ಜಿಲ್ಲಾ ಸುದ್ದಿಗಳು
ಮಸ್ಕಿ
ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್. ಡಿ. ಎಂ. ಸಿ ಸಮಿತಿಯು ಶಾಲಾ ಮಕ್ಕಳೊಂದಿಗೆ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯಿತಿ ಕಡೆ ಹೊರಟು ಅಲ್ಲಿನ ಧ್ವಜಾರೋಹಣವನ್ನು ನೆರವೇರಿಸಿ ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆದಿಕಿನಾಳ ಬ್ಯಾಂಕ್ ನಲ್ಲಿ ಧ್ವಜಾರೋಹಣ ನೆರವೇರಿಸಿ ತದ ನಂತರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್. ಡಿ. ಎಂ. ಸಿ ಸಮಿತಿ, ಸೊಸೈಟಿ ಬ್ಯಾಂಕ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿ, ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಎಲ್ಲರು ಒಂದೆಡೆ ಸೇರಿ ಎಸ್. ಡಿ. ಎಂ. ಸಿ ಯ ನೂತನ ಅಧ್ಯಕ್ಷರಾದ ಗಂಗಣ್ಣ ಬಡಿಗೇರ ಇವರ ನೇತೃತ್ವದಲ್ಲಿ ಅತೀ ಸರಳತೆಯಿಂದ ಧ್ವಜಾರೋಹಣ ನೆರವೇರಿಸಿದರು.
ನಂತರ ನೂತನವಾಗಿ ರಚನೆ ಮಾಡಲಾದ ಎಸ್. ಡಿ. ಎಂ. ಸಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶಾಲೆಯ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಹಂಚಿ ನೆರೆದ ಅತಿಥಿಗಳಿಗೆ ಗೌರವಪೂರ್ವಕವಾಗಿ ಸತ್ಕರಿಸಲಾಯಿತು.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾರತಮಾತೇ ಹಾಗೂ ಸ್ವಾತಂತ್ರ್ಯಾ ಹೋರಾಟಗಾರರ ವೇಷ ಭೂಷಣ ಧರಿಸಿದ ಮಕ್ಕಳನ್ನು ನೋಡುವುದು ಮುದವೇನಿಸಿತು.ಇದೇ ಸಂದರ್ಭದಲ್ಲಿ ಶಾಲೆಯ ಎಸ್. ಡಿ. ಎಂ. ಸಿ ಸಮಿತಿಯ ಸರ್ವ ಸದಸ್ಯರು,ಪಂಚಾಯತ್ ಅಭಿವೃದ್ದಿ ಅಧಿಕಾರಿ ತಿಮ್ಮಣ್ಣ ಭೋವಿ, ರಾಜಣ್ಣ ಪರಡ್ಡಿ, ಮಲ್ಲಪ್ಪ ಗುರಿಕಾರ, ಹನುಮಂತ ಡಿ. ಎಸ್. ಎಸ್ ,ಬಸವರಾಜ ಡಿ. ಎಸ್. ಎಸ್, ಮು.ಗು.ಮಲ್ಲಮ್ಮ,ಶಾಲೆಯ ಶಿಕ್ಷಕರುಗಳಾದ ಶಿವಪ್ಪ, ದೇವಪ್ಪ, ಚಾಂದ್ ಖಾಜ, ಶ್ರೀಕಾಂತಮ್ಮ ಸೇರಿದಂತೆ ಗ್ರಾಮದ ಸಾರ್ವಜನಿಕರು ಸೇರಿದಂತೆ ಶಾಲೆಯ ಮಕ್ಕಳು ಇದ್ದರು.
Be the first to comment