ಜಿಲ್ಲಾ ಸುದ್ದಿಗಳು
ಲಿಂಗಸುಗೂರ
ಲಿಂಗಸುಗೂರ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಲಿಂಗಸುಗೂರ ಜಿಲ್ಲಾ ಸಂಚಾಲಕರಾದ ಪ್ರಭುಲಿಂಗ ಮೇಗಳಮನಿ ರಾಜ್ಯ ಸರ್ಕಾರ ವಿರುದ್ಧ ಬಜೆಟ್ ನಲ್ಲಿ ಎಸ.ಸಿ.ಹಾಗೂ ಎಸ.ಟಿ.ಜನಾಂಗದವರಿಗೆ ಯಾವುದೇ ಅಭಿವೃದ್ಧಿ ಪರ ಯೋಜನೆ ಜಾರಿಗೆತರದೇ ಕೇವಲ ಸುಳ್ಳು ಪ್ರಚಾರ ಮಾಡುವ ಮೂಲಕ ಸಾವಿರಾರು ಕೋಟಿ ಯೋಜನೆಗಳನ್ನು ಎಸ್.ಸಿ.ಹಾಗೂ ಎಸ.ಟಿ.ಜನಾಂಗದವರಿಗೆ ನೀಡಿದ್ದೇವೆ.ಎಂದು ಯಾವ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಯಾವುದೇ ಯೋಜನೆಗಳು ಬಗ್ಗೆ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ್ ವರಮಾನ 2ಲಕ್ಷ ಮಿತಿ ಮೀರಿದೆ ಹಾಗಾಗಿ ನಿಮ್ಮಗೆ ಸಾಲ ಯೋಜನೆಗಳು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಹಿಂದುಳಿದ ವರ್ಗಗಳಿಗೆ 8 ಲಕ್ಷ ವನ್ನು ನಿಗದಿ ಮಾಡಿ ಎಂದು ಸುಪ್ರೀಂಕೋರ್ಟ್ ಆಜ್ಞೆ ಮಾಡಿದೆ. 2 ಲಕ್ಷ ವರಮಾನ ಒಬ್ಬ ಜವಾನನ ಮಗನಿಗೂ ಸಿಗುತ್ತೆ.ಅವರ ಮಕ್ಕಳು ಸರಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ.
ಹಿಂದಿನ ಕಾಂಗ್ರೆಸ್ ಸರಕಾರ ವಿದ್ಯಾರ್ಥಿ ವೇತನ ನೀಡುತ್ತಿದ್ದರು. ಆದರೆ ಈಗಿನ ಸರಕಾರ ಎಲ್ಲಾ ವಿದ್ಯಾರ್ಥಿ ವೇತನ ನೀಡದೇ ಹಿಂದಿನ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದ್ದಾರೆ.ಮೀನುಗಾರರ ಆದಾಯವನ್ನು ಹೆಚ್ಚಿಸಲು ಮುಂದಾಗಿರುವುದನ್ನು ಮೆಚ್ಚಲೇಬೇಕು ಆದರೆ ಎಸ್.ಸಿ.ಹಾಗೂ ಎಸ.ಟಿ. ಜನಾಂಗದ ಆದಾಯವನ್ನು ಏಕೆ ಹೆಚ್ಚಿಸುತ್ತಿಲ್ಲ ವಾರ್ಷಿಕ ವರಮಾನ 10 ಲಕ್ಷಕ್ಕೆ ಹೆಚ್ಚಿಸಬೇಕೆಂದು ಹಾಗೂ ಪೌರ ಕಾರ್ಮಿಕರ ಸಂಕಷ್ಟ ಭತ್ಯೆಯನ್ನು 2000 ರೊ. ಸಾವಿರದಿಂದ 6000 ರೂ ಸಾವಿರಕ್ಕೆ ಹೆಚ್ಚಿಸಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಪ್ರಭುಲಿಂಗ ಮೇಗಳ ಮನಿ ಪ್ರತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
Be the first to comment