ರಾಜ್ಯ ಸುದ್ದಿಗಳು
ದೇವನಹಳ್ಳಿ
ಕನ್ನಡಿಗರನ್ನು ಕೆರಳಿಸುವಂತೆ ನಡೆದುಕೊಂಡಿರುವ ಮಹಾರಾಷ್ಟ್ರದ ಎಂಇಎಸ್ ಪುಂಡರನ್ನು ಈ ಕೂಡಲೇ ಬಂಧಿಸಬೇಕು ಎಂದು ಬಿಕೆಎಸ್ ಪ್ರತಿಷ್ಠಾನ ಅಧ್ಯಕ್ಷ ಬಿ.ಕೆ.ಶಿವಪ್ಪ ಒತ್ತಾಯಿಸಿದರು.ದೇವನಹಳ್ಳಿ ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಬಿಕೆಎಸ್ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಒಕ್ಕೂಟದ ವ್ಯವಸ್ಥೆಯಲ್ಲಿ ಭಾರತ ದಏಶ ಬಹು ವಿವಿಧ ಸಂಸ್ಕೃತಿಗಳನ್ನು ಹೊಂದಿದೆ. ನಾಡು, ನುಡಿ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಯಾವತ್ತೂ ಹಿಂಜರಿಯದ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಎಂಇಎಸ್ ಪುಂಡರು ನಡೆದುಕೊಂಡಿರುವುದು ಸಾಮಾಜಿಕವಾಗಿ ಕನ್ನಡಿಗರನ್ನು ಕೆಂಡಮಂಡಲವನ್ನಾಗಿಸಿದೆ. ಇಂತಹ ಪುಂಡರನ್ನು ಸಾಮಾಜದಲ್ಲಿ ಬದುಕುವ ಹಕ್ಕು ಇಲ್ಲ. ಕೂಡಲೇ ಇಂತಹವರನ್ನು ಬಂಧನಕ್ಕೊಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಾರ್ವಭೌಮತ್ವವನ್ನು ಗೌರವಿಸಬೇಕೆಂದು ಸಂವಿಧಾನ ನಮಗೆ ತಿಳಿಸಿಕೊಟ್ಟಿದೆ. ಹೀಗಿರುವಾಗ ಮಹಾರಾಷ್ಟ್ರದ ಕೆಲ ಕಿಡಿಗೇಡಿಗಳು ಕನ್ನಡಿಗರ ಅಸ್ಮಿತೆಯನ್ನು ಕೆಣಕುವ ಕೆಲಸಕ್ಕೆ ಕೈಹಾಕಿದ್ದಾರೆ. ಕನ್ನಡಿಗರು ಹೃದಯಲ್ಲಿ ಪೂಜಿಸುವ ಭಾಹುಟವನ್ನು ಸುಟ್ಟು ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಂಡಿದ್ದಾರೆ. ಇಂತಹ ಬೆಳವಣಿಗೆ ದೇಶದಲ್ಲಿ ಮರುಕಳಿಸದಂತೆ ಎಚ್ಚರವಹಿಸುವುದು ಅತ್ಯಾವಶ್ಯಕವಾಗಿರುತ್ತದೆ. ದುಷ್ಕರ್ಮಿಗಳು ಯಾರೇ ಆಗಲಿ ಕೂಡಲೇ ಬಂಧಿಸಿ, ಕಾನೂನಿನಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರ ಮುಖೇನ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಅವರಿಗೆ ಮನವಿ ಪತ್ರವನ್ನು ನೀಡಿದರು.
ಬಾಕ್ಸ್ಒತ್ತಾಯಗಳು:ಎಂಇಎಸ್ ಸಂಘಟನೆಯನ್ನು ರದ್ದುಗೊಳಿಸಬೇಕುಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಬಂಧಿಸಬೇಕುಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಲು ಸಹಕರಿಸಿದವರನ್ನು ಗಡಿಪಾರು ಮಾಡಬೇಕುಸರಕಾರದ ಹಂತದಲ್ಲಿ ಇಂತಹವರಿಗೆ ತಕ್ಕಪಾಠವನ್ನು ಕಲಿಸಬೇಕುಪ್ರತಿಭಟನೆಯಲ್ಲಿ ಬಿಕೆಎಸ್ ಪ್ರತಿಷ್ಠಾನದ ತಾಲೂಕು ಸ್ವಯಂ ಸೇವಕ ಪ್ರಕಾಶ್, ಕುಂದಾಣ ಹೋಬಳಿ ಅಧ್ಯಕ್ಷ ವೆಂಕಟೇಶ್, ಕಾರ್ಯಾಧ್ಯಕ್ಷ ಯೋಗೇಶ್‌ಗೌಡ, ಉಪಾಧ್ಯಕ್ಷ ಮುನೇಗೌಡ, ಕುಂದಾಣ ಗ್ರಾಪಂ ಘಟಕದ ಅಧ್ಯಕ್ಷ ಗೋವಿಂದಸ್ವಾಮಿ, ಕಾರ್ಯಾಧ್ಯಕ್ಷ ಅಂಬರೀಶ್ ಉಪಾಧ್ಯಕ್ಷ ಮಧು, ಜಯಕುಮಾರ್, ಜಾಲಿಗೆ ಗ್ರಾಪಂ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಜಯಕುಮಾರ್, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಹಾಗೂ ಜಾಲಿಗೆ ಗ್ರಾಪಂ ಸದಸ್ಯೆ ವಿಜಯ, ಕುಂದಾಣ ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ, ಕಾರ್ಯದರ್ಶಿ ಚಂದ್ರಕಲಾ, ಮಂಜುನಾಥ್, ಚಾಂದ್ ಪಾಶ, ಮುನಿರಾಜು, ಶೇಖರ್, ಮುರಳಿ ಮತ್ತಿತರರು ಉಪಸ್ಥಿತರಿದ್ದರು.
Be the first to comment