ರಾಜ್ಯ ಸುದ್ದಿಗಳು
ಮಸ್ಕಿ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿಯು ಮಸ್ಕಿ ಪಟ್ಟಣಕ್ಕೆ ಭೇಟಿ ನೀಡಿ ತಾಲೂಕ ಸಮಿತಿ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಸ್ಕಿಯ ಐತಿಹಾಸಿಕ ಅಶೋಕ ಶಿಲಾಶಾಸನ ನಾಮಫಲಕ ರಾತ್ರೋರಾತ್ರಿ ನಾಪತ್ತೆ ಪ್ರಕರಣಹಾಗೂ ಬರ್ಬರವಾಗಿ ಹತ್ಯೆ ಯಾದ ಭೂಮಿಕಾ 9ನೇ ತರಗತಿಯ ವಿದ್ಯಾರ್ಥಿನಿಯ ಪ್ರಕರಣವನ್ನು ಚುರುಕುಗೊಳಿಸುವಂತೆ ಒತ್ತಾಯಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರೂಪ ಶ್ರೀನಿವಾಸ್ ಹಾಗೂ ರೈತ ಸಂಘದ ಮಸ್ಕಿ ಕಾರ್ಯಕರ್ತರು ಮಸ್ಕಿ ವೃತ್ತ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಸಹಾಯಕ ಆಯುಕ್ತರವರಿಗೆ ಭೇಟಿ ನೀಡಿ ಈ ಪ್ರಕರಣವನ್ನು ಆದಷ್ಟು ಬೇಗ ತನಿಖೆ ಚುರುಕುಗೊಳಿಸಿ ಈ ಎರಡು ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ತನಿಖೆ ವಿಳಂಬ ಧೋರಣೆ ಹಾಗೂ ಚುರುಕುಗೊಳಿಸದ ಪಕ್ಷದಲ್ಲಿ ರೈತಸಂಘ ದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಂತರ ಕೊಲೆಯಾದ ಭೂಮಿಕಾ ವಿದ್ಯಾರ್ಥಿನಿಯ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಭೂಮಿಕ ತಾಯಿಯನ್ನು ಧೈರ್ಯ ತುಂಬಿದರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿಯಿಂದ ತಮ್ಮ ಕೈಲಾದ ಸಹಾಯ ಧನ ಮಾಡಿದರು .
ನಂತರ ಮಸ್ಕಿ ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಅಶೋಕ ಶಿಲಾಶಾಸನ ಸ್ಥಳಕ್ಕೆ ಭೇಟಿ ನೀಡಿದ ತಂಡವು ಪರಿಶೀಲಿಸಿ ಅವರು ಐತಿಹಾಸಿಕ ಶಿಲಾಶಾಸನದ ನಿರ್ವಹಣೆ ಇಲ್ಲದೆ ನಶಿಸಿಹೋಗುವ ಸ್ಥಿತಿಯಲ್ಲಿರುವುದು ಅಧಿಕಾರಿಗಳ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಮ್ರಾಟ್ ಅಶೋಕನ ವಿಷಯವಾಗಿ ಮಾತನಾಡಿದ ರೂಪ ಶ್ರೀನಿವಾಸ್ ಜಿಲ್ಲಾಧ್ಯಕ್ಷರು ಅಶೋಕ ಸಾಮ್ರಾಟ, ಮೌರ್ಯ ಸಾಮ್ರಾಜ್ಯ ಇತಿಹಾಸದಲ್ಲಿ ಚಕ್ರವರ್ತಿ ಅಶೋಕನ ದೇವನಾಂಪ್ರಿಯ ನಾಮಾಂಕಿತದಿಂದ ಇಡೀ ದೇಶದ ಇತಿಹಾಸದ ಭೂಪಟದಲ್ಲಿ ಮಸ್ಕಿ ಶಿಲಾಶಾಸನ ಖ್ಯಾತಿಯಾಗಿದೆ. ಹಾಗಾಗಿ ಈ ಸ್ಥಳವನ್ನು ನೋಡಲು ದೇಶ-ವಿದೇಶದಿಂದ ಪ್ರವಾಸಿಗರು, ಇತಿಹಾಸ ಹಟ್ಟರು ಹಾಗೂ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಇಂತಹ ಸಂದರ್ಭದಲ್ಲಿ ಪಟ್ಟಣದ ನಾಲ್ಕು ರಸ್ತೆ ಕೊಡುವ ಜಾಗಕ್ಕೆ ಅಶೋಕ ಸರ್ಕಲ್ ಎಂದು ಕೂಡಾ ಕರೆಯಲಾಗುತ್ತದೆ. ಆದರೆ ಸುಮಾರು 30–45 ವರ್ಷಗಳಿಂದ ಅಶೋಕ ಶಿಲಾಶಾಸನ ಸಂಪೂರ್ಣ ಮಾಹಿತಿ ಇರುವ ಪ್ರವಾಸೋದ್ಯಮ ಇಲಾಖೆಯ ಬಹದೊಡ್ಡದಾದ ನಾಮ ಫಲಕ ಇದ್ದು, ಅದನ್ನು ಕೆಲ ಕಿಡಿಗೇಡಿಗಳು ದಿನಾಂಕ 27 01-2022 ರಂದು ರಾತ್ರಿ ನಾಮಫಲಕವನ್ನು ಕಳವು ಮಾಡಿರುತ್ತಾರೆ. ಮಸ್ಕಿಯ ಸಂಘಟನೆಗಳು ತಾಲೂಕ ಮಟ್ಟದ ಅಧಿಕಾರಿಗಳಿಗೆ ಒತ್ತಾಯ ಮಾಡಿ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಆದರೆ ಇದುವರೆಗೂ ನಾಮಫಲಕ ಕಳ್ಳರನ್ನು ಪತ್ತೆಮಾಡಿ ಶಿಕ್ಷೆಗೆ ಒಳಪಡಿಸದೆ. ಇರುವುದು ದುರಾದೃಷ್ಟ ಕರ ಸಂಗತಿಯಾಗಿದೆ. ಅದನ್ನು ಶೀಘ್ರವೇ ತಡಮಾಡದೇ ಸಂಪೂರ್ಣ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.
ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೇ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷಿಸುತ್ತಿದ್ದು, ಶಾಸನ ಸ್ಥಳ ಹಾಳುಕೊಂಪೆಯಾಗಿದೆ. ಪ್ರವಾಸಿಗರು ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸನ ಸ್ಥಳ ಮುಂಭಾಗದಲ್ಲಿ ಅಭಿವೃದ್ಧಿಗೆ 3 ಎಕರೆ ಜಾಗದಲ್ಲಿ ರೂ 21,00,000/- ವೆಚ್ಚವನ್ನು ವಸ್ತು ಸಂಗ್ರಹಾಲಯ, , ಕಟ್ಟಡಗಳು ಕೆಲಸ ಪೂರ್ಣಗೊಂಡು 6 ವರ್ಷ ಕಳೆದರೂ ಕೂಡ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ಉದ್ಯಾನವನ ನಿರ್ಮಾಣ ಕೆಲಸ ವಿಳಂಬವಾದ ಕಾರಣ ಶಾಸನ ಫಲದ ಬಳಿಯ ಜಾಗ ಬಿಕೋ ಎನ್ನುತ್ತಿದೆ, ಪ್ರವಾಸಿಗರ ಬಹುವರ್ಷದ ಪ್ರಮುಖ ಬೇಡಿಕೆಯ ಹಿನ್ನೆಲೆಯಲ್ಲಿ ಶಾಸನ ಸ್ಥಳ ಅಭಿವೃದ್ಧಿಪಡಿಸಲು ಶಾಸನ ಸ್ಥಳ ಬಳಿಯ ಜಮೀನಿನಲ್ಲಿ ಉದ್ಯಾನವನ ನಿರ್ಮಾಣ ಇನ್ನಿತರ ಕಟ್ಟಡ ಕಟ್ಟಲು 3 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಶಾಸನ ಸ್ಥಳದ ಬಳಿ ವಸ್ತು ಸಂಗ್ರಹಾಲಯ ಕಟ್ಟಡ ನಿರ್ಮಾಣ ಬಿಟ್ಟರೆ, ಉಳಿದ ಯಾವ ಕೆಲಸಗಳು ಆಗಿಲ್ಲ. ಅಲ್ಲದೇ ಸುಮಾರು ರೂ.29,00,000/ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ 6 ವರ್ಷ ಗತಿಸಿದರೂ ಚಾಲನೆ ಸಿಕ್ಕಿಲ್ಲ. ಅಲ್ಲದೇ ಉದ್ಘಾಟನಾ ಭಾಗ್ಯ ಕಾಣದೇ ಇರುವ ವಸ್ತು ಸಂಗ್ರಹಾಲಯ ಶೌಚಾಲಯ ಕಟ್ಟಡಗಳು, ಕಿಟಕಿಗಳು ಹಾಗೂ ಗಾಜಿನ ಗ್ಲಾಸ್‌ಗಳು ಹಾಳಾಗಿ ಹೋಗಿವೆ. ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರಿಗೆ ಶಾಸನ ಸ್ಥಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿವೆ. ಕೂಡಲು ಹಾಸನಗಳಿಲ್ಲ. ಈಗಾಗಿ ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ವಿದ್ಯಾರ್ಥಿಗಳು ನಿರ್ಲಕ್ಷ ತೋರಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳದಲ್ಲಿ ಉದ್ಯಾನವನ, ಪ್ರವಾಸಿ ಮಂದಿರ, ಕುಡಿಯುವ ನೀರಿನ ವ್ಯವಸ್ಥೆ ಪ್ರವಾಸಿಗರಿಗೆ ವಿಶ್ರಾಂತಿ ಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವನ್ನಾಗಿಸಲು ಜಿಲ್ಲಾಧಿಕಾರಿಗಳು ರಾಯಚೂರು ಹಾಗೂ ಆರ್.ಬಸನಗೌಡ ತುರ್ವಿಹಾಳ ಶಾಸಕರು ಮತ್ತು ಪುರಾತತ್ವ ಇಲಾಖೆ,ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ್ ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪ ಶ್ರೀನಿವಾಸ್ ನಾಯಕ್ ತಾಲೂಕ ಅಧ್ಯಕ್ಷ ತಾಯಪ್ಪ ಮತ್ತು ಗೌರವಾಧ್ಯಕ್ಷರಾದ ತಿಮ್ಮಣ್ಣ ಬೋವಿ, ಬಸನಗೌಡ ಪೊಲೀಸ್ ಪಾಟೀಲ್ ತೀರ್ಥಬಾವಿ ಅಧ್ಯಕ್ಷರು, ನಿರುಪಾದಿ ಜಿಲ್ಲಾ ಕಾರ್ಯದರ್ಶಿ, ಹನುಮಂತಪ್ಪ ತೀರ್ಥಹಳ್ಳಿ ಗ್ರಾಮ ಘಟಕ ಉಪಾಧ್ಯಕ್ಷರು ಸೇರಿದಂತೆ ರೈತ ಮುಖಂಡರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Be the first to comment