ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಿನ ಹೇಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಸರು ಪಂಚಾಯತ್ ರಾಜ್ ಕಾಯಿದೆ ನಿಯಮ ಮೀರಿ ಹಲವಾರು ಬಾರಿ 5000 ರೂಪಾಯಿ ಹೆಚ್ಚು ಹಣ ಖರ್ಚುಮಾಡಿ ಬಿಲ್ ಮಾಡುವಾಗ, ಪಂಚಾಯತ್ ಸಾಮಾನ್ಯ ಸಭೆ ಕರೆದು ಯಾವುದೇ ಠರಾವು ಮಾಡದೆ, ತಮ್ಮ ಮನಸೋ ಇಚ್ಛೆಯಂತೆ ಭ್ರಷ್ಟ ಪಿ.ಡಿ.ಓ ಮತ್ತು ಪಂಚಾಯತ್ ಭ್ರಷ್ಟ ಕಾರ್ಯದರ್ಶಿ ಅವರೊಂದಿಗೆ ಸೇರಿಕೊಂಡು ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಭ್ರಷ್ಟಾಚಾರ ಮಾಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಸಂಘದ ಭಟ್ಕಳ್ ತಾಲೂಕ ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯ್ಕ ಹೊನ್ನಿಗದ್ದೆ ಯವರು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನಾಗೇಶ್ ನಾಯ್ಕ ಹೊನ್ನಿಗದ್ದೆ ಮದ್ಯಮದವರೊಂದಿಗೆ ಮಾತನಾಡಿ ತೌಕ್ತೆ ಚಂಡಮಾರುತ ಸಮಯದಲ್ಲಿ ದಿನಾಂಕ 15-5-2021 ರಂದು ಸಮುದ್ರದ ನೀರು ಹರಿದು ಹೋಗುವ ಕಾಲುವೆ ಮಾಡಿದ್ದು, ಇದೆ ಕಾಮಗಾರಿ ಹೆಸರಲ್ಲಿ ವಿವಿಧ ಬೇರೆ ಜನರ ಹೆಸರಲ್ಲಿ ದಿನಾಂಕ 16-5-2021 ರಂದು ಮೂರು ಬೋಗಸ್ ಕಾಮಗಾರಿ ಬಿಲ್ ಮಾಡಿ ಹೇಬಳೆ ಪಂಚಾಯತ್ ಕಾರ್ಯದರ್ಶಿ ಮತ್ತು ಪಿ.ಡಿ.ಓ ರವರು ಬ್ರಷ್ಟಾಚಾರ ಮಾಡಿರುತ್ತಾರೆ ಎಂದು ದಾಖಲೆ ಸಮೇತ ಮಾಧ್ಯಮದವರಿಗೆ ತಿಳಿಸಿರುತ್ತಾರೆ.
ಇದೆ ರೀತಿ ಹಲವು ಕಡೆ ಹೇಬಳೆ ಪಂಚಾಯತ್ ನ ಬಿಲ್ ವೌಚೆರ್ ನ್ನು ಪಂಚಾಯ್ತಿ ಸದಸ್ಯರ ಪತಿ ತಿದ್ದುಪಡಿ ಮಾಡಿದ್ದಾರೆ ಎಂದು ದಾಖಲೆ ಸಮೇತ ತಿಳಿಸಿದ್ದಾರೆ. ಹೇಬಳೆ ಪಂಚಾಯತ್ ಉಪಾಧ್ಯಕ್ಷರ ಗಂಡ ಪಂಚಾಯತ್ ನ ಕಾಮಗಾರಿ ಮಾಡಿ ಬಿಲ್ ನಲ್ಲಿ ಗೋಲ್ಮಾಲ್ ಮಾಡಿದಾರೆ ಎಂದು ಹೇಳಿದ್ದಾರೆ.ಹೇಬಳೆ ಪಂಚಾಯತ್ ನ ಇನ್ನೊಬ್ಬ ಸದಸ್ಯ ತನ್ನ ಸ್ವಂತ ತಂದೆಯವರ ಹೆಸರಿನಲ್ಲಿ ಕಾಮಗಾರಿ ಮಾಡಿ , ತಂದೆಯವಾರ ಸಹಿಯನ್ನು ತಾನೇ ಪೊರ್ಜೆರಿ ಸಹಿ ಮಾಡಿ ಬಿಲ್ ಗೋಲ್ಮಾಲ್ ಮಾಡಿಡಾನೆ ಈ ಎಲ್ಲ ಕೆಲಸಗಳಿಗೆ ಹೇಬಲೆ ಪಂಚಾಯತ್ ನ ಭ್ರಷ್ಟ ಪಿ.ಡಿ.ಓ ಮತ್ತು ಕಾರ್ಯದರ್ಶಿ ಜೊತೆಗೂಡಿ ಸಹಕಾರ ಮಾಡಿ ಬ್ರಷ್ಟಾಚಾರ ನಡೆಸಿರುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ನಾಗೇಶ್ ನಾಯ್ಕ್ ಹೊನ್ನಿಗದ್ದೆ ಈ ರೀತಿ ಮಾದ್ಯಮಕ್ಕೆ ಹೇಬಲೆ ಪಂಚಾಯತ್ ನ ಅಧಿಕಾರಿಗಳು ಮತ್ತು ಸದಸ್ಯರ ಬ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ.
ಹೇಬಳೆ ಗ್ರಾಮಪಂಚಯತ್ ನ ಇನ್ನೊಬ್ಬ ಸದಸ್ಯ ಕಾಮಗಾರಿ ಮಾಡದೆ 27000 ಸಾವಿರ ರೂಪಾಯಿ ಬಿಲ್ಲನ್ನು ಅಕ್ರಮವಾಗಿ ಭ್ರಷ್ಟ ಪಿ.ಡಿ.ಓ ಮತ್ತು ಕಾರ್ಯದರ್ಶಿ ಮುಖಾತರ ಪಾಸ್ ಮಾಡಿಕೊಂಡಿರುತ್ತಾರೆ ಎಂದು ದಾಖಲೆ ಮುಖಾತರ ಬಹಿರಂಗ ಪಡಿಸಿದ್ದಾರೆ. ಹೇಬಳೆ ಗ್ರಾಮ ಪಂಚಾಯತ್ ಇನ್ನೊಬ್ಬ ಸದಸ್ಯ ಪೈಪ್ ಲೈನ್ ಅಳವಡಿಕೆಗೆ ಜಿ.ಎಸ್.ಟಿ ಬಿಲ್ ಗೋಲ್ಮಾಲ್ ಮಾಡಿ ಬೇರೆ ಹೆಸರಿನ ಜಿ.ಎಸ್.ಟಿ ಸಲ್ಲಿಸಿ ಭ್ರಷ್ಟ ಪಿ.ಡಿ.ಓ ಮತ್ತು ಭ್ರಷ್ಟ ಕಾರ್ಯದರ್ಶಿ ಮುಖಾತರ ಬಿಲ್ ಪಾಸ್ ಮಾಡಿಕೊಂಡಿರುತ್ತಾರೆ ಎಂದು ಈ ರೀತಿ ಭಟ್ಕಳ್ ಹೇಬಳ್ ಪಂಚಾಯತ್ ನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಾಮಾಜಿಕ ಕಾರ್ಯಕರ್ತ ನಾಗೇಶ್ ನಾಯ್ಕ ಹೇಬಳೆ ಮಾಧ್ಯಮದ ಮುಖಾತರ ಬಹಿರಂಗ ಪಡಿಸಿದ್ದಾರೆ.ಭಟ್ಕಳ್ ತಾಲೂಕ ಹೇಬಲೆ ಪಂಚಾಯತ್ ನ ಅಧ್ಯಕ್ಷ , ಸದಸ್ಯ ಮತ್ತು ಪಿ.ಡಿ.ಓ , ಕಾರ್ಯದರ್ಶಿ ಗಳ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ದಿನಾಂಕ 7/4/22 ರಂದು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಓ ಕಚೇರಿ ಮುಂದೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಅಧ್ಯಕ್ಷ ರಮೇಶ್ ಕುಣಿಗಲ್ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ನಾಗೇಶ್ ನಾಯ್ಕ ಹೊನ್ನಿಗದ್ದೆ ತಿಳಿಸಿದ್ದಾರೆ.
Be the first to comment