ಜಿಲ್ಲಾ ಸುದ್ದಿಗಳು
ನಾಲತವಾಡ
ನಾಲತವಾಡ ಸೇರಿದಂತೆ ಹೋಬಳಿಯ ವಿವಿಧೆಡೆ ಗಣರಾಜ್ಯ ದಿನಾಚರಣೆಯನ್ನು ಕೊರೊನಾ,ಒಮೈಕ್ರಾನ್ ನಡುವೆಯೂ ಸಂಭ್ರಮದಿಂದ ಆಚರಿಸಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣಿ ಮಾಡಿದ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಧ್ವಜಾರೋಹಣ ನೆರವೇರಿಸಿದರು.ಈ ವೇಳೆಯಲ್ಲಿ ನೂತನ ಪಟ್ಟಣ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮಿ ಶರಣಪ್ಪ ಇಲಕಲ್ಲ,ರಮೇಶ ಆಲಕೊಪ್ಪರ,ರಾಜಬಿ ನಾಡದಾಳ,ಶಿವಪುತ್ರಪ್ಪ ಗುರಿಕಾರ,ಯಮನವ್ವ ಬಂಡಿವಡ್ಡರ,ಲಲಿತಾ ಗೊರಬಾಳ,ಬಸಿರಾಬೇಗಂ ಮೂಲಿಮನಿ,ಸಂಗಪ್ಪ ಬಾರಡ್ಡಿ,ತಿರುಪತಿ ಕ್ಷತ್ರಿ,ಅಂಬ್ರಪ್ಪ ಶೀರಿ ಬಸವರಾಜ ಗಡ್ಡಿ ಇದ್ದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸಿ.ಬಿ.ವಿರಕ್ತಮಠ ದ್ವಜಾರೋಹಣ ಮಾಡಿದರು.ಪಟ್ಟಣದ ಹೊರವಲಯದ ಪೋಲಿಸ್ ಠಾಣೆಯಲ್ಲಿ ನ್ಯಾಮಣ್ಣವರ ,ಉಪ ತಹಶಿಲ್ದಾರರ ಕಛೇರಿಯಲ್ಲಿ ಉಪ ತಹಶಿಲ್ದಾರ ಜಿ.ಎನ್.ಕಟ್ಟಿ ಧ್ವಜಾರೋಹಣ ನೆರವೇರಿಸಿದರು.ಸರ್ಕಾರಿ ಶಾಲೆಗಳಾದ ದೇಶಮುಖರ ಓಣಿ ಶಾಲೆಯಲ್ಲಿ ಮಹೀಬೂಬ ಗಂಗೂರ,ಉರ್ದು ಶಾಲೆ,ಹರಿಜನಕೇರಿ,ಜಗದೇವನಗರ,ವಿನಾಯಕ ನಗರ,ಗಂಗಾಧರ ನಗರ, ಬಸವೇಶ್ವರ ಪ್ರೌಢಶಾಲೆ,ಕೆಜಿಎಂಪಿಎಸ್,ಕೆಬಿಎಂಪಿಎಸ್,ಶಂಕರ ಭಾರತಿ ಶಾಲೆಯಲ್ಲಿ,ಶ್ರೀ ವೀರೇಶ್ವರ ವಿಶ್ವಸ್ಥ ಸಂಸ್ಥೆಯಲ್ಲಿ,ಉರ್ದು ಪ್ರೌಢಶಾಲೆಯಲ್ಲಿ, ಸ್ಥಳೀಯ ಎಸ್ಡಿಎಂಸಿ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು.
ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್,ವೀರೇಶ್ವರ ಕೃಷಿ ಸಹಕಾರಿ ಸಂಘ,ವ್ಯವಸಾಯ ಸಹಕಾರಿ ಸಂಘ, ಪಟ್ಟಣದ ವಿವಿಧ ಪಡಿತರ ಅಂಗಡಿಗಳಲ್ಲಿ,ಕೃಷಿ ಕಛೇರಿ,ಬಸ್ ನಿಲ್ದಾಣದಲ್ಲಿ ಧ್ವಜಾರೋಹಣ ನಡೆಯಿತು.ಸಮೀಪದ ಬಿಜ್ಜೂರ ಗ್ರಾಮ ಪಂಚಾಯಿತಿ,ಬಿಜ್ಜೂರದ ಎಚ್ ಪಿಎಸ್ ಸರ್ಕಾರಿ ಶಾಲೆ,ಎಚ್ ಪಿಎಸ್ ವೀರೇಶನಗರ,ಎಚ್ ಪಿಎಸ್ ನಾಗಬೇನಾಳ ಶಾಲೆ,ಎಚ್ ಪಿಎಸ್ ನಾಗಬೇನಾಳ ಎಲ್ ಟಿ ಶಾಲೆ,ಆರೇಶಂಕರ,ಎಚ್ ಪಿಎಸ್ ಲೊಟಗೇರಿ,ಎಚ್ ಪಿಎಸ್ ಘಾಳಪೂಜಿ ಶಾಲೆಗಳಲ್ಲಿ ಎಸ್ಡಿಎಂಸಿ ಅಧ್ಯಕ್ಷರು ಗಾಂಧೀಜಿ ಹಾಗೂ ಅಂಬೇಡ್ಕರ್ ರ ಭಾವ ಚಿತ್ರ ಪೂಜಿಸಿ ಪುಷ್ಪಾರ್ಪಣಿ ಮಾಡಿ ದ್ವಜಾರೋಹಣ ಮಾಡಿದರು.
Be the first to comment