್ಗೆ ೧೧ ಗಂಟೆಗೆ ಹೊನ್ನಾವರದ ಅಳಿವೆಯಲ್ಲಿ ಸಿಲುಕಿತ್ತು. ಬೋಟಿನಲ್ಲಿದ್ದ ೨೫ ಮೀನುಗಾರರಲ್ಲಿ ೨೩ ಡಿಂಗಿ ರೋಪ್ ಮೂಲಕ ಈಜಿ ದಡ ಸೇರಿರುತ್ತಾರೆ. ಇನ್ನಿಬ್ಬರು ಬೋಟಿನಲ್ಲೇ ಇದ್ದರು.

ವಿಷಯ ತಿಳಿದ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ಬೋಟ್ ರಕ್ಷಣೆ ಮಾಡಲು ನಮ್ಮ ಬೋಟ್ ತದಡಿಯಲ್ಲಿದೆ ಎಂದು ಹೇಳಿದರು ಎಂದು ಹೇಳಲಾಗುತ್ತಿದೆ.ಬೋಟ್ ರಕ್ಷಣೆಗೆ ಇಲಾಖೆಯ ಬೋಟ್ ಸಿಗದೆ ಇರುವ ಕಾರಣ, ಕಾಸರಕೋಡ ಸ್ಥಳೀಯ ನಿವಾಸಿ ಇಕ್ಬಾಲ್ ಅಬ್ದುಲ್ ಗಪುರ್ ಕೇವ್ಕಾ ಮಾಲಿಕತ್ವದ ಎರಡು ಬೋಟ್ ತೆಗೆದುಕೊಂಡು ಹೋಗಿ ಸುಮಾರು ಐದು ಗಂಟೆಯ ಕಾರ್ಯಾಚರಣೆಯಲ್ಲಿ ಬೋಟಿನಲ್ಲಿದ್ದ ಎರಡು ಜನರನ್ನು ಮತ್ತು ಎಪ್ಪತ್ತರಿಂದ ಎಂಬತ್ತು ಲಕ್ಷದ ಬೋಟ್ ರಕ್ಷಣೆ ಮಾಡಲಾಗಿದೆ.

Be the first to comment

Leave a Reply

Your email address will not be published.


*