ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳದ ಕುಂದು ಕುರುತೆಗಳ ಬಗ್ಗೆ ಚರ್ಚಿಸಲಾಯಿತು. ಚರ್ಚೆಯಲ್ಲಿ ರಾಷ್ಟೀಯ ಹೆದ್ದಾರಿಯಲ್ಲಿ ಜರಗುತ್ತಿರುವ ಅ ವೈಜ್ಞಾನಿಕ ರಸ್ತೇ ಕಾಮಗಾರಿ ಹಾಗೂ ಭಟ್ಕಳ ರೈಲು ನಿಲ್ದಾಣದಲ್ಲಿ ಕೋವಿಡ್ ಪೂರ್ವದಲ್ಲಿ ಸಂಚರಿಸುತ್ತಿದ್ದ ರೈಲು ಮಾರ್ಗಗಳನ್ನು ಸೂಚನೆ ನೀಡದೇ ರದ್ದುಗೊಳಿಸಿರುವ ಬಗ್ಗೆ ಇಂದಿನ ಸಭೆಯಲ್ಲಿ ವಿಸ್ತಾರವಾಗಿ ವಿಷಯಗಳನ್ನು ಚರ್ಚಿಸಲಾಯಿತು ಕೋವಿಡ್ -19 ರ ಕಾರಣಗಳಿಂದಾಗಿ ಯಾವುದೇ ನೊಟಿಫಿಕೇಶನ್ ನಿಡದೇ ನೇತ್ರಾವತಿ ಎಕ್ಸಪ್ರೆಸ್ ರೈಲ್‌ನ ಭಟ್ಕಳ ನಿಲ್ದಾಣದ ನಿಲುಗಡೆಯನ್ನು ರದ್ದುಗೊಳಿಸಲಾಗಿದ್ದು, ಹಾಗೇ ಕಾರವಾರ ಯಶವಂತಪುರ ವಾರಕ್ಕೆ 3 ದಿನ ಇರುವ ಸಂಚಾರಿಸುತ್ತಿರುವ ರೈಲನ್ನು ಪ್ರತಿದಿನ ಸಂಚರಿಸುವ ಕುರಿತು ಮತ್ತು ಮಂಗಳುರು-ಮಡಗಾಂವ ಸಂಚಾರದ ಡೆಮೋ ರೈಲನ್ನು ಎಕ್ಸಪ್ರೆಸ್ ಮಾಡಿ ಸಂಚಾರಿಸುತ್ತಿರುವು ರದ್ದುಗೋಳಿಸಿ ಪುನಃ ಡೆಮೋ ರೈಲನ್ನು ಪುನಃ ಆರಂಬಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಈ ಸಂಧರ್ಭದಲ್ಲಿ ಚರ್ಚೆಯಲ್ಲಿ ಪಾಲ್ಗೋಡು ಮಾತನಾಡಿದ ಶ್ರೀ ಮಂಜುನಾಥ ಪ್ರಭು ಬೇರೇ ಜಿಲ್ಲಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಅರಂಭ ಶೂರರೂ ಅದನ್ನು ಕೊನೇಯವರೆಗೆ ನಡೆಸಿಕೋಡು ಹೋಗಲು ಇಚ್ಛಾಶಕ್ತಿಯ ಕೊರತೆ, ರಾಜಕೀಯ ಮತ್ತು ಜಾತಿಯತೆಯಿಂದಾಗಿ ಅಭಿವೃದ್ದೀ ಕುಂಠಿತ ಗೊಳ್ಳುತ್ತೀದೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದರು. ಅದೇ ರೀತಿ ವೆಂಕಟೇಶ ನಾಯ್ಕ ಮತ್ತು ಸತೀಶ ಕುಮಾರ ಮಾತನಾಡಿ ಭಟ್ಕಳದಿಂದ ಹಾದುಹೋಗುವ ರಾಷ್ಟೀಯ ಹೆದ್ದಾರಿಯ ಕಾಮಗಾರಿ ಅವೈಜ್ಞಾನಿಕ ವಾಗಿದೆ .ಈ ಬಗ್ಗೆ ಎಸಿ ಯಾ ರಸ್ತೇ ಪ್ರಾಧಿಕಾರದವರಲ್ಲಿ ಕೇಳಿದರೇ ಯಾವೂದೇ ರಿತಿ ಸೂಕ್ತ ಉತ್ತರ ಸಿಗದೇ ಹೌಹಾರಿಕೆಯ ಉತ್ತರ ದೊರೆಯುತ್ತದೆ ಎಂದರು. ಹಾಗೇಯೆ ಈ ರಸ್ತೇ ಕಾಮರಗಾರಿಯಿಂದಾಗಿ ಕಳೆದ 3 ದಿನಗಳ್ಲಿ 5 ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಡೆದಿದೆ ಎಂದರು. ಈ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಎಸಿಯವರಲ್ಲಿ ಸೂಕ್ತ ಮಾಹಿತಿ ಕೇಳಲಾಗುವುದು ಎಂದರು. ಸಬೇಯ ನಂತರ ಭಟ್ಕಳದ ರೈಲ್ವೇ ನಿಲ್ದಾಣಕ್ಕೆ ತೆರಳಿ ಸ್ಟೇಷನ್ ಮಾಸ್ಟರ ಮುಖಾಂತರ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಮತ್ತೂ 15 ದಿಗಳೊಳಗಾಗಿ ಮಾಹಿತಿ ನೀಡುವಂತೆ ಮನವಿ ಪ್ರತವನ್ನು ಸಲ್ಲಿಸಲಾಯಿತು. ಸಮೀತಿಯ ಕಾರ್ಯದರ್ಶಿ ಕೃಷ್ಣಾನಂದ ಪ್ರಭು ಜನರಿಗೆ ಸೂಕ್ತ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಸೇವಾವಾಹಿನಿಯ ನರೇಂದ್ರ ನಾಯಕ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಪರಿಷತ್ ನ ಸದಸ್ಯರಾದ ಶಂಕರ ಶೆಟ್ಟಿ, ರೈಲ್ವೇ ಹೊರಾಟ ಸಮೀತಿಯ ಪ್ರಕಾಶ ಪ್ರಭು, ನಾಗರಿಕ ಹಿತರಕ್ಷಣಾ ಹೋರಾಟ ಸಮೀತಿಯ ಗಣಪತಿ ಪ್ರಭು, ಲೆಕ್ಕ ಪರಿಷೋಧಕರಾಧ ಮಂಜುನಾಥ ಪ್ರಭು, ಜೆಸಿಆಯ್ ನ ನಾಗರಾಜ ಶೇಟ್, ಎಎನ್ ಪೈ, ಸುರೇಂರ ಭಟ್ಕಳಕರ, ಡಿ.ಎನ್ ಭಟ್ಕಳ, ವಾಸುದೇವ ಪ್ರಭು, ವೇಂಕಟೇಶ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
Be the first to comment