ಅಲೆಮಾರಿ ಸಂಜೆ ಟೆಂಟ್‌ಶಾಲೆ, ಲಿಂಗಸಗೂರು ವಿದ್ಯಾರ್ಥಿ ಯುವ ಹೋರಾಟಗಾರ ಶಶಿಕುಮಾರ್ ಹಾಗೂ ಶಿವರಾಜ್ ಮೋತಿ ಭೇಟಿ..!!!

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ:

CHETAN KENDULI

ಕ್ರಾಂತಿಗೀತೆ ಬರಹಗಾರ, ಹಾಡುಗಾರ ಪ್ರಶಾಂತ್ ದಾನಪ್ಪ ಮಸ್ಕಿ ಸಾರಥ್ಯದಲ್ಲಿ ನಡೆಯುತ್ತಿರುವ ಅಲೆಮಾರಿ ಸಂಜೆ ಟೆಂಟ್ ಶಾಲೆಗೆ ನಿನ್ನೆ ಮಂಗಳವಾರ ಭೇಟಿ ನೀಡಿ ಸುಮಾರು 36 ಮಕ್ಕಳಿಗೆ ಕನ್ನಡ ಸುಲಭ ಕಲಿಕಾ ಅಂಕಲಿಪಿಗಳನ್ನು ಉಚಿತವಾಗಿ ನೀಡಿ, ಶಿಕ್ಷಣ ಮಹತ್ವವನ್ನು ವಿವರಿಸುತ್ತಾ ಶಿವರಾಜ್ ಮೋತಿ, ಶೋಷಿತ ಜನಾಂಗಕ್ಕೆ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಭಾಯಿ ಫುಲೆಯವರ ಶೈಕ್ಷಣಿಕ, ಸಾಮಾಜಿಕ ಕೊಡುಗೆಗಳ ಹಾಗೂ ಡಾ.ಬಿ.ಆರ್. ಅಂಬೇಡ್ಕರ್-ಜ್ಯೋತಿಭಾ‌ ಫುಲೆ-ಗಾಂಧಿ-ಬಸವಣ್ಣನವರ ಕುರಿತು ಮಾತಾಡಿ ಶಿಕ್ಷಣದ ಕುರಿತು ಮನವರಿಕೆ ಮಾಡಿಕೊಟ್ಟರು. ಸಮುದಾಯದವರೊಂದಿಗೆ ಶಶಿಕುಮಾರ್ ಮಾತಾಡುತ್ತಾ, ಯಾವುದೇ ಕಾರಣಕ್ಕೂ ಮಕ್ಕಳಿಗೆ ಶಾಲೆ ಬಿಡಿಸಬೇಡಿ, ನಿಮ್ಮ ವಸತಿ ವ್ಯವಸ್ಥೆಗಾಗಿಯೂ ಸಹ ಪ್ರಶಾಂತ ದಾನಪ್ಪ ಪ್ರಯತ್ನಿಸುತ್ತಿದ್ದು ನಿಮಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನೀವು ನಿಂತು ಸಂಘಟಿತರಾಗಿ ಇರಬೇಕೆಂದು ಹೇಳಿದರು.

ಮಕ್ಕಳಲ್ಲಿ ಮುಂದಿನ ಕನಸುಗಳನ್ನು ಬಿತ್ತಿ, ಮಕ್ಕಳೊಂದಿಗೆ ಸಮಯ ಕಳೆದು ಈ ಶಾಲೆಗೆ ಒಳ್ಳೆಯದಾಗಲಿ ಎಂದು ಹರ್ಷಿಸುತ್ತಾ, ಪ್ರಶಾಂತ ದಾನಪ್ಪ ಅವರಿಗೆ ಕರೆಮಾಡಿ ಅಲೆಮಾರಿ ಮಕ್ಕಳಲ್ಲಿ ಶಿಕ್ಷಣದ ಮೂಲಕ ಶಿಕ್ಷಣ ಕ್ರಾಂತಿ ಬಯಸಿ ಕಾರ್ಯರೂಪಕ್ಕೆ ತರುತ್ತಿರುವ ತಮಗೆ ಅಭಿನಂದನೆಗಳು, ತಮ್ಮ ಜೊತೆಗೆ ನಾವೂ ಇರುವೆವು ಎಂದು ಶುಭ ಹಾರೈಸಿದರು.

Be the first to comment

Leave a Reply

Your email address will not be published.


*