ಧರೋಡೆ, ಕಳ್ಳತನ ಪ್ರಕರಣದಲ್ಲಿ ಜಪ್ತು ಮಾಡಿದ ವಸ್ತು ಪ್ರದರ್ಶನ…

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಉತ್ತರ ಕನ್ನಡ ಜಿಲ್ಲೆಯಲ್ಲಿ 20-21 ನೇ ಸಾಲಿನಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿಪಡಿಸಿಕೊಂಡ ಕಳವು ವಸ್ತುಗಳ ಪ್ರದರ್ಶನ, ಪ್ರಕರಣ ಬೇಧಿಸಲು ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಣೆ ಕಾರ್ಯಕ್ರಮ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ಸುಮಾರು 204 ಪ್ರಕರಣಗಳು ದಾಖಲಾಗಿದ್ದು, 97 ಪ್ರಕರಣಗಳನ್ನು ಪತ್ತೆ ಮಾಡಿ,ಶೇ 50 ರಷ್ಟು ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈವರೆಗೆ ಒಟ್ಟೂ 75 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಒಟ್ಟೂ 18 ಕೊಲೆ ಪ್ರಕರಣಗಳು ದಾಖಲಾಗಿದ್ದು,ಶೀಘ್ರದಲ್ಲಿ ತನಿಖೆ ಕೈಗೊಂಡು ಮಾಹಿತಿ ಕಲೆಹಾಕಿ ಜಿಲ್ಲಾ ಪೊಲೀಸರು ಆರೋಪಿತಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

CHETAN KENDULI

2021 ನೇ ಸಾಲಿನಲ್ಲಿ ಮುಂಡಗೋಡದಲ್ಲಿ ಅಸ್ತಿಪಂಜರವಾಗಿ ಯಾವುದೇ ಕುರುಹುಗಳಿಲ್ಲದೇ ಸಿಕ್ಕ ಅಪರಿಚಿತ ಶವದ ಬಗ್ಗೆ ತನಿಖೆ ಕೈಗೊಂಡು ಆರೋಪಿತರನ್ನು ಪತ್ತೆ ಹಚ್ಚಲಾಗಿದೆ. ಮುಂಡಗೊಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿತರು ಬಂಗಾರ ನೀಡುವುದಾಗಿ ಹೇಳಿ, 22,50,000- ನಗದು ಹಣವನ್ನು ದರೊಡೆ ಮಾಡಿದ್ದು, ಇನ್ನೊಂದು ದರೋಡೆ ಪ್ರಕರಣದಲ್ಲಿ ಕಾತೂರ ರಸ್ತೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಹಣವನ್ನು ವಸೂಲಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣದಲ್ಲಿ ಚುರುಕುತನದ ತನಿಖೆಯಿಂದ ಆರೋಪಿತರನ್ನು ದಸ್ತಗಿರಿ ಮಾಡಲಾಗಿತ್ತು.ಜಿಲ್ಲೆಯಲ್ಲಿ 10ಸುಲಿಗೆ ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.36 ಹಗಲು ಹಾಗೂ ರಾತ್ರಿ ಕಳವು ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 34 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ವರ್ಷ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಳುವಿಗೆ ಸಂಬಂಧಪಟ್ಟಂತೆ 7 ಆರೋಪಿತರನ್ನು ದಸ್ತಗಿರಿ ಮಾಡಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 18 ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು 12 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟೂ12ವಾಹನ ಕಳುವು ಪ್ರಕರಣ, 21 ಸಾದಾ ಕಳುವು ಪ್ರಕರಣ ಪತ್ತೆ ಹಚ್ಚಲಾಗಿದೆ.ಇದೇ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ನಾರಾಯಣ ಮಡಿವಾಳ, ಹೆಡ್ ಕಾನ್ ಸ್ಟೇಬಲ್ ಗಳಾದ ರಾಮಾ ಎಮ್.ಕುದ್ರಗಿ, ಕರಬಸಪ್ಪ ಇಂಗಳಸೂರ, ರಮೇಶ ಕೂಡಲ, ಕಾನ್ ಸ್ಟೇಬಲ್ ಗಳಾದ, ಯಶ್ವಂತ ಬಿಳಗಿ, ಮೋಹನ ಗಾವಡಿ ಅವರಿಗೆ ನಗದು ಬಹುಮಾನ ಹಾಗೂ ಪ್ರಸಂಶನಾ ಪತ್ರವನ್ನು ಡಾ.ಸುಮನ್ ಪನ್ನೇಕರ್ ವಿತರಿಸಿದರು.

Be the first to comment

Leave a Reply

Your email address will not be published.


*