ಜಿಲ್ಲಾ ಸುದ್ದಿಗಳು
ಕುಮಟಾ
ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೈಗೊಂಡ ಪರಿಷತ್ ಚುನಾವಣೆಯ ಪ್ರಚಾರದಲ್ಲಿ ಸೊರಬಾ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಹಾಗೂ ಕುಮಟಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತದಾರರನ್ನು ಭೇಟಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ವಿನಂತಿಸಿದರು. ಕುಮಟಾ ತಾಲೂಕಿನ ದೀವಗಿ, ಮಿರ್ಜಾನ್, ಕೋಡ್ಕಣಿ, ಬರ್ಗಿ, ಹಿರೇಗುತ್ತಿ ಹಾಗೂ ಗೋಕರ್ಣ, ನಾಡುಮಾಸ್ಕೇರಿ, ಹನೇಹಳ್ಳಿ, ತೊರ್ಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಚಾರ ಸಭೆ ನಡೆಸಿದರು. ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಅಂಥ ಸಂದರ್ಭದಲ್ಲಿ ಭೀಮಣ್ಣ ಎಂಎಲ್‌ಸಿ ಆಗಿದ್ದರೆ, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಹಾಯಕಾರಿಯಾಗುತ್ತದೆ ಎಂದು ತಿಳಿಸುವ ಮೂಲಕ ಮತದಾರರಲ್ಲಿ ಕಾಂಗ್ರೆಸ್ ಪರ ಮತ ಯಾಚಿಸಿದರು.ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮಾತನಾಡಿ,”ನಮ್ಮ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಳೆದ ೧೩ ವರ್ಷಗಳಿಂದ ಕ್ರಿಯಾಶೀಲರಾಗಿ ಕೆಲಸ ಮಾಡಿ ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಬಡವರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಕುರಿತು ಮೇಲ್ಮನೆಯಲ್ಲಿ ಧ್ವನಿ ಎತ್ತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭೀಮಣ್ಣ ನಾಯ್ಕ ಅವರ ಗೆಲುವು ಅನಿವಾರ್ಯವಾಗಿದೆ ಎಂದರು.
ಮಾಜಿ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಅವರು ಮಾತನಾಡಿ,”ಕೆಪಿಸಿಸಿ ನಿರ್ದೇಶನದಂತೆ ನಾನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ವಿಧಾನಪರಿಷತ್ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಪ್ರಚಾರಕ್ಕಾಗಿ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿಗಳು, ನಮ್ಮ ತಂದೆ ದಿ. ಬಂಗಾರಪ್ಪಾಜೀ ಯವರ ಅಭಿಮಾನಿಗಳು ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಭಾಗಗಳಿಗೆ ಭೇಟಿ ನೀಡುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಕಳೆದ ಅವಧಿಯಲ್ಲಿ ಶಾರದಾ ಮೋಹನ್ ಶೆಟ್ಟಿಯವರು ಹಾಗೂ ನಾನು ವಿಧಾನಸಭೆಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದೇವೆ. ಅಂದು ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬ ಶಾಸಕರಿಗೂ ಉತ್ತಮ ಅನುದಾನ ನೀಡಿ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡಿತ್ತು. ಆದರೆ ಇಂದಿನ ಸರ್ಕಾರ ಸೂಕ್ತ ಅನುದಾನ ನೀಡದೇ, ಕೇವಲ ಆಶ್ವಾಸನೆಯನ್ನು ನೀಡುವುದರಲ್ಲೆ ಕಾಲ ಕಳೆಯುತ್ತಿದೆ. ಪಂಚಾಯತಿಗಳ ಅಭಿವೃದ್ಧಿಯಂತೂ ದೂರದ ಮಾತಾಗಿದೆ. ಇಂದು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರಿಗೆ ಮನೆಯಿಂದ ಹೊರಬಾರದ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಸರ್ಕಾರಕ್ಕೆ ಪಂಚಾಯತಿಗಳಿಗೆ ಇನ್ನೂವರೆಗೂ ವಸತಿ ಯೋಜನೆಯನ್ನು ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ, ಅನುದಾನಗಳನ್ನು ಪಡೆಯಲು ನಮ್ಮ ಅಭ್ಯಥಿ ಭೀಮಣ್ಮ ನಾಯ್ಕ ಅವರನ್ನು ಗೆಲ್ಲಿಸುವುದು ನಿಮ್ಮೆಲ್ಲರ ಜವಾಬ್ದಾರಿ” ಎಂದರು
ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ಅವರು ಮತದಾರರಲ್ಲಿ ಭೀಮಣ್ಣ ನಾಯ್ಕ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಅಲ್ಲದೇ ಮತದಾನ ಮಾಡುವ ಪ್ರಕ್ರಿಯೆಯ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ರತ್ನಾಕರ ನಾಯ್ಕ, ಆರ್.ಹೆಚ್ ನಾಯ್ಕ, ಸುರೇಖಾ ವಾರೇಕರ್, ಮುಜಾಫರ್ ಸಾಬ್, ದತ್ತು ಕೋಡ್ಕಣಿ, ಹನೀಫ್ ಸಾಬ್, ಶಶಿಕಾಂತ ನಾಯ್ಕ, ಸಚಿನ್ ನಾಯ್ಕ, ಸುಮಿತ್ರಾ ಗೌಡ, ಜಯಂತ ನಾಯ್ಕ, ಸುಮಿತ್ರಾ ನಾಯ್ಕ, ಆನಂದು ನಾಯಕ, ಜಗದೀಶ್ ಹರಿಕಂತ್ರ, ಬೀರಣ್ಣ ನಾಯಕ, ಗೋವಿಂದ ನಾಯಕ, ಮಂಗಲಾ ನಾಯಕ, ಹುಸೇನ್ ಸಾಬ್, ದೀಪಕ್ ಭಟ್, ಸುರೇಶ್ ಪಟಗಾರ, ರಾಮ ಪಟಗಾರ, ಸಂತೋಷ ನಾಯ್ಕ, ಜಯರಾಮ ನಾಯ್ಕ, ನಾರಾಯಣ ನಾಯ್ಕ, ವಿಜಯ್ ಹೊಸ್ಕಟ್ಟ, ಮುರ್ಕುಂಡಿ ಗೌಡ, ಶಾಂತಾರಾಮ ನಾಯ್ಕ, ಮಹಾಬಲೇಶ್ವರ ಗೌಡ, ಪಂಚಾಯತ್ ಸದಸ್ಯರು, ಹಿರಿಯ ಕಿರಿಯ ಮುಖಂಡರು ಉಪಸ್ತಿತರಿದ್ದರು.
Be the first to comment