ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸುವತ್ತಾ ದಿಟ್ಟ ಹೆಜ್ಜೆ ಇಟ್ಟ ಮುಖ್ಯಾಧಿಕಾರಿ…!!!

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ರವರು ಸಿಬ್ಬಂದಿ ವರ್ಗದವರೊಂದಿಗೆ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ, ಬಟ್ಟೆ ಅಂಗಡಿ, ಬಾರ್ ಆಂಡ್ ರೆಸ್ಟೋರೆಂಟ್ ಸೇರಿದಂತೆ ಇನ್ನಿತರೇ ಅಂಗಡಿ ಮುಗಟ್ಟುಗಳಿಗೆ ದಾಳಿ ಮಾಡಿ ಪಾಸ್ಟಿಕ್ ಕವರ್, ಪ್ಲಾಸ್ಟಿಕ್ ಗ್ಲಾಸ್ ಗಳನ್ನು ವಶಕ್ಕೆ ಪಡೆದು ಎಲ್ಲಾ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಬಳಕೆ ಮತ್ತೆ ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪುರಸಭೆ ವ್ಯವಸ್ಥಾಪಕರಾದ ಸತ್ಯನಾರಾಯಣ, ಪ್ರಥಮ ದರ್ಜೆ ಅಧಿಕಾರಿ ಶಿವಣ್ಣ, ರಾಘವೇಂದ್ರ ಮೆದಿಕಿನಾಳ ಸಿಬ್ಬಂದಿ, ಪೌರ ಕಾರ್ಮಿಕರಾದ ಯಮನೂರಪ್ಪ ಮಸ್ಕಿ, ಮೌನೇಶ ಮುರಾರಿ, ರಾಮಸ್ವಾಮಿ ಮುರಾರಿ ಸೇರಿದಂತೆ ಇನ್ನಿತರೆ ಸಿಬ್ಬಂದಿಗಳಿದ್ದರು.

Be the first to comment

Leave a Reply

Your email address will not be published.


*