ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಿನ ಮುರ್ಡೇಶ್ವರದ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಸದಸ್ಯರ ಪರವಾನಿಗೆ ನವೀಕರಣಕ್ಕೆ ಸಾವಿರಕ್ಕೂ ಅಧಿಕ ರೂ ಹಣವನ್ನು ಪಡೆಯುತ್ತಿದ್ದಾರೆ ಎಂದು ಮುರ್ಡೇಶ್ವರದ ನಾಡದೋಣಿ ಮೀನುಗಾರರು ಬುಧವಾರ ಭಟ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮುರ್ಡೇಶ್ವರದ ನಾಡದೋಣಿ ಮೀನುಗಾರರ ಸಂಘದಲ್ಲಿ 300ಕ್ಕೂ ಅಧಿಕ ಮೀನುಗಾರರು ಇದ್ದಾರೆ. ಸದಸ್ಯರ ಪರವಾನಿಗೆ ನವೀಕರಣಕ್ಕೆ ಪ್ರತಿಯೊಬ್ಬ ಸದಸ್ಯರಿಂದ 1200 ರೂ ಪಡೆಯಲಾಗುತ್ತಿದೆ. ನೇರವಾಗಿ ಕಚೇರಿಗೆ ತೆರಳಿ ನೀಡಿದರೆ 100ರೂ ಪಡೆಯುತ್ತಾರೆ. ಒಬ್ಬ ಸದಸ್ಯರಿಂದ 1100 ರೂಗಳನ್ನು ಹೆಚ್ಚುವರಿಯಾಗಿ ಪಡಯುತ್ತಿರುವುದಕ್ಕೆ ನೂರಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೆ 2 ವರ್ಷಗಳಿಂದ ಕೋವಿಡ್ ಸಂಕಷ್ಟದಿದ ಮೀನುಗಾರರು ಹೊರ ಬಂದಿಲ್ಲ. ಕಳೆದ ತಿಂಗಳ ವರೆಗೂ ಕಡಲು ಪ್ರಕ್ಷಬ್ದವಿದ್ದರಿಂದ ಸರಿಯಾದ ಮೀನುಗಾರಿಕೆಯೂ ನಡೆದಿಲ್ಲ.ಇಂತಹ ಸಂದರ್ಭದಲ್ಲಿ ಪರವಾನಿಗೆ ನವೀಕರಣದ ನೆಪದಲ್ಲಿ ಸಾವಿರಕ್ಕೂ ಅಧಿಕ ರೂ ಹಣವನ್ನು ಪಡೆಯುತ್ತಿರುವದು ಸರಿಯಲ್ಲ ಎಂದು ನಾಡದೋಣಿ ಸಂಘದ ಮಾಜಿ ಸದಸ್ಯ ಆನಂದ ಹರಿಕಾಂತ ಆಕ್ರೋಶ ವ್ಯಕ್ತಪಡಿಸಿದರು
ಕಚೇರಿಯಲ್ಲಿ ನೂಕು ನುಗ್ಗಲು:-ಕಳೆದ ಕೆಲವು ದಿನಗಳಿಂದ ನಾಡದೋಣಿ ಮೀನುಗಾರರು ಮುರ್ಡೇಶ್ವರದಿಂದ ಭಟ್ಕಳ ಮೀನುಗಾರಿಕೆ ಕಚೇರಿಗೆ ಬಂದರೂ ಅರ್ಜಿಗಳನ್ನು ಸ್ವೀಕರಿಸಿಲ್ಲ. 5ರಿಂದ 6 ಬಾರಿ ಇದೆ ಸ್ಥಿತಿ ಪುನರಾವರ್ತನೆ ಆಗಿದೆ. ಬುಧವಾರ 150ಕ್ಕೂ ಅಧಿಕ ಮೀನುಗಾರರು ಒಮ್ಮೆಲೆ ಕಚೇರಿಗೆ ಬಂದಿದ್ದು ಅರ್ಜಿಗಳನ್ನು ಪಡೆಯಲು ಆರಂಭಿಸಿದ್ದಾರೆ. ಇದರಿಂದ ಕಚೇರಿಯಲ್ಲಿ ಒಮ್ಮೆಲೆ ನೂಕು ನುಗ್ಗಲು ಉಂಟಾಗಿದೆ. ಮೀನುಗಾರರನ್ನು ನಿಯಂತ್ರಿಸಲು ಕಚೇರಿ ಸಿಬ್ಬಂದಿ ಪ್ರಯಾಸ ಪಡುವಂತಾಯಿತು.
ಈ ಬಗ್ಗೆ ಸಿ. ಚೇತನ, ಮೀನುಗಾರಿಕೆ ಸಹಾಯಕ ನಿರ್ದೇಶಕ ಮಾತನಾಡಿ ತಾಲೂಕಿನ ಮುರ್ಡೇಶ್ವರದ ನಾಡದೋಣಿ ಮೀನುಗಾರರು ಸದಸ್ಯರಿಂದ 1200ರೂ ಪಡೆಯುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಅದು ಅವರ ಸಂಘಕ್ಕೆ ಸೇರಿದ ವಿಚಾರ. ಪರವಾನಿಗೆ ನವೀಕರಣಕ್ಕೆ ಸರ್ಕಾರ ಕೇವಲ 100ರೂ ನಿಗದಿ ಮಾಡಿದೆ. ಮೀನುಗಾರರು ನೇರವಾಗಿ ನಮ್ಮ ಕಚೇರಿಗೆ ಬಂದರೆ ಅರ್ಜಿಗಳನ್ನು ಪಡೆದು ನವೀಕರಣ ಮಾಡಿಕೋಡಲಾಗುವುದು. ಅಲ್ಲದೆ ಅವರಿಗೆ ಸೇರಬೇಕಾದ ಎಲ್ಲಾ ಸೌಲಭ್ಯಗಳು ಹಿಂದಿನAತೆಯೆ ದೊರೆಯತ್ತವೆ ಎಂದರು.ಮಾವಳ್ಳಿ 2 ಸದಸ್ಯ ರವಿ ಹರಿಕಾಂತ, ವಿಮಲಾ ಗಣೇಶ ಹರಿಕಂತ್ರ ಮೀನುಗಾರರಾದ ಗಣೇಶ ನಾಗಪ್ಪ ಹರಿಕಾಂತ, ಶ್ರೀಧರ ಹರಿಕಾಂತ ರಾಜು ಹರಿಕಾಂತ, ಪುರಂದರ ಹರಿಕಾಂತ, ಲೋಕೇಶ ಹರಿಕಾಂತ ಇದ್ದರು.
Be the first to comment