ಜಿಲ್ಲಾ ಸುದ್ದಿಗಳು
ಕುಮಟಾ:
ಅಖಿಲ ಭಾರತ ಜರ್ನಲಿಸ್ಟ್ ಫೆಡರೇಷನ್ (ರಿ) ದೆಹಲಿ, ರಾಷ್ಟ್ರೀಯ ಜರ್ನಲಿಸ್ಟ್ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕ ಅಧ್ಯಕ್ಷರಾಗಿ ಕುಮಟಾದ ಪತ್ರಕರ್ತ ಶ್ರೀ ನಿಕೇತ್ ಎಸ್ ಶೇಟ್ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ ಕುಮಾರ್ ನಾಯ್ಕ ಅವರ ಸೂಚನೆ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ಜಿ ರಾಜೇಶ್ ಅವರು ನಿಕೇತ್ ಎಸ್ ಶೇಟ್ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕುಮಟಾ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಅಂಬಿಗ ನ್ಯೂಸ್ ನ ಕುಮಟಾ ತಾಲೂಕ ವರದಿಗಾರ ಶ್ರೀ ನಾಗರಾಜ್ ನಾಯ್ಕ( ರಾಜು ಮಾಸ್ತಿ ಹಳ್ಳ) ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನೂತನ ಪದಾಧಿಕಾರಿಗಳಿಗೆ ಉತ್ತರ ಕನ್ನಡ ಜಿಲ್ಲಾ ಸಮಿತಿಯ ಎಲ್ಲ ಸದಸ್ಯರು ಮತ್ತು ಪದಾಧಿಕಾರಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.
ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಿಗೆ ಯಾವುದೇ ಸಮಸ್ಯೆ ಆದಾಗ ಸಹಾಯ ಸಹಕಾರ ನೀಡುವುದರ ಜೊತೆಗೆ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧ್ಯಕ್ಶ ಕುಮಾರ್ ನಾಯ್ಕ ತಿಳಿಸಿದ್ದಾರೆ.
Be the first to comment