ರಾಜ್ಯ ಸುದ್ದಿಗಳು
ಮಸ್ಕಿ:
ಭಾರತಿಯ ಜನತಾ ಪಕ್ಷ ಅಧಿಕಾರಕ್ಕೆ ತರಲು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೆ ಪಕ್ಷ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಕರುನಾಡಿನ ಸ್ವಾಭಿಮಾನಿ ಬಿ ಶ್ರೀರಾಮುಲು ರವರು. ರಾಜ್ಯದಲ್ಲಿ ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ನಂತರ ಬಿಜೆಪಿ ಯಲ್ಲಿರುವ ಅತ್ಯಂತ ಜನ ಬೆಂಬಲ ಹೊಂದಿರುವ ನಾಯಕ ಬಿ. ಶ್ರೀರಾಮುಲು ರವರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ 50 ಕ್ಷೇತ್ರ ಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಸಿ ಕೊಂಡು ಬಂದ ಕೀರ್ತಿ ನಮ್ಮ ಸ್ವಾಭಿಮಾನಿ ಬಿ ಶ್ರೀರಾಮುಲು ರವರು ಅಂತಹ ಪ್ರಭಾವ ಹೊಂದಿರುವ ಜನ ನಾಯಕನಿಗೆ ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಯಲ್ಲಿ ಬಿ.ಶ್ರೀರಾಮುಲು ರವರಿಗೆ ಉಸ್ತುವಾರಿ ನೀಡದಿರುವುದು ತುಂಬಾ ನೋವಿನ ಸಂಗತಿಯಗಿದೆ. ಈ 100ಕ್ಕೆ 100 ರಷ್ಟು ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆ ಸೋಲು ಇಚ್ಛಿತ.
ರಾಜ್ಯ ರಾಜಕಾರಣದಲ್ಲಿ BSY ಹೊರತುಪಡಿಸಿ ಅತಿ ಹೆಚ್ಚು ಕ್ಷೇತ್ರದಲ್ಲಿ ಪ್ರವಾಸ ಮಾಡಲು ತಾಕತ್ ಇಲ್ಲದ ಮಾನ್ಯ ಸಚಿವರೇ ಹಾಗೂ ಶಾಸಕರೇ ಮುಂಖಡರೆ ಸರ್ಕಾರ ಇದ್ದಾಗ ನಿಮ್ಮ ಶಕ್ತಿತೋರಿಸಲು ಹೊರಟಿದ್ದಿರಿ ಬಿ.ಶ್ರೀರಾಮುಲು ರವರನ್ನು ಬಿಟ್ಟು ಚುನಾವಣೆ ನಡೆಸುವುದಾದರೆ ಮುಂದಿನ 2023 ರ ಸಾರ್ವತ್ರಿಕ ಚುನಾವಣೆಯನ್ನು ಶ್ರೀರಾಮುಲು ರನ್ನು ಬಿಟ್ಟು ಚುನಾವಣೆ ಎದುರಿಸಿ ಬಿಜೆಪಿಯ ನಾಯಕ ರೇ ನಿಮ್ಮ ತಾಕತ್ ನಾವು ನೋಡುತ್ತೇವೆ. ಇಲ್ಲವಾದರೆ ನಮ್ಮ ಸ್ವಾಭಿಮಾನಿ ಬಿ ಶ್ರೀರಾಮುಲು ರವರಿಗೆ ಉಸ್ತುವಾರಿ ನೀಡಬೇಕು. ಪ್ರತಿಯೊಂದು ಹಂತದಲ್ಲಿಯೂ ಬಿ.ಶ್ರೀರಾಮುಲು ಜೀ ರವರನ್ನು ಕಡೆಗಣಿಸುತ್ತಿದ್ದಿರಿ,ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಬಿ ಶ್ರೀರಾಮುಲು ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಆರ್. ಕೆ ನಾಯಕ ಎಚ್ಚರಿಕೆ ನೀಡಲಾಗುತ್ತದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
Be the first to comment