ರಾಜ್ಯ ಸುದ್ದಿಗಳು
ಭಟ್ಕಳ
ಭಟ್ಕಳದ ಗ್ರಾಮೀಣ ಠಾಣೆ ಪೊಲೀಸರಿಂದ ಶನಿವಾರ ಅಕ್ರಮ ದನದ ಮೌಂಸ ಸಾಗಾಟ ಆರೋಪಿಗಳ ಬಂಧನ. 1) ಮೊಹಿದ್ದೀನ್ ರಾಶೀದ್ ತಂದೆ ಮಹ್ಮದ್ ರಿಯಾಜ್ ಸಾಧಾ ಪ್ರಾಯ : 28 ವರ್ಷ ಉದ್ಯೋಗ : ಸಮ್ಮರ್ ಹೊಟೇಲದಲ್ಲಿ ಕೆಲಸ ವಾಸ : ಕೋಕ್ತಿನಗರ, 2 ನೇ ಕ್ರಾಸ್, ಕೋಆಫಾರ್ಮ ಹತ್ತಿರ, ಭಟ್ಕಳ 2) ಹಸನ್ ಶಬ್ದ ತಂದೆ ಇಸ್ಮಾಯಿಲ್ ಖಾಜೀಯಾ ವಾಸ : ಮುಗ್ಗುಂಕಾಲೋನಿ, ಭಟ್ಕಳ ಇವರುಗಳು 3 ನೇ ಆರೋಪಿತನಾದ ಮುಜಾಫರ ತಂದೆ ಹುಸೇನ್ ಫಕ್ರು. ವಾಸ : ಮೂಸಾನಗರ, ಭಟ್ಕಳ ಇವರುಗಳ ಸಹಯೋಗದಲ್ಲಿ ಎಲ್ಲಿಯೋ ಜಾನುವಾರುಗಳನ್ನು ವಧೆ ಮಾಡಿ ಈ ದಿವಸ ದಿನಾಂಕ 21/05/2022 ರಂದು ಬೆಳಗ್ಗೆ ಸುಮಾರು 08-30 ಗಂಟೆಯ ಸಮಯಕ್ಕೆ ಬಿಳಿ ಬಣ್ಣದ ಮಾರುತಿ ಇಕೋ ವಾಹನ ನಂ : ಕೆ.ಎ 33/ಎಂ-8061 ನೇದರಲ್ಲಿ ಅ.ಕಿ : ಸುಮಾರು 70,000/- ರೂ ಮೌಲ್ಯದ ಸುಮಾರು 350 ಕೆ.ಜಿ ಆಗುವಷ್ಟು ಮೌಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಶಿರಾಅ ಚೆಕ್ ಪೊಸ್ಟದಲ್ಲ 1 ನೇ ಆರೋಪಿತನು ಸಿಕ್ಕಿದ್ದು ಹಾಗೂ 2 ನೇಯವನು ಸ್ಥಳದಿಂದ ಓಡಿ ಹೋಗಿದ್ದರಿಂದ ಒಟ್ಟು 3 ಜನರ ಮೇಲೆ ಪ್ರಕರಣ ದಾಖಲಾಗಿರುತ್ತದೆ.
ಈ ಕಾರಾಚರಣೆಯನ್ನು ಮಾನ್ಯ ಎಸ್.ಪಿ ಡಾ: ಸುಮನ್ ಡಿ ಪೆನ್ನೆಕರ್ ಹಾಗೂ ಹೆಚ್ಚುವರಿ ಎಸ್.ಪಿ ಶ್ರೀ ಬದರಿನಾಥ ಇವರ ನಿರ್ದೆಶನದಂತೆ ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ ಭಟ್ಕಳ ಗ್ರಾಮೀಣ ವೃತ್ತ ನಿರೀಕ್ಷರಾದ ಶ್ರೀ ಮಹಾಬಲೇಶ್ವರ, ಎಸ್. ಎನ್ ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಭರತಕುಮಾರ, ವಿ ಹಾಗೂ ಭಟ್ಕಳ ಗ್ರಾಮೀಣ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ದಿನೇಶ ದಾತೇಕರ, ದೀಪಕ.ಎಸ್.ನಾಯ್ಕ, ರಾಜು, ಎಸ್. ಗೌಡ , ನಾರಾಯಣ ಗೌಡ, ಸದಾಶಿವ ಕಟ್ಟಿಮನೆ, ರವರು ಈ ಕಾರಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಕರಣವನ್ನು ಭಟ್ಕಳ ಗ್ರಾಮೀಣ ಠಾಣೆಯ ಪಿ.ಎಸ್.ಐ ರತ್ನಾ, ಎಸ್ ರವರು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
Be the first to comment