ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಕಾರಿಗೆ ಯುವಕ ಬಲಿ, ನ್ಯಾಯಕ್ಕೆ ಒತ್ತಾಯ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ #ಮಾನವ_ಹಕ್ಕುಗಳ_ರಕ್ಷಣಾ_ಪರಿಷತ್‌ನ ರಾಜ್ಯ ಘಟಕದ ಪದಾಧಿಕಾರಿಗಳು ಶನಿವಾರ ಪೊಲೀಸ್ ಇಲಾಖೆಗೆ ಮನವಿ ನೀಡಿದರು.ಮೇ ೨೦ ರಂದು ಬೆಳಗ್ಗೆ ನಗರದ ಝೂ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಣೇಶ ನಗರದ ಯುವಕ ಚಿದಾನಂದ ಭೋವಿವಡ್ಡರ್ ಮೃತಪಟ್ಟಿದ್ದ ಘಟನೆ ನಡೆದಿದ್ದು ಅಪಘಾತದಲ್ಲಿ ಯುವಕನ ಯಾವುದೇ ತಪ್ಪುಗಳು ಇರಲಿಲ್ಲ. ಆದರೂ ಅಪಘಾತ ಪಡಿಸಿದ ವೈದ್ಯ #ಗಜಾನನ_ಭಟ್ ಮೃತ ಯುವಕನ ಮೇಲೆಯೇ ಪ್ರಕರಣ ದಾಖಲಿಸಿದ್ದಾನೆ. ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಕೂಡ ಚಿದಾನಂದ ಭೋವಿವಡ್ಡರ್ ತಪ್ಪಿಲ್ಲ ಎಂದೇ ಹೇಳುತ್ತಿದ್ದಾರೆ. ಮೃತ ಚಿದಾನಂದನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಜತೆಗೆ ಅಪಘಾತ ಪಡಿಸಿದ ವ್ಯಕ್ತಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

CHETAN KENDULI

ವೈದ್ಯ #ಗಜಾನನ_ಭಟ್ ನೀಡಿದ ದೂರಿನ ಮೇರೆಗೆ ಅಪಘಾತದಲ್ಲಿ ಮೃತಪಟ್ಟ ಯುವಕನ ಮೇಲೆ ತಕ್ಷಣವೇ ಪ್ರಕರಣ ದಾಖಲಿಸಿದ ಪೊಲೀಸರು.ಪೊಲೀಸರ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಮೃತನ ಕಡೆಯವರು #ಪೊಲೀಸ್_ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದರು ಹಲವು ನಾಟಕೀಯ ಬೆಳವಣಿಗೆಗಳ ನಂತರವಷ್ಟೇ ಆರೋಪಿ ವೈದ್ಯನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಗಣೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಶಳ್ಳಿ, ಪ್ರಮುಖರಾದ ದ್ಯಾಮವ್ವ ಹಾಗೂ ಇತರರಿದ್ದರು.

  ಪ್ರತ್ಯಕ್ಷದರ್ಶಿ ಶಿವಾನಂದ್ ದೇಶಳ್ಳಿ ಅವರು ಘಟನೆ ಕುರಿತು ಮಾತನಾಡಿ ಬೆಳಿಗ್ಗೆ 7.45 ರ ಸಮಯದಲ್ಲಿ ಘಟನೆ ನಡೆದಿದ್ದು ರಾಘವೇಂದ್ರ ಸರ್ಕಲ್ ಮಾರ್ಗವಾಗಿ ಬಂದ #ಡಾಕ್ಟರ್_ಗಜಾನನ_ಭಟ್ ಚಲಾಯಿಸುತ್ತಿದ್ದ ಕಾರು ಅವೇಮರಿಯ ಶಾಲೆ ಮಾರ್ಗದಲ್ಲಿ ಬರುತ್ತಿದ್ದ ಯುವಕನ ಮೇಲೆ ಹರಿದಿದೆ. ಯುವಕನ ತಲೆ ಮೇಲೆಯೇ ಕಾರಿನ ಮುಂದಿನ ಚಕ್ರ ಹರಿದು ಹಿಂದಿನ ಚಕ್ರದ ಬಳಿ ಯುವಕ ಸಿಲುಕಿದ್ದು ಕಾರಿನಿಂದ ಇಳಿದ #ಡಾಕ್ಟರ್_ಗಜಾನನ_ಭಟ್ ತಮ್ಮ ತಲೆಯನ್ನು ಒಮ್ಮೆ ಚಚ್ಚಿ ಕೊಂಡವರೆ ಯುವಕನ ಭುಜ ಹಿಡಿದು ಎಳೆದು ಇನ್ನೊಬ್ಬರ ಸಹಾಯದಿಂದ ತಮ್ಮದೇ ಕಾರಿನಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಆ ನಂತರ ಕಾರಿನಲ್ಲಿ ಆದ ರಕ್ತದ ಕಲೆಯನ್ನೆಲ್ಲ ತೊಳೆದು ಪೊಲೀಸ್ ಠಾಣೆಗೆ ಕಾರನ್ನು ತಂದು ಬಿಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

Be the first to comment

Leave a Reply

Your email address will not be published.


*