ಜಿಲ್ಲಾ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗ್ರಾಪಂ ವತಿಯಿಂದ ರಾಷ್ಟ್ರ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ದೀಪ್ತಿವಿಜಯ್‌ಕುಮಾರ್ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಆನಂದ್.ಸಿ.ಎಂ, ಕೆಂಪರಾಜು, ಮುನಿಯಪ್ಪ, ಅಪ್ಪಯ್ಯ, ಪದ್ಮ, ರಾಧಮ್ಮ, ಗ್ರಾಪಂ ಕಾರ್ಯದರ್ಶಿ ನರಸಿಂಹಮೂರ್ತಿ, ಬಿಲ್‌ಕಲೆಕ್ಟರ್‌ಗಳಾದ ಮೂರ್ತಿ, ಆನಂದ್ ಕಂಪ್ಯೂಟರ್ ಆಪರೇಟರ್ ಮರಿಯಪ್ಪ(ರಾಜು), ಸಿಬ್ಬಂದಿಗಳಾದ ಮುನಿರಾಜು ಹಾಗೂ ಗ್ರಾಮಸ್ಥರು ಇದ್ದರು.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗ್ರಾಪಂ ವತಿಯಿಂದ ರಾಷ್ಟ್ರ ಧ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕಿ ವೇದಾವತಿ ನೆರವೇರಿಸಿದರು. ಶಾಲಾ ಮಕ್ಕಳಿಂದ ಗಣರಾಜ್ಯೋತ್ಸವ ದಿನದ ಬಗ್ಗೆ ಭಾಷಣ ಮಾಡಿಸಲಾಯಿತು. ಈ ವೇಳೆ ಸಹಶಿಕ್ಷಕಿ ಶೈಲಜ.ಎನ್, ಶಿಕ್ಷಕರಾದ ಬಸವರಾಜು, ಮಂಜುಳ.ಬಿ.ಎಂ, ಹೇಮಪ್ರಸನ್ನ, ಸಿದ್ರಾಮ ಭೋಸಲೆ, ವಿನಯಶ್ರೀ, ದಿವ್ಯಾಂಬರಿ ಹಾಗು ಮಕ್ಕಳು ಇದ್ದರು.
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಕೊಯಿರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಮುಖ್ಯೋಪದ್ಯಾಯ ಬಿ.ಎಸ್.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಕಿ ಡಯಾನ ಡಿಸೋಜಾ, ಶಿಕ್ಷಕರಾದ ಗಂಗಾಧರ್, ಜಯಶ್ರೀ, ಅನುಪವರ್, ಆಶಾ, ಸಿಬ್ಬಂದಿ ಜಿ.ನಾಗರಾಜು ಹಾಗೂ ಮಕ್ಕಳು ಇದ್ದರು. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಕೆಪಿಎಸ್ ಶಾಲೆಯ ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳು ಸಮವಸ್ತ್ರಗಳನ್ನು ಧರಿಸಿಕೊಂಡು ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.
Be the first to comment