ಜಾಗೃತಿಗಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ:ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನಕ್ಕೆ ಪೂಜಾರ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

18 ಹೋಬಳಿ ವ್ಯಾಪ್ತಿಯಯಲ್ಲಿ ಜಾಗೃತಿ ಅಭಿಯಾನ

ಮಾರ್ಚ 6 ರಿಂದ 20 ವರೆಗೆ ಎಲ್‍ಇಡಿ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಮಾ.7 ರಂದು ಸೀಗಿಕೇರಿ, ಭಗವತಿ, ಹಳ್ಳೂರ, ಬೇವೂರ, ಬೋಡನಾಯಕದಿನ್ನಿ, ಮಾ.8 ರಂದು ರಾಂಪೂರ, ನಾಯನೇಗಲಿ, ಚಿಕ್ಕ ಮ್ಯಾಗೇರಿ, ಬಿಸಲದಿನ್ನಿ, ಕೂಡಲಸಂಗಮ, ಮಾ.9 ರಂದು ಹಾವರಗಿ, ಮರೋಳ, ಕಂದಗಲ್ಲ, ಹಿರೇಶಿವನಗುತ್ತಿ, ಚಟ್ನಿಹಾಳ, ಮಾ.10 ರಂದು ಕರಡಿ, ಇಲಕಲ್ಲ, ಹೊಸೂರ, ಬಲಕುಂದ, ಗುಡೂರ, ಮಾ.11 ರಂದು ವಡಗೇರಿ, ಹೂವಿನಹಳ್ಳಿ, ಭೀಮನಗಡ, ಕಾಟಾಪೂರ, ಪಟ್ಟದಕಲ್ಲಿ, ಮಾ.12 ರಂದು ನಂದಿಕೇಶ್ವರ, ಮುರಡಿ, ಆಡಗಲ್ಲ, ಕಬ್ಬಲಗೇರಿ, ಮುತ್ತಲಗೇರಿ. ಮಾ.13 ರಂದು ಮುಷ್ಠಿಗೇರಿ, ಕರಡಿಗುಡ್ಡ ಎಸ್.ಎನ್., ಹಳಗೇರಿ, ಕೆರೂರ, ಹೂಲಗೇರಿವರೆಗೆ ಮಾ.14 ರಂದು ಬಂದಕೇರಿ, ಅನಗವಾಡಿ, ಕುಂದರಗಿ, ಕುಂದರಗಿ ತಾಂಡಾ, ಅರಕೇರಿ ತಾಂಡಾ, 15 ರಂದು ಹಿನ್ನಿಹಾಳ, ಗಿರಿಸಾಗರ, ಹೆಗ್ಗೂರ, ಬೀಳಗಿ ಕ್ರಾಸ್, ಸೊನ್ನ, 16 ರಂದು ಗಲಗಲಿ, ಕೋಲೂರ, ಸಾವಳಗಿ, ನಾಕೂರ ಆರ್.ಸಿ, ಟಕ್ಕಳಕಿ ಕ್ರಾಸ್, 17 ರಂದು ಜಮಖಂಡಿ, ಹೊನ್ನೂರ, ಕಡಪಟ್ಟಿ, ಯಲಹಟ್ಟಿ, ಬನಹಟ್ಟಿ, 18 ರಂದು ರಬಕವಿ, ಹನಗಂಡಿ, ತೇರದಾಳ, ಚಿಮ್ಮಡ, ಮಹಾಲಿಂಗಪೂರ, 19 ರಂದು ಬೆಳಗಲಿ, ನಾಗರಾಳ, ಮುಗಳಖೋಡ, ಶಿರೋಳ, ಮುಧೋಳ, 20 ರಂದು ಜೀರಗಾಳ, ತಿಮ್ಮಾಪೂರ, ಮುದ್ದಾಪೂರ ಲೋಕಾಪೂರ, ಲಕ್ಷಾನಟ್ಟಿ ವರೆಗೆ ಸಂಚರಿಸಲಿದೆ.

ಬಾಗಲಕೋಟೆ: ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಾರ್ಚ 6 ರಿಂದ 20 ವರೆಗೆ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ ಅಭಿಯಾನಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು.

ರವಿವಾರ ವಿದ್ಯಾಗಿರಿ ಸರ್ಕಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಬಾಲ್ಯವಿವಾಹ ನಿಷೇಧ ಕುರಿತಂತೆ ಎಲ್‍ಇಡಿ ವಾಹನದ ಮೂಲಕ ಕಿರು ಚಿತ್ರಗಳನ್ನು ಪ್ರಸಾರದಿಂದ ನೆರೆದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ವಿದ್ಯಾರ್ಥಿಗಳು ವಿದ್ಯಾಗಿರಿ ಸರ್ಕಲ್‍ನಲ್ಲಿ ಬೃಹತ್ ಪ್ರಮಾಣದ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿತು. ವಿದ್ಯಾರ್ಥಿಗಳು ಬಾಲ್ಯವಿವಾಹ ನಿಷೇಧ ಕುರಿತು ಘೋಷಣೆಗಳನ್ನು ಕೂಗಿದರು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ, ಮದುವೆ ಅಂತರ 18ರ ನಂತರ, ಬಾಲ್ಯವಿರಲಿ ನಿರಂತರ, ಬಾಲ್ಯ ವಿವಾಹ ಸಂರಕ್ಷಣೆ ಎಲ್ಲರ ಹೊಣೆ, ಬಾಲ್ಯವಿವಾಹ ನಿಲ್ಲಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸೇರಿದಂತೆ ಅನೇಕ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು. ನಂತರ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಿ ಮಾತನಾಡಿ ಜಾಗೃತಿ ಅಭಿಯಾನ 15 ದಿನಗಳ ಕಾಲ ನಿರಂತರ ನಡೆಯಲಿದ್ದು, ಎಲ್‍ಇಡಿ ವಾಹನದ ಮೂಲಕ 18 ಹೋಬಗಳ ವ್ಯಾಪ್ತಿಯಲ್ಲಿ ಸಂಚರಿಸಿ ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಲಿದೆ. ಪ್ರತಿ ದಿನ 3 ಗ್ರಾಮಗಳಿಗೆ ತೆರಳಿ ಪದರ್ಶನ ನೀಡಲಾಗುತ್ತಿದೆ. ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಎಲ್‍ಇಡಿ ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಸಿದ್ರಾಮೇಶ್ವರ ಉಕ್ಕಲಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಶಿಲ್ಪಾ ಹಿರೇಮಠ, ದಸ್ತಗಿರಿಸಾಬ ಮುಲ್ಲಾ, ಸಾವಿತ್ರಿ ಗುಗ್ಗರಿ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕರಿ ಜಯಮಾಲಾ ದೊಡಮನಿ, ಬಾಲ್ಯವಿವಾಹ ಕಾರ್ಯಕ್ರಮ ಅಧಿಕಾರಿ ಎಸ್.ಡಿ.ಚನ್ನಪ್ಪಗೌಡ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*