ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಕರುನಾಡ ವಿಜಯ ಸೇನೆಯ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಕರುನಾಡ ವಿಜಯ ಸೇನೆಯ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಮಾತನಾಡಿದ ಕರುನಾಡವಿಜಯಸೇನೆಯರಾಜ್ಯಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ನೆ ಲ ರಾಮಪ್ರಸಾದ್ ತಾವು ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಡೆದಿದ್ದು ಇದುವೇ ತಮ್ಮಇಂದಿನ ಉನ್ನತೀಕರಣಕ್ಕೆ ಕಾರಣವಾಗಿದೆ ತಾಲೂಕಿನಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ ಕೆಲವು ವ್ಯಕ್ತಿಗಳು ಸಮಾಜಸೇವೆ ಹೆಸರಿನಲ್ಲಿ ರಾಜಕೀಯಕ್ಕೆ ಮುಂದಾಗುತ್ತಿದ್ದು ಅಂತಹ ವ್ಯಕ್ತಿಗಳ ವಿರುದ್ಧ ಗುಡುಗಿದರು ಹಾಗೂ ತಾಲ್ಲೂಕಿನ ಜನತೆ ತಮ್ಮ ಮತಗಳನ್ನು ಮಾರಿಕೊಳ್ಳದಂತೆ ತಾಲೂಕಿನ ಜನತೆಗೆ ಮನವಿ ಮಾಡಿದರು ತಾಲ್ಲೂಕನ್ನು ಮುನ್ನಡೆಸುವಂತಹ ನಿಸ್ವಾರ್ಥ ನಾಯಕರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು ಕನ್ನಡಪರ ಹೋರಾಟಗಾರರು ನಿಜವಾದ ನಿಸ್ವಾರ್ಥ ಹೋರಾಟಗಾರರು ಸ್ವಚಮನಸ್ಸಿನ ನಿಷ್ಠಾವಂತ ರಾಜಕೀಯ ನಾಯಕರನ್ನು ಆರಿಸಿ ಮತನೀಡಬೇಕಾಗಿಮನವಿ ಮಾಡಿದರು ಹಾಗೂ ಹಣದ ಆಸೆಗೆ ದುಷ್ಟರನ್ನು ಆಯ್ಕೆ ಮಾಡುವುದು ತಪ್ಪು ಎಂದು ಈ ಸಮಯದಲ್ಲಿ ತಿಳಿಸಿದರು .
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಗಳಾದ ನಂಜಪ್ಪ, ಯುವ ಘಟಕದ ಅಧ್ಯಕ್ಷರಾದ ದೀಪು ಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಚೇಂದ್ರ, ಮಹಿಳಾ ಜಿಲ್ಲಾಧ್ಯಕ್ಷರಾದ ಕವಿತಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋದಂಡ, ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತಿದ್ದರು.
Be the first to comment