ಕಸವಿಲೇವಾರಿ ಘಟಕ ಕಾಮಗಾರಿ ಪರಿಶೀಲನೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಉಗನವಾಡಿ ಬಳಿಯ ಕೆಂಪಲಿಂಗನಪುರ ಗೇಟ್‌ನಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಸವಿಲೇವಾರಿ ಘಟಕ ಕಾಮಗಾರಿಯ ಸ್ಥಳಕ್ಕೆ ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.ಕನ್ನಮಂಗಲ ಗ್ರಾಪಂ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಕೆಂಪಲಿಂಗನಪುರ ಗ್ರಾಮದ ಸರ್ವೆ ನಂ.೭ರಲ್ಲಿ ೨ಎಕರೆ ೪ಗುಂಟೆ ಜಾಗದಲ್ಲಿ ಸರಕಾರದ ಅನುದಾನ ಸುಮಾರು ೮.೫ಲಕ್ಷ ರೂ. ವೆಚ್ಚದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪಾಯ ಕಾರ್ಯ ಮುಗಿದ್ದು, ಗೋಡೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನೊಂದು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

CHETAN KENDULI

ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮೀಕಾಂತ್, ಎಸ್.ಜಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ಎನ್.ಮಂಜುನಾಥ್, ಮುಖಂಡರಾದ ದುಬಾಯಿ ಮಂಜು, ಕೆಂಪತಿಮ್ಮನಹಳ್ಳಿ ರವಿ, ಉಗನವಾಡಿ ನಾರಾಯಣಸ್ವಾಮಿ, ಇಂಜಿನೀಯರ್ ಸುಬ್ಬಾರೆಡ್ಡಿ ಸೇರಿದಂತೆ ಹಲವಾರು ಇದ್ದರು.

Be the first to comment

Leave a Reply

Your email address will not be published.


*