ಜಿಲ್ಲಾ ಸುದ್ದಿಗಳು
ಮಸ್ಕಿ:
ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರಗಂಗಿ ಗ್ರಾಮದಲ್ಲಿ ಎಲ್ಲಿ ನೋಡಿದರೂ ಚರಂಡಿ ನೀರು, ಅಂತರಗಂಗಿ ಮುಖ್ಯ ರಸ್ತೆಯಿಂದ ನಾಗರಬೆಂಚಿ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ದಿನ ನಿತ್ಯವೂ ಹರಿಯುವ ಚರಂಡಿ ನೀರು.
ಈ ಗ್ರಾಮದಿಂದ ಹಾದು ಹೋಗುವ ಸಾರ್ವಜನಿಕರೆಲ್ಲರೂ ಬೇಸತ್ತು ಹೋಗಿರುವರು. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ಇಲ್ಲಾ ಮತ್ತು ಕಾರ್ಯ ರೂಪಕ್ಕೆ ತರುವ ಯೋಚನೆಯೂ ಮಾಡುತ್ತಿಲ್ಲ ಎಂಬುದು ಅಂತರಗಂಗಿ ಗ್ರಾಮದ ನಿವಾಸಿಗಳ ಅಳಲಾಗಿದೆ. ಹಾಗೆಯೇ ಇತ್ತೀಚೆಗೆ ಸೊಳ್ಳೆಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಟೈಪಾಯ್ಡ್, ಚಿಕನ್ ಗುನ್ಯಾ ದಂತಹ ಸಾಂಕ್ರಾಮಿಕ ರೋಗವು ತಾಂಡವವಾಡುತ್ತಿದೆ. ಇಂದಿಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಯಾವುದೇ ರೀತಿಯ ಸಮಸ್ಯೆ ಆಲಿಸುವ ಮತ್ತು ಬಗೆಹರಿಸುವ ಕೆಲಸ ಮಾಡಿರುವುದಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
Be the first to comment