ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಮೆದೊಡ್ಡಬಸಪ್ಪ ಗೌಡ ಶಿವಪ್ಪಗೌಡ ಹಿರೇಗೌಡರ್ ಸಲ್ಲುತ್ತದೆ: ಬಸವರಾಜ ನಾಲತವಾಡ

ವರದಿ: ಬಸವರಾಜ ಕುಂಬಾರ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಒಂದು ಗ್ರಾಮ ಒಂದು ತಾಲೂಕು ಒಂದು ಜಿಲ್ಲೆ ಅಥವಾ ಒಂದು ರಾಜ್ಯದ ಪ್ರಗತಿ ಹೊಂದಬೇಕಾದರೆ ಸಮರ್ಥ ನಾಯಕತ್ವದ ವ್ಯಕ್ತಿತ್ವವನ್ನು ಹೊಂದಿರುವ ನಾಯಕ ಬೇಕಾಗುತ್ತದೆ ಅಂತ ನಾಯಕತ್ವದ ವ್ಯಕ್ತಿತ್ವವನ್ನು ಹೊಂದಿರುವಂತಹ ಮಹಾನ್ ವ್ಯಕ್ತಿ ಯಾರಾದರೂ ಇದ್ದರೆ ಅದು ದೊಡ್ಡಬಸಪ್ಪ ಗೌಡ ಹಿರೇಗೌಡರ್ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀ ಬಸವರಾಜ್ ನಾಲತ್ವಾಡ ಅಭಿಪ್ರಾಯಪಟ್ಟರು.

ನಾಲತವಾಡ ಸಮೀಪದ ಆಲೂರು ಗ್ರಾಮದ  ವೀರೇಶಗೌಡ ಹಿರೇಗೌಡರ್ ಇವರ ಮನೆಯಲ್ಲಿ ಜರುಗಿದ ಲಿಂಗೈಕ್ಯ ದೊಡ್ಡಬಸಪ್ಪ ಗೌಡ ಶಿವಪ್ಪಗೌಡ ಹಿರೇಗೌಡರ್ ಇವರ ಏಳನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1965ರಿಂದ ಪುಟ್ಟ ಕಿರಾಣಿ ಅಂಗಡಿಯಿಂದ ವ್ಯಾಪಾರ ಪ್ರಾರಂಭ ಮಾಡಿ 2014ರವರೆಗೆ ಅಂದರೆ ಐದು ದಶಕಗಳ ಕಾಲ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಗಲಿರುಳು ಶ್ರಮಿಸಿದ ಶ್ರೇಷ್ಠತೆ ಲಿಂಗಕ್ಕೆ ದೊಡ್ಡಬಸಪ್ಪ ಗೌಡ ಹಿರೇಗೌಡರ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಶಿಕ್ಷಕ  ಎಸ್ಎನ ಪೋಲೇಶಿ ಹಾಗೂ ಪ್ರಗತಿಪರ ರೈತ ಶ್ರೀಯುತ ಶ್ರೀಶೈಲಪ್ಪ ಬೂದಿಹಾಳ್ ರಾಚಯ್ಯ ಹಿರೇಮಠ್ ಉಪಸ್ಥಿತರಿದ್ದರು. ವೇದಮೂರ್ತಿ ಗದಗಯ್ಯ ನವರು ಹಿರೇಮಠ್ ಹಾಗೂ ವೇದಮೂರ್ತಿ ಸಂಗಯ್ಯ ನವರು ಹಿರೇಮಠ್ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ವೀರಶೈವ ಮಹಾಸಭೆಯ ತಾಲೂಕ ಅಧ್ಯಕ್ಷ  ಬಾಪುಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೀರೇಶ್ ಗೌಡ ಹಿರೇಗೌಡರ್ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಸ್ ಬಿ ಬಂಗಾರಿ ಶಿವಾನಂದ್ ಹಿರೇಗೌಡರ್ ಬಸವಂತಪ್ಪ ಹಿರೇಗೌಡರ್ ಮಲ್ಲಿಕಾರ್ಜುನ್ ಬೂದಿಹಾಳ್ ವೀರಪ್ಪಗೌಡ ಹಿರೇಗೌಡರ್ ವಿನೋದ್ ಹಿರೇಗೌಡರ್ ವೀರೇಶ್ವರ ಗೌಡರ್ ಮಲ್ಲು ಹಿರೇಗೌಡರ್ ವಿನಾಯಕ್ ಬೂದಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಯುವ ಪ್ರಶಸ್ತಿ ವಿಜೇತ ಶ್ರೀಯುತ ಶಿವಕುಮಾರಗೌಡ ಹಿರೇಗೌಡರ್ ಕಾರ್ಯಕ್ರಮ ನಿರೂಪಿಸಿದರು ಸಮಾಜಸೇವಕ ಶಿವಶಂಕರ ಹಿರೇಗೌಡರ್ ವಂದನೆಗಳನ್ನು ಸಲ್ಲಿಸಿದರು.

Be the first to comment

Leave a Reply

Your email address will not be published.


*